ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಮಾರುತಿ ಸುಜುಕಿ ಕಂಪನಿಯು ಕಳೆದ ಮಾರ್ಚ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ಮಾರ್ಚ್ ತಿಂಗಳ ವರದಿಯಲ್ಲಿ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಕಾರುಗಳ ಮಾರಾಟದಲ್ಲಿ ಭಾರಿ ಕುಸಿತವನ್ನು ಕಂಡಿದೆ.

ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಕಳೆದ ಮಾರ್ಚ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 83,792 ಕಾರುಗಳು ಮಾರಾಟವಾಗಿವೆ. ಇದರಲ್ಲಿ ರಫ್ತು ಮಾಡಲಾದ ಕಾರುಗಳ ಸಂಖ್ಯೆಯು ಒಳಗೊಂಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ತಮ್ಮ ಕಾರುಗಳ ಮಾರಾಟದಲ್ಲಿ 47% ರಷ್ಟು ಭಾರಿ ಕುಸಿತವನ್ನು ಕಂಡಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 1,58,076 ಕಾರುಗಳನ್ನು ಮಾರಾಟ ಮಾಡಿದ್ದರು.

ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಕಳೆದ ಮಾರ್ಚ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ 79,080 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಇನ್ನು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 1,47,613 ಯುನಿಟ್‌ಗಳನ್ನು ಮಾರಾಟ ಮಾಡಿವೆ.

ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ 55% ಕುಸಿತವನ್ನು ಕಂಡಿದೆ. ಮಾರುತಿ ಸುಜುಕಿ ಕಂಪನಿಯು ರಫ್ತು ಮಾಡಿರುವುದನ್ನು ಸೇರಿಸಿದರೆ 46.4% ಕುಸಿತವಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 4,712 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ 10,463 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು.

ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಮಾರ್ಚ್ 2019-20ರ ಆರ್ಥಿಕ ವರ್ಷದ ಅಂತ್ಯದಲ್ಲಿ ಮಾರುತಿ ಸುಜುಕಿ ಕಂಪನಿಯು ವರ್ಷದಲ್ಲಿ ಒಟ್ಟು 15,63,297 ಕಾರುಗಳನ್ನು ಮಾರಟ ಮಾಡಿದೆ. ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟದಲ್ಲಿ ಕುಸಿತ ಕಾಣಲು ಪ್ರಮುಖ ಕಾರಣ ಕರೋನಾ ವೈರಸ್ ಆಗಿದೆ.

ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ರಾಷ್ಟ್ಯವ್ಯಾಪ್ತಿ ಲಾಕ್‌ಡೌನ್‌ನ ಭಾಗವಾಗಿ ಮಾರುತಿ ಸುಜುಕಿ ಕಂಪನಿಯು ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು. ಮಾರುತಿ ಸುಜುಕಿ ಸುಜುಕಿ ಕಂಪನಿಯು ರಾಜ್ಯ ಮತ್ತು ಕೇಂದ್ರ ಸರ್ಕಾರೊಂದಿಗೆ ಕರೋನಾ ವೈರಸ್ ಎಂಬ ಮಹಾಮಾರಿಯ ವಿರುದ್ದ ಹೋರಾಟಕ್ಕೆ ಕೈಜೋಡಿಸಿದೆ.

ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಮಾರುತಿ ಸುಜುಕಿ ಕಂಪನಿಯು ಅಗತ್ಯವಾದ ವೆಂಟಿಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರದ ಜೊತೆಯಲ್ಲಿ ಕೈಜೋಡಿಸಿದೆ. ವೆಂಟಿಲೇಟರ್‌ಗಳನ್ನು ಉತ್ಪಾದಿಸಲು ಆಗ್ವಾ ಹೆಲ್ತ್‌ಕೇರ್‌ನೊಂದಿಗೆ ಮಾರುತಿ ಸುಜುಕಿ ಕಂಪನಿ ಸಹಭಾಗಿತ್ವ ವಹಿಸಿದೆ.

ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಕಂಪನಿಯು ವೆಂವೆಂಟಿಲೇಟರ್‌ಗಳನ್ನು ಉತ್ಪಾದಿಸಲು ಆಗ್ವಾ ಹೆಲ್ತ್‌ಕೇರ್‌ ಜೋತೆ ಸಹಭಾಗಿತ್ವ ವಹಿಸಿದರೆ ವೈದ್ಯಕೀಯ ಉಪಕರಣಗಳನ್ನು ಮಾರುತಿ ಸುಜುಕಿ ಕಂಪನಿಯೇ ತಯಾರಿಸುತ್ತದೆ. ಮಾರುತಿ ಸುಜುಕಿ ಕಂಪನಿಯು ತಿಂಗಳಿಗೆ 10,000 ವೆಂಟಿಲೇಟರ್ ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದಾರೆ.

ಪಾತಾಳಕ್ಕಿಳಿದ ಮಾರುತಿ ಸುಜುಕಿ ಕಾರು ಮಾರಾಟ

ಮಾರುತಿ ಸುಜುಕಿ ಕಂಪನಿಯು ದೇಶದ ಪ್ರಮುಖ ಕಾರು ಉತ್ಪಾದಕರಾಗಿದ್ದಾರೆ. ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಸೆಗ್‍ಮೆಂಟ್ ಕಾರುಗಳನ್ನು ಹೊಂದಿದೆ. ಆದರೆ ಕರೋನಾ ವೈರಸ್ ನಿಂದಾಗಿ ಮಾರುತಿ ಸುಜುಕಿ ಕಾರುಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ.

Most Read Articles

Kannada
English summary
Maruti Suzuki Registers A 47% Decline In Sales. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X