ಕಾರು ಮಾರಾಟ ಹೆಚ್ಚಳಕ್ಕಾಗಿ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಲೋನ್ ಆಯ್ಕೆಗಳನ್ನು ಹೆಚ್ಚಿಸಿದ ಮಾರುತಿ ಸುಜುಕಿ

ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ವಾಹನಗಳ ಖರೀದಿ ಯೋಜನೆಯಿಂದ ಹಿಂದೆ ಸರಿಯುತ್ತಿರುವ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಮಾರುತಿ ಸುಜುಕಿ ಕಂಪನಿಯು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಲೋನ್ ಸೌಲಭ್ಯಗಳನ್ನು ಘೋಷಣೆ ಮಾಡಿದೆ.

ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಲೋನ್ ಆಯ್ಕೆಗಳನ್ನು ಹೆಚ್ಚಿಸಿದ ಮಾರುತಿ

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿಯೇ ಸಂಕಷ್ಟದಲ್ಲಿರುವ ಆಟೋ ಕಂಪನಿಗಳು ಕುಸಿದಿರುವ ಹೊಸ ವಾಹನ ಮಾರಾಟವನ್ನು ಸುಧಾರಿಸಲು ವಿವಿಧ ಮಾದರಿಯ ಲೋನ್ ಆಫರ್‌ಗಳನ್ನು ಘೋಷಿಸುತ್ತಿವೆ.

ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಲೋನ್ ಆಯ್ಕೆಗಳನ್ನು ಹೆಚ್ಚಿಸಿದ ಮಾರುತಿ

ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.

ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಲೋನ್ ಆಯ್ಕೆಗಳನ್ನು ಹೆಚ್ಚಿಸಿದ ಮಾರುತಿ

ಹೊಸ ವಾಹನ ಖರೀದಿದಾರರಿಗೆ ಇಎಂಐ ಹೊರೆ ತಗ್ಗಿಸಲು ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ದೇಶದ ಅತಿ ದೊಡ್ಡ ಕಾರು ಮಾರಾಟ ಕಂಪನಿ ಮಾರುತಿ ಸುಜುಕಿ ಕೂಡಾ ಆಯ್ದ ಕಾರು ಮಾದರಿಗಳ ಮೇಲೆ ವಿಶೇಷ ಲೋನ್ ಆಫರ್ ನೀಡಿದೆ.

ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಲೋನ್ ಆಯ್ಕೆಗಳನ್ನು ಹೆಚ್ಚಿಸಿದ ಮಾರುತಿ

ಜೊತೆಗೆ ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌ಗಳೊಂದಿಗೆ ಕೈಜೋಡಿಸಿರುವ ಮಾರುತಿ ಸುಜುಕಿ ಶೇ.100 ಆನ್‌ರೋಡ್ ಲೋನ್‌ಗಳನ್ನು ಪರಿಚಯಿಸುತ್ತಿದ್ದು, ಮರುಪಾವತಿಗೂ ಅನುಕೂರವಾಗುವಂತೆ ಇಎಂಐ ಆಯ್ಕೆಗಳನ್ನು ಪರಿಚಯಿಸಿದೆ.

ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಲೋನ್ ಆಯ್ಕೆಗಳನ್ನು ಹೆಚ್ಚಿಸಿದ ಮಾರುತಿ

ಫ್ಲೆಕ್ಸಿ ಇಎಂಐ, ಬಲೂನ್ ಇಎಂಐ, ಸೆಟ್ ಅಪ್ ಇಐಎಂ ಸೇರಿದಂತೆ ಹಲವಾರು ಇಎಂಐ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿರುವ ಮಾರುತಿ ಸುಜುಕಿಯು ಕಾರು ಮಾರಾಟ ಸುಧಾರಿಸುವ ಯೋಜನೆಯಲ್ಲಿದ್ದು, ಸದ್ಯ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಸಂಪೂರ್ಣ ಆನ್‌ರೋಡ್ ಲೋನ್ ಲಭ್ಯವಾಗಲಿದೆ.

ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಲೋನ್ ಆಯ್ಕೆಗಳನ್ನು ಹೆಚ್ಚಿಸಿದ ಮಾರುತಿ

ಜೊತಗೆ ಚೋಳಮಂಡಲಂ ಇನ್ವೆಸ್ಟಮೆಂಟ್ ಅಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್ ಜೊತೆಗೂಡಿ ಹೊಸ ಲೋನ್ ಆಫರ್ ಘೋಷಿಸಿರುವ ಮಾರುತಿ ಸುಜುಕಿ ಕಂಪನಿಯು ನಿಮ್ಮ ಇಷ್ಟದ ಕಾರುಗಳನ್ನು ಈಗಲೇ ಖರೀದಿಸಿ ಮತ್ತು ಹಣವನ್ನು ಮುಂದಿನ ವರ್ಷದಿಂದ ಮರುಪಾವತಿಸುವ ಅವಕಾಶ ನೀಡುತ್ತಿದೆ.

ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಲೋನ್ ಆಯ್ಕೆಗಳನ್ನು ಹೆಚ್ಚಿಸಿದ ಮಾರುತಿ

ಈ ಆಫರ್ ಆಯ್ದ ಕಾರು ಮಾದರಿಗಳ ಮೇಲೆ ಮಾತ್ರವೇ ಅನ್ವಯವಾಗಲಿದ್ದು, ಗರಿಷ್ಠ ಮಟ್ಟದ ಲೋನ್ ಸೌಲಭ್ಯವು ದೊರೆಯಲಿದೆ. ಇದು ಹೊಸ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಸಾಕಷ್ಟ ಸಹಕಾರಿಯಾಗಲಿದ್ದು, ಹೊಸ ಲೋನ್ ಸೌಲಭ್ಯವು ಮುಂದಿನ ಜೂನ್ 30ರ ತನಕ ಲಭ್ಯವಿರಲಿದೆ.

Most Read Articles

Kannada
English summary
Maruti Suzuki HDFC bank tie up to offer new finance schemes to customers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X