ಬಿಎಸ್-6 ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಬಿಎಸ್-6 ಎಂಜಿನ್ ಕಾರುಗಳಲ್ಲಿ ಸದ್ಯ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಮೊದಲ ಬಾರಿಗೆ ಬಿಎಸ್-6 ಮಾದರಿಗಳಲ್ಲೂ ಹೊಸ ಡೀಸೆಲ್ ಎಂಜಿನ್ ಪರಿಚಯಿಸುವ ಸುಳಿವು ನೀಡಿದೆ.

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಎಪ್ರಿಲ್ 1ರಿಂದ ಜಾರಿಗೆ ಬಂದ ಹೊಸ ಎಮಿಷನ್ ನಿಯಮ ಅನ್ವಯ 1.3-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿ ಸದ್ಯ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಪ್ರೇರಿತ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಹೊಸ ಕಾರುಗಳಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಅನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿರುವುದು ಕಂಡುಬಂದಿದೆ.

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಬಿಎಸ್-6 ಜಾರಿ ನಂತರ ಡೀಸೆಲ್ ಎಂಜಿನ್ ಕಾರುಗಳನ್ನು ಮರುಬಿಡುಗಡೆ ಮಾಡುವುದಿಲ್ಲ ಎಂದಿದ್ದ ಮಾರುತಿ ಸುಜುಕಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಡೀಸೆಲ್ ಮಾದರಿಯನ್ನು ಅಳವಡಿಸಿಕೊಳ್ಳುವ ಸಿದ್ದತೆಯಲ್ಲಿದ್ದು, ಹೊಸ ಡೀಸೆಲ್ ಎಂಜಿನ್ ಮಾದರಿಯನ್ನು ಎರ್ಟಿಗಾ ಟೂರ್ ಎಂ ಮಾದರಿಯಲ್ಲಿ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಭವಿಷ್ಯದ ದೃಷ್ಠಿಯಿಂದ ಡೀಸೆಲ್ ವಾಹನಗಳಿಗೆ ಸಂಪೂರ್ಣವಾಗಿ ಗುಡ್‌ಬೈ ಹೇಳಿದ್ದ ಮಾರುತಿ ಸುಜುಕಿಯು ಇದೀಗ ಗ್ರಾಹಕರ ಬೇಡಿಕೆ ಅನುಸಾರವಾಗಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಮರಳಿ ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಎಂಜಿನ್ ಅನ್ನು ಮಾರುತಿ ಸುಜುಕಿ ಕಂಪನಿಯೇ ಅಭಿವೃದ್ದಿಗೊಳಿಸಿದೆ.

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಈ ಹಿಂದಿನ 1.3-ಲೀಟರ್ ಡಿಡಿಐಎಸ್ ಡೀಸೆಲ್ ಮಾದರಿಯನ್ನು ಫಿಯೆಟ್‌ ಕಂಪನಿಯಿಂದ ಎರವಲು ಪಡೆದುಕೊಳ್ಳುತ್ತಿದ್ದ ಮಾರುತಿ ಸುಜುಕಿಯು ತನ್ನ ಪ್ರಮುಖ ಕಾರು ಮಾದರಿಯಲ್ಲಿ ಜೋಡಣೆ ಮಾಡಿ ಮಾರಾಟ ಮಾಡುತ್ತಿತ್ತು. ಆದರೆ ಬಿಎಸ್-6 ಎಮಿಷನ್ ನಿಯಮ ಪಾಲನೆಯಿಂದ ಬೆಲೆ ಹೆಚ್ಚಳವಾಗುವ ಕಾರಣಕ್ಕೆ 1.3-ಲೀಟರ್ ಎಂಜಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯ್ತು.

ಇದೀಗ ಹೊಸ ಎಮಿಷನ್‌ಗೆ ಅನುಗುಣವಾಗಿ ಮಾರುತಿ ಸುಜುಕಿ ಕಂಪನಿಯೇ 1.5-ಲೀಟರ್ ಎಂಜಿನ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿದ್ದು, ಹೊಸ ಡೀಸೆಲ್ ಮಾದರಿಯು ಎರ್ಟಿಗಾ ಮಾದರಿಯಲ್ಲಿ ಮಾತ್ರವಲ್ಲ ಸಿಯಾಜ್ ಸೆಡಾನ್, ಎಸ್ ಕ್ರಾಸ್ ಮತ್ತು ವಿಟಾರಾ ಬ್ರೆಝಾದಲ್ಲೂ ಜೋಡಣೆ ಮಾಡಬಹುದಾಗಿದೆ.

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಆದರೆ ಸದ್ಯಕ್ಕೆ ಎರ್ಟಿಗಾ ಟೂರ್ ಎಂ ವಾಣಿಜ್ಯ ಬಳಕೆಯ ಕಾರು ಮಾದರಿಯಲ್ಲಿ ಮಾತ್ರವೇ ಜೋಡಣೆ ಮಾಡಲಾಗಿದ್ದು, ವಾಣಿಜ್ಯ ಬಳಕೆಗಾಗಿ ಮಾತ್ರವೇ ಈ ಎಂಜಿನ್ ಅನ್ನು ಅಭಿವೃದ್ದಿಗೊಳಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆಗೂ ಸ್ಪಷ್ಟನೆಯಿಲ್ಲ.

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಡೀಸೆಲ್ ಮಾದರಿಗಳ ಸ್ಥಗಿತ ನಂತರ ಮಾರುತಿ ಸುಜುಕಿ ವಾಣಿಜ್ಯ ಬಳಕೆಯ ಕಾರು ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಾರುತಿ ಸುಜುಕಿ ಡೀಸೆಲ್ ಕಾರುಗಳ ಸ್ಥಗಿತ ನಂತರ ಪ್ರತಿಸ್ಪರ್ಧಿ ಕಾರು ಮಾದರಿಗಳ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಈ ಹಿನ್ನಲೆಯಲ್ಲೂ ಕೂಡಾ ಮಾರುತಿ ಸುಜುಕಿ ಕಂಪನಿಯು ವಾಣಿಜ್ಯ ಬಳಕೆಯ ಮಾದರಿಗಳಿಗಾಗಿಯೇ ಹೊಸ ಡೀಸೆಲ್ ಎಂಜಿನ್ ಮಾದರಿಯನ್ನು ಪರಿಚಯಿಸಬಹುದಾದ ಸಾಧ್ಯತೆಗಳು ಕೂಡಾ ಇದ್ದು, ಒಂದು ವೇಳೆ ಡೀಸೆಲ್ ಎಂಜಿನ್ ಮರಳಿ ಪರಿಚಯಿಸಿದ್ದಲ್ಲಿ ಮಾರುತಿ ಸುಜುಕಿ ಕಾರುಗಳ ಮಾರಾಟವು ಮತ್ತೆ ದಾಖಲೆಯ ಪ್ರಮಾಣದ ಬೇಡಿಕೆ ಪಡೆದುಕೊಳ್ಳಲಿವೆ.

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಆದರೆ ವಾಸ್ತವ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ವಾಹನ ಪ್ರಮಾಣದಿಂದಾಗಿ ಮಾಲಿನ್ಯವು ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಮಾಲಿನ್ಯ ತಡೆ ಉದ್ದೇಶದಿಂದಲೇ ಡೀಸೆಲ್ ಮಾದರಿಯ ಕಾರುಗಳ ಮೇಲೆ ವಿಶ್ವಾದ್ಯಂತ ಹಲವು ರಾಷ್ಟ್ರಗಳಲ್ಲಿ ಹಲವು ನಿರ್ಬಂಧಗಳನ್ನು ವಿಧಿಸುತ್ತಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಿಎಸ್-6 ಕಾರಿನಲ್ಲಿ ಡೀಸೆಲ್ ಎಂಜಿನ್ ಸುಳಿವು ನೀಡಿದ ಮಾರುತಿ ಸುಜುಕಿ

ಭಾರತದಲ್ಲೂ ಕೂಡಾ ಬಿಎಸ್-6 ನಿಯಮದೊಂದಿಗೆ ವಾಹನಗಳ ಎಂಜಿನ್ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಗಮನಹರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿ ಮತ್ತೆ ಮರು ಅಭಿವೃದ್ದಿಗೊಳಿಸುತ್ತಿರುವುದು ಕುತೂಹಲ ಮೂಡಿಸಿದೆ.

Most Read Articles

Kannada
English summary
Maruti Suzuki Ertiga BS6 Diesel Tour M Variant Spotted Testing. Read in Kannada.
Story first published: Wednesday, October 28, 2020, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X