ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿಯು ಭಾರತದಲ್ಲಿಯು ಬಿಡುಗಡೆಯಾಗಲಿದೆ ಎಂದು ವರದಿಗಳು ಪ್ರಕಟವಾಗಿತ್ತು.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಕಳೆದ ವರ್ಷ ಮಾರುತಿ ಸುಜುಕಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ವಿ ರಾಮನ್ ಅವರು 3-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು. ಎಂಕೆ 4 ಸುಜುಕಿ ಜಿಮ್ನಿಯನ್ನು 2020ರ ಭಾರತದಲ್ಲಿ ಆಟೋ ಎಕ್ಸ್‌ಪೋದಲ್ಲೊ ಪ್ರದರ್ಶಿಸಿದ್ದರು. ಆಟೋ ಎಕ್ಸ್ ಪೋದಲ್ಲಿ ಹೆಚ್ಚಿನ ಜನರ ಗಮನಸೆಳೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶ್ವಸಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಇತ್ತೀಚೆಗೆ ಸಿ.ವಿ ರಾಮನ್ ಅವರು ಸಂದರ್ಶನವೊಂದರಲ್ಲಿ 3-ಡೋರಿನ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಿಲ್ಲ. ಅದನ್ನು ಸಿಬಿಯು ಮೂಲಕ ಭಾರತಕ್ಕೆ ತರುವುದಿಲ್ಲ ಯಾವುದೇ ಅರ್ಥವಿಲ್ಲ. ನಾವು ಸ್ಥಳೀಯವಾಗಿ ತಯಾರಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಕೆಲವು ವರದಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಭಾರತದ ಆಫ್-ರೋಡ್ ಪ್ರಿಯರು ಬಹುಕಾತರದಿಂದ ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಕಾಯುತ್ತಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಭಾರತದಲ್ಲಿ ಬಿಡುಗಡೆಗೊಳಿಸುವುದಾದರೆ ಮಾರುತಿ ಸುಜುಕಿ ಕಂಪನಿಯು ಗುರಗಾಂವ್ ಮೂಲದ ಘಟಕದಲ್ಲಿ ಜಿಮ್ನಿ ಎಸ್‍‍ಯುವಿಯನ್ನು ಉತ್ಪಾದಿಸಲಾಗುತ್ತದೆ. ಹರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಬ್ರೆಝಾ, ಎಸ್-ಕ್ರಾಸ್, ಇಕೋ ಮತ್ತು ಕ್ಯಾರಿಯಂತಹ ಇತರ ಎಸ್‍‍ಯುವಿಗಳ ಜೊತೆಗೆ ಜಿಮ್ನಿ ಎಸ್‍‍ಯುವಿಯನ್ನು ಕೂಡ ತಯಾರಿಸಬಹುದು.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಈ ಜಿಮ್ನಿ ಎಸ್‍‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿ ನಿರ್ಧರಿಸಿರಲಿಲ್ಲ. ಆದರೆ ಆಟೋ ಎಕ್ಸ್ ಪೋದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆನ್ನು ಲಭಿಸಿರುವುದರಿಂದ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಈ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 3-ಡೋರಿನ ಸುಜುಕಿ ಜಿಮ್ನಿ

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ. ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

Most Read Articles

Kannada
English summary
Maruti Suzuki dead-set on not launching 3-door Jimny in India. Read In Kannada.
Story first published: Friday, June 5, 2020, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X