Just In
- 48 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 14 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- News
''ಹಿಂಸಾಚಾರವನ್ನು ಎಂದಿಗೂ ಸಹಿಸುವುದಿಲ್ಲ'': ಮೆಲಾನಿಯಾ ಟ್ರಂಪ್ ವಿದಾಯದ ಭಾಷಣ
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಲ್ಕು ಹೊಸ ನಗರಗಳಿಗೆ ಕಾರ್ ಲೀಸ್ ಯೋಜನೆ ವಿಸ್ತರಿಸಿದ ಮಾರುತಿ ಸುಜುಕಿ
ಕಾರ್ ಲೀಸ್ ಯೋಜನೆಯಲ್ಲಿ ಭಾರೀ ಬೆಳವಣಿಗೆ ಸಾಧಿಸುತ್ತಿರುವ ಮಾರುತಿ ಸುಜುಕಿಯು ಮುಂಬೈ, ದೆಹಲಿ, ಬೆಂಗಳೂರು, ಹೈದ್ರಾಬಾದ್ ಮತ್ತು ಪುಣೆ ನಗರಗಳಲ್ಲಿ ಹೊಸ ಯೋಜನೆಗೆ ಚಾಲನೆ ನೀಡಿದ ನಂತರ ಇದೀಗ ಮುಂಬೈ(ನವಿ ಮುಂಬೈ ಮತ್ತು ಥಾಣೆ), ಚೆನ್ನೈ, ಅಹಮದಾಬಾದ್ ಮತ್ತು ಗಾಂಧಿನಗರಕ್ಕೂ ವಿಸ್ತರಣೆ ಮಾಡಿದೆ.

ಕರೋನಾ ವೈರಸ್ ನಂತರ ಸ್ವಂತ ವಾಹನ ಬಳಕೆಯು ಹೆಚ್ಚುತ್ತಿದ್ದು, ಬಹುತೇಕ ಆಟೋ ಕಂಪನಿಗಳು ಭಾರೀ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿವೆ. ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು ಹಾಕುತ್ತಿರುವುದೇ ಸ್ವಂತ ವಾಹನಗಳ ಬಳಕೆ ಹೆಚ್ಚಳ ಪ್ರಮುಖ ಕಾರಣವಾಗಿದ್ದು, ಗ್ರಾಹಕರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಖರೀದಿಯ ಜೊತೆಗೆ ನಿಗದಿತ ಅವಧಿಗಾಗಿ ವಾಹನಗಳನ್ನು ಲೀಸ್ ಪಡೆಯುವ ಪ್ರಕ್ರಿಯೆ ಕೂಡಾ ಹೆಚ್ಚಳವಾಗಿದೆ.

ಮಾರುತಿ ಸುಜುಕಿ ಸಬ್ಸ್ಕೈಬ್ ಯೋಜನೆ ಅಡಿ ಆಕರ್ಷಕ ಬೆಲೆಯಲ್ಲಿ ಲೀಸ್ ಕಾರುಗಳ ಮಾಲೀಕತ್ವವನ್ನು ಹೊಂದಬಹುದಾಗಿದ್ದು, ಸಬ್ಸ್ಕೈಬ್ನಲ್ಲಿ ಅರೆನಾ ಮತ್ತು ನೆಕ್ಸಾ ಎರಡು ಮಾದರಿಯ ಕಾರು ಮಾರಾಟ ಮಳಿಗೆಗಳಲ್ಲಿ ಲೀಸ್ ಪಡೆಯಬಹುದಾಗಿದೆ.

ಅರೆನಾ ಕಾರು ಮಳಿಗೆಯಲ್ಲಿ ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಕಾರುಗಳ ಮೇಲೆ ಲೀಸ್ ಆಯ್ಕೆ ಲಭ್ಯವಿದ್ದಲ್ಲಿ ನೆಕ್ಸಾ ಕಾರು ಮಾರಾಟ ಮಳಿಗೆಯಲ್ಲಿ ಸಿಯಾಜ್, ಬಲೆನೊ ಮತ್ತು ಎಕ್ಸ್ಎಲ್6 ಕಾರುಗಳನ್ನು ಲೀಸ್ ಪಡೆಯಬಹುದಾಗಿದೆ.

ಆಕರ್ಷಕ ಬೆಲೆಗಳಲ್ಲಿ ಲೀಸ್ ಕಾರುಗಳು..!
ಮಾರುತಿ ಸುಜುಕಿಯು ಪ್ರತಿ ದಿನಕ್ಕೆ ಕನಿಷ್ಠ ರೂ.700ರಿಂದ ಗರಿಷ್ಠ ರೂ.1200 ದರ ಅನ್ವಯವಾಗುವಂತೆ ಲೀಸ್ ಕಾರುಗಳ ಆಯ್ಕೆಯನ್ನು ನೀಡುತ್ತಿದ್ದು, ಹೊಸ ಲೀಸ್ ಕಾರಿಗೆ ನೋಂದಣಿ ಮಾಡಿದ 15 ದಿನದೊಳಗಾಗಿ ಕಾರಿನ ಮಾಲೀಕತ್ವವನ್ನು ಹಸ್ತಾಂತರ ಮಾಡಲಿದೆ. ಲೀಸ್ ಪಡೆದ ಕಾರುಗಳ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿದ್ದು, ಕನಿಷ್ಠ 24 ತಿಂಗಳು ಲೀಸ್ ಆಯ್ಕೆಯನ್ನು ಪಡೆದುಕೊಳ್ಳಬೇಕು.

ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ವಿವಿಧ ಕಾರು ಮಾದರಿಗಳನ್ನು 24, 36 ಮತ್ತು 48 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಹೊಸ ಕಾರಿನ ನೋಂದಣಿ, ರಸ್ತೆ ತೆರಿಗೆ, ವಿಮೆ, ನಿರ್ವಹಣಾ ವೆಚ್ಚ, ಬಿಡಿಭಾಗಗಳ ಶುಲ್ಕಗಳು ಒಳಗೊಂಡಿರುತ್ತವೆ.

ಇದರಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಲೀಸ್ ಕಾರುಗಳಿಗೆ ವಾರ್ಷಿಕವಾಗಿ 18 ಸಾವಿರ ಕಿ.ಮೀ ನಿಗದಿಪಡಿಸಲಾಗಿದ್ದು, ಒಂದು ವರ್ಷದಲ್ಲಿ 18 ಸಾವಿರ ಕಿ.ಮೀ ಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಹೆಚ್ಚುವರಿಗಾಗಿ ರೂ.7 ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಒಂದು ವೇಳೆ ಲೀಸ್ ಪಡೆದುಕೊಂಡ ಅವಧಿಗಿಂತಲೂ ಮೊದಲೇ ಕಾರು ಹಿಂದಿರುಗಿಸುವ ಸಂದರ್ಭ ಎದುರಾದಲ್ಲಿ ಅದಕ್ಕೂ ಅವಕಾಶಗಳನ್ನು ನೀಡಲಾಗಿದ್ದು, ಅವಧಿಗಿಂತಲೂ ಮುಂಚಿತವಾಗಿ ಕಾರು ಹಿಂದಿರುಗಿಸುವುದಾರರೇ ಕೆಲವು ಷರತ್ತುಗಳಿಗೆ ಬದ್ದವಾಗಿರಬೇಕು.
MOST READ: ಭಾರತದಲ್ಲಿ ಎರಡು ಹೊಸ ಎಸ್ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಉದಾಹರಣೆಗೆ ಒಂದು ಸ್ವಿಫ್ಟ್ ಕಾರನ್ನು 24 ತಿಂಗಳಿಗೆ ಲೀಸ್ ಪಡೆದುಕೊಂಡು 8 ತಿಂಗಳು ಬಳಕೆ ಮಾಡಿರುತ್ತೀರಿ. ಆದರೆ ನಿಮಗೆ 8 ತಿಂಗಳ ನಂತರ ಅದನ್ನು ಮುಂದುವರಿಸಲು ಇಷ್ಟವಿಲ್ಲ ಎಂದಿಟ್ಟುಕೊಳ್ಳೋಣ. ಆಗ ನೀವು ಮಾಲೀಕತ್ವದ ಕನಿಷ್ಠ 12 ತಿಂಗಳ ಅವಧಿಯನ್ನು ಪೂರೈಸಿ ಕೆಲವು ಶುಲ್ಕುಗಳನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಾಗುತ್ತದೆ.

ಜೊತೆಗೆ ಮಾಲೀಕತ್ವವನ್ನು ಕಡೆದುಕೊಳ್ಳುವ 1 ತಿಂಗಳು ಮುಂಚಿತವಾಗಿಯೇ ಕಂಪನಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಮಾಸಿಕ ಚಂದಾ ಹಣ ಪಾವತಿಯಲ್ಲೂ ನಿಗದಿತ ಅವಧಿಯನ್ನು ಮೀರಿದರೆ ದಂಡದ ಶುಲ್ಕವನ್ನು ಸಹ ಪಾವತಿಮಾಡಬೇಕಾಗುತ್ತದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತಲೂ ತುಸು ಭಿನ್ನವಾಗಿದ್ದು, ನಮಗೆ ಕಾರಿನ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ವಾಪಸ್ ನೀಡಬಹುದಾದ ಆಯ್ಕೆಯಿರುತ್ತದೆ. ಆದರೆ ಹೊಸ ವಾಹನ ಖರೀದಿಯ ನಂತರ ಆರ್ಥಿಕ ಹೊರೆಯಾದರೂ ನೀವು ಅದನ್ನು ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿರುತ್ತದೆ. ಹೀಗಾಗಿ ಲೀಸ್ ಕಾರುಗಳು ಅವಶ್ಯಕ ಸಂದರ್ಭಗಳಲ್ಲಿ ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ಮಾರುತಿ ಲೀಸ್ ಕಾರುಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್ತಾಣಕ್ಕೆ ಭೇಟಿ ನೀಡಬಹುದು.