ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಎರ್ಟಿಗಾ, ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಎಂಪಿವಿ ಮಾದರಿಯ ವಾಹನವಾಗಿದೆ. ಈ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ವಿವಿಧ ಫೀಚರ್ ಗಳನ್ನು ನೀಡುತ್ತದೆ. ಆದರೆ ಈ ಕಾರಿನಲ್ಲಿ ಆಟೋಮ್ಯಾಟಿಕ್ ಡೋರ್ ಗಳನ್ನು ನೀಡಲಾಗಿಲ್ಲ.

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಅಂದರೆ ಈ ಕಾರು ಎಲೆಕ್ಟ್ರಿಕ್ ಮೂಲಕ ಕಂಟ್ರೋಲ್ ಮಾಡಲಾಗುವ ಡೋರುಗಳನ್ನು ಹೊಂದಿಲ್ಲ. ಈ ನಡುವೆ ಮಾರುತಿ ಸುಜುಕಿ ಎರ್ಟಿಗಾ ಕಾರೊಂದು ಎಲೆಕ್ಟ್ರಿಕ್ ಆಗಿ ಕಂಟ್ರೋಲ್ ಮಾಡಬಹುದಾದ ಡೋರುಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಈ ವರದಿಯು ಹಲವರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಏಕೆಂದರೆ, ಮಾರುತಿ ಸುಜುಕಿ ಕಂಪನಿಯು ಇನ್ನೂ ಎರ್ಟಿಗಾ ಕಾರಿನಲ್ಲಿ ಆಟೋಮ್ಯಾಟಿಕ್ ಡೋರುಗಳನ್ನು ಪರಿಚಯಿಸಿಲ್ಲ.

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಎರ್ಟಿಗಾ ಕಾರಿನಲ್ಲಿ ಮಾಡಿಫಿಕೇಶನ್ ಮೂಲಕ ಎಲೆಕ್ಟ್ರಿಕ್ ಡೋರುಗಳನ್ನು ನೀಡಲಾಗಿದೆ. ಇದಕ್ಕೆ ಸಂಬಂಧಪಟ್ಟ ವೀಡಿಯೊ ಮೂಲಕ ಇದು ದೃಢಪಟ್ಟಿದೆ. ಈ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ವಿಐಜಿ ಆಟೋ ಪೋಸ್ಟ್ ಮಾಡಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಎರ್ಟಿಗಾ ಕಾರಿನ ನೋಟವು ಮಾರ್ಪಾಡು ಮಾಡಲು ಸೂಕ್ತವಾಗಿಲ್ಲ ಎಂಬುದನ್ನು ಗಮನಿಸಬೇಕು. ಆದರೆ ಮಾಡಿಫಿಕೇಶನ್ ಮಾಡುವ ಮೂಲಕ ಈ ಮಾತನ್ನು ಸುಳ್ಳಾಗಿಸಲಾಗಿದೆ.

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಮಾಡಿಫಿಕೇಶನ್ ಮೂಲಕ ಎಲೆಕ್ಟ್ರಾನಿಕ್ ಆಗಿ ಕಂಟ್ರೋಲ್ ಮಾಡಬಹುದಾದ ಡೋರುಗಳನ್ನು ಮಾತ್ರವಲ್ಲದೆ ಇತರ ಹಲವಾರು ಫೀಚರ್ ಗಳನ್ನು ನೀಡಲಾಗಿದೆ. ಸಾಮಾನ್ಯ ಪ್ರೊಜೆಕ್ಟರ್ ಲ್ಯಾಂಪ್ ಗಳ ಬದಲಿಗೆ ಹೆಚ್‌ಐಟಿ ಪ್ರೊಜೆಕ್ಟರ್ ಲ್ಯಾಂಪ್ ಅಳವಡಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಈ ಲ್ಯಾಂಪ್ ಎರ್ಟಿಗಾ ಕಾರಿಗೆ ಹೆಚ್ಚುವರಿ ಪ್ರೀಮಿಯಂ ಲುಕ್ ನೀಡುತ್ತದೆ. ಇದರ ಜೊತೆಗೆ ಎಲ್ಇಡಿ ಲೈಟಿಂಗ್ ಹಾಗೂ ಫಾಗ್ ಲೈಟ್ ಗಳನ್ನು ಎಲ್ಇಡಿ ಮಾನದಂಡಗಳಿಗೆ ತಕ್ಕಂತೆ ಅಪ್ ಡೇಟ್ ಮಾಡಲಾಗಿದೆ.

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ರೂ.12 ಸಾವಿರ ವೆಚ್ಚದಲ್ಲಿ ತಯಾರಿಸಿರುವ ಕಾರ್ಬನ್ ಫೈಬರ್ ಪ್ಯಾನೆಲ್‌ಗಳನ್ನು ಈ ಎರ್ಟಿಗಾ ಕಾರಿನ ಹೊರಭಾಗ ಹಾಗೂ ಒಳಭಾಗದಲ್ಲಿ ಅಂಟಿಸಲಾಗಿದೆ. ಈ ಕಾರಿನ ಇಂಟಿರಿಯರ್ ನಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಈ ಕಾರಿನ ಇಂಟಿರಿಯರ್ ನಲ್ಲಿ ಆಂಬಿಯೆಂಟ್ ಎಲೆಕ್ಟ್ರಿಕ್ ಲೈಟಿಂಗ್ ಫೀಚರ್ ಅಳವಡಿಸಲಾಗಿದೆ. ಇದರ ಜೊತೆಗೆ ಆರಾಮದಾಯಕವಾದ ಐಷಾರಾಮಿ ಸೀಟುಗಳನ್ನು ಅಳವಡಿಸಲಾಗಿದೆ.

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಈ ಕಾರಿನಲ್ಲಿದ್ದ ಇನ್ಫೋಟೇನ್ ಮೆಂಟ್ ಸಿಸ್ಟಂ ಅನ್ನು ಅಪ್ ಗ್ರೇಡ್ ಮಾಡಲಾಗಿದೆ. ಇವುಗಳ ಜೊತೆಗೆ ವ್ಹೀಲ್ ಕವರ್, ಕಾರ್ಬನ್ ಫೈಬರ್ ಸ್ಟೀಯರಿಂಗ್ ವ್ಹೀಲ್, ಮ್ಯಾಟ್ರಿಕ್ಸ್ ಪಿಲ್ಲರ್ ಲ್ಯಾಂಪ್ ಹಾಗೂ ಮ್ಯಾಟ್ರಿಕ್ಸ್ ಟರ್ನ್ ಲ್ಯಾಂಪ್ ಗಳನ್ನು ಹೊಸದಾಗಿ ಅಳವಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎರ್ಟಿಗಾ ಕಾರಿನಲ್ಲಿ ಇಷ್ಟೊಂದು ಪ್ರಮಾಣದ ಮಾಡಿಫಿಕೇಶನ್ ಮಾಡಿರುವುದು ಶ್ಲಾಘನೀಯವೇ ಆದರೂ ಭಾರತದ ಮೋಟಾರು ವಾಹನ ಕಾಯ್ದೆಯಡಿ ವಾಹನಗಳನ್ನು ಮಾಡಿಫೈ ಮಾಡುವುದು ಕಾನೂನುಬಾಹಿರ ಎಂಬುದನ್ನು ಗಮನಿಸಬೇಕು.

ಆಟೋಮ್ಯಾಟಿಕ್ ಡೋರಿನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಎರ್ಟಿಗಾ

ಈ ಹಿಂದೆ ಮಾಡಿಫೈಗೊಂಡಿದ್ದ ಹಲವು ಕಾರುಗಳಿಗೆ ಪೊಲೀಸರು ಗರಿಷ್ಠ ಪ್ರಮಾಣದ ದಂಡ ವಿಧಿಸಿದ್ದಾರೆ. ಪೊಲೀಸರು ಭಾರೀ ಪ್ರಮಾಣದಲ್ಲಿ ಮಾಡಿಫೈಗೊಂಡಿರುವ ಈ ಎರ್ಟಿಗಾ ಕಾರಿಗೆ ದಂಡ ವಿಧಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಎರ್ಟಿಗಾ ಕಾರಿನ ಮಾಲೀಕರು ಮಾಡಿಫಿಕೇಶನ್ ಗಾಗಿ ರೂ.1.65 ಲಕ್ಷ ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ಲೇಬರ್ ಚಾರ್ಜ್ ಗಾಗಿ ಎಷ್ಟು ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

Most Read Articles

Kannada
English summary
Maruti Suzuki Ertiga modified with automatic door. Read in Kannada.
Story first published: Wednesday, October 21, 2020, 16:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X