ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಭಾರತದಲ್ಲಿ ಲಾಕ್‌ಡೌನ್ ವಿನಾಯ್ತಿ ನಂತರ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಮಾಡುವತ್ತ ಚಿಂತನೆ ಮಾಡಲಾಗುತ್ತಿದೆ.

ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಈಗಾಗಲೇ ಲಾಕ್‌ಡೌನ್‌ನಿಂದ ಭಾರೀ ಪ್ರಮಾಣದ ನಷ್ಟ ಅನುಭವಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಮ್ಮೆ ಲಾಕ್‌ಡೌನ್ ಭಯ ಎದುರಾಗಿದ್ದು, ಒಂದು ವೇಳೆ ಮತ್ತೊಮ್ಮೆ ಲಾಕ್‌ಡೌನ್ ವಿಧಿಸಿ ವಾಹನ ಉತ್ಪಾದನೆಯನ್ನು ಬಂದ್ ಮಾಡಿದರೂ ಮಾರಾಟಕ್ಕೆ ತೊಂದರೆಯಾಗದಂತೆ ಸ್ಟಾಕ್ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಇದಕ್ಕಾಗಿ ತನ್ನ ಪ್ರಮುಖ ಬಿಡಿಭಾಗಗಳ ಪೂರೈಕೆ ಕಂಪನಿಗಳಿಗೆ ಮಹತ್ವದ ಸೂಚನೆ ನೀಡಿರುವ ಮಾರುತಿ ಸುಜುಕಿಯು ಮತ್ತೊಮ್ಮೆ ಲಾಕ್‌ಡೌನ್ ವಿಧಿಸಿದರೂ ಮುಂದಿನ ಒಂದೆರೆಡು ತಿಂಗಳಿಗೆ ಬೇಕಿರುವಷ್ಟು ಸ್ಟಾಕ್ ಪ್ರಮಾಣವನ್ನು ಈಗಾಗಲೇ ನಿರ್ಮಾಣ ಮಾಡುತ್ತಿದೆ.

ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಕರೋನಾ ವೈರಸ್ ನಿಯಂತ್ರಣಕ್ಕಾಗಿ ಈಗಾಗಲೇ ತಮಿಳುನಾಡಿನಲ್ಲಿ ಎರಡನೇ ಹಂತದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಲಾಗುತ್ತಿದ್ದು, ಕರೋನಾ ಹೆಚ್ಚಿರುವ ದೆಹಲಿ ಮತ್ತು ಎನ್‌ಸಿಆರ್ ವಲಯದಲ್ಲೂ ಲಾಕ್‌ಡೌನ್ ವಿಸ್ತರಿಸಬಹುದಾದ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಇದೇ ಕಾರಣಕ್ಕೆ ಹರಿಯಾಣದ ಗುರುಗ್ರಾಮ್‌ ಮತ್ತು ಮನೆಸಾರ್‌ನಲ್ಲಿರುವ ಮೂರು ಘಟಕಗಳಲ್ಲೂ ವಾಹನ ಉತ್ಪಾದನಾ ಪ್ರಮಾಣವು ಹೆಚ್ಚಿಸಿರುವ ಮಾರುತಿ ಸುಜುಕಿ ಕಂಪನಿಯು ಲಾಕ್‌ಡೌನ್ ವಿಸ್ತರಣೆ ಇಲ್ಲದ ರಾಜ್ಯಗಳಲ್ಲಿ ವಾಹನ ಮಾರಾಟದಲ್ಲಿ ತೊಂದರೆಯಾಗದಂತೆ ಹೊಸ ವಾಹನಗಳ ಸ್ಟಾಕ್ ಪ್ರಮಾಣವನ್ನು ಮಾಡಿಕೊಳ್ಳುತ್ತಿದೆ.

ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಜೊತೆಗೆ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಉತ್ಪಾದನೆಯ ಮೇಲೆ ನಿರ್ಬಂಧ ಹೇರಿದರೂ ಕೂಡಾ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಪ್ರಮಾಣಕ್ಕೆ ಅವಕಾಶವಿರುವ ಸಾಧ್ಯತೆಗಳಿದ್ದು, ಇದರಿಂದ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ.

ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಇದಲ್ಲದೆ ಕಾರು ಉತ್ಪಾದನಾ ಘಟಕಗಳಲ್ಲೇ ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ವಿವಿಧ ಹಂತದ ಸುರಕ್ಷಾ ಕ್ರಮಗಳ ನಡುವೆಯೂ ವೈರಸ್ ಪ್ರಕರಣಗಳು ಹೆಚ್ಚತ್ತಿರುವುದು ವಾಹನ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಜೂನ್ ಮೊದಲ ವಾರದಲ್ಲಿ ಮನೆಸಾರ್ ಕಾರು ಉತ್ಪಾದನಾ ಘಟಕದಲ್ಲಿ ಇಬ್ಬರು ಉದ್ಯೋಗಿಗಳಿಗೆ ಕೋವಿಡ್-19 ವೈರಸ್ ತಗುಲಿದ್ದರ ಪರಿಣಾಮ 7 ದಿನಗಳ ಕಾಲ ತಾತ್ಕಾಲಿಕವಾಗಿ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.

ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಇದರಿಂದ ಹೊಸ ವಾಹನಗಳಿಗೆ ಬೇಡಿಕೆ ಬಂದರೂ ನಿಗದಿತ ಅವಧಿಯಲ್ಲಿ ವಾಹನ ಪೂರೈಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತಿದ್ದು, ಈ ಎಲ್ಲಾ ಕಾರಣಗಳಿಂದ ಹೊಸ ವಾಹನಗಳ ಸ್ಟಾಕ್ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತಿರುವ ಮಾರುತಿ ಸುಜುಕಿಯು ಬಿಡಿಭಾಗಗಳ ಪೂರೈಕೆ ಕಂಪನಿಗಳಿಗೆ ಹೆಚ್ಚಿನ ಮಟ್ಟದ ಉತ್ಪಾದನೆಗೆ ಸೂಚನೆ ನೀಡಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೆಚ್ಚಿದ ವೈರಸ್ ಭೀತಿ: ಸ್ಟಾಕ್ ಪ್ರಮಾಣ ಹೆಚ್ಚಳ ಮಾಡುತ್ತಿದೆ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.86ರಷ್ಟು ನಷ್ಟ ಅನುಭವಿಸಿದ್ದು, ಕೇವಲ 18,539 ಹೊಸ ಕಾರುಗಳನ್ನು ಮಾರಾಟ ಮಾಡಿತ್ತು. ಇದೀಗ ಕಾರು ಮಾರಾಟ ಪ್ರಮಾಣವು ತುಸು ಚೇತರಿಕೆ ಕಂಡುಬಂದರೂ ಕರೋನಾ ವೈರಸ್ ಪ್ರಮಾಣ ಹೆಚ್ಚುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗುತ್ತಿದೆ.

Most Read Articles

Kannada
English summary
Maruti Suzuki Suppliers To Build Up Inventory In Case Of Second Wave Of The COVID-19 Pandemic. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X