ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸಂಸ್ಥೆಯು ಶೀಘ್ರದಲ್ಲೇ ತನ್ನ ಜನಪ್ರಿಯ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಹೊಸ ಪೆಟ್ರೋಲ್ ಎಂಜಿನ್ ಆಯ್ಕೆಯೊಂದನ್ನು ನೀಡುವುದಾಗಿ ಸುಳಿವು ನೀಡಿದ್ದು, ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಸ್ಪಿಫ್ಟ್ ಆವೃತ್ತಿಗೆ ಮತ್ತಷ್ಟು ಬಲಿಷ್ಠತೆ ಒದಗಿಸಲಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರವಾಗಿ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಬಹುತೇಕ ಕಾರು ಮಾದರಿಗಳಲ್ಲಿನ ಎಂಜಿನ್ ಆಯ್ಕೆಯನ್ನು ಬದಲಾವಣೆಗೊಳಿಸಿದೆ. ಮೊನ್ನೆಯಷ್ಟೇ ಬಿಡುಗಡೆ ಮಾಡಲಾದ ಡಿಜೈರ್ ಫೇಸ್‌ಲಿಫ್ಟ್ ಆವೃತ್ತಿಯ ಎಂಜಿನ್ ಆಯ್ಕೆಯನ್ನು ಬದಲಾವಣೆಗೊಳಿಸಿದ್ದು, ಪೆಟ್ರೋಲ್ ಎಂಜಿನ್ ಮೂಲಕವೇ ಡೀಸೆಲ್ ಕಾರುಗಳು ನೀಡುವಷ್ಟು ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯನ್ನು ಒದಗಿಸುತ್ತಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

ಬಿಎಸ್-6 ಎಮಿಷನ್ ಪ್ರಕಾರ ಈ ಹಿಂದಿನ 1.3-ಲೀಟರ್ ಡೀಸೆಲ್ ಎಂಜಿನ್ ತೆಗೆದುಹಾಕಲಾಗಿದ್ದು, ಇದು ಹೊಸ ನಿಯಮಗಳಿಗೆ ಅನುಗುಣವಾಗಿ ಉನ್ನತೀಕರಿಸಲು ಸಾಧ್ಯವಿಲ್ಲದ ಕಾರಣ ಹೊಸ ಮಾದರಿಯ ಎಂಜಿನ್‌ಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

ಸದ್ಯ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಹೊಸ ಕಾರು ಮಾದರಿಗಳಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳನ್ನು ಮಾತ್ರವೇ ನೀಡಲಾಗಿದ್ದು, ರೂ. 10 ಲಕ್ಷದೊಳಗಿನ ಕಾರುಗಳಲ್ಲಿ ಇನ್ಮುಂದೆ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡದಿರಲು ನಿರ್ಧರಿಸಲಾಗಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

ಇದೀಗ ಬಿಡುಗಡೆಗೆ ಸಿದ್ದವಾಗುತ್ತಿರುವ ಸ್ವಿಫ್ಟ್ ಹೊಸ ಕಾರಿನಲ್ಲಿ ಬಲೆನೊ ಫೇಸ್‌ಲಿಫ್ಟ್‌ನಲ್ಲಿ ಬಳಕೆ ಮಾಡಿರುವ 1.2-ಲೀಟರ್ ಫೋರ್ ಸಿಲಿಂಡರ್ ಕೆ12ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಎರವಲು ಪಡೆಯಲಾಗುತ್ತಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

ಇದರೊಂದಿಗೆ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು 23.26 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 24.12 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಭವಿಷ್ಯದಲ್ಲಿ ಹೊಸ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳಲಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

ಇನ್ನು ಫಿಯೆಟ್ ಕಂಪನಿಯಿಂದ ಎರವಲು ಪಡೆಯಲಾಗುತ್ತಿದ್ದ 1.3-ಡೀಸೆಲ್ ಎಂಜಿನ್ ಮಾದರಿಯು ಹೊಸ ನಿಯಮದಂತೆ ಸಾಕಷ್ಟು ಸುಧಾರಣೆಗೊಳ್ಳಬೇಕಿತ್ತು. ಆದರೆ ಬೆಲೆ ಹೆಚ್ಚಳವಾಗುವ ಕಾರಣದಿಂದ 1.3-ಲೀಟರ್ ಬೂಸ್ಟರ್ ಜೆಟ್ ಡೀಸೆಲ್ ಎಂಜಿನ್ ಅನ್ನು ಉತ್ಪಾದನೆಯಿಂದ ಕೈಬಿಡಲಾಗಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

1.3-ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಅನ್ನು ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳಿಗೆ ಪೂರೈಕೆ ಮಾಡಿದ್ದ ಫಿಯೆಟ್ ಸಂಸ್ಥೆಯು ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಎಂಜಿನ್ ಮಾದರಿಯಾಗಿತ್ತು.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಸ್ವಿಫ್ಟ್

ಆದರೆ ಬೂಸ್ಟರ್ ಜೆಟ್ ಎಂಜಿನ್‌ನಲ್ಲಿ ಬಿಎಸ್-6 ವೈಶಿಷ್ಟ್ಯತೆ ಅಳವಡಿಕೆಯು ಆರ್ಥಿಕವಾಗಿ ಹೊರೆಯಾಗುವ ಕಾರಣಕ್ಕೆ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸಲು ಗಮನಹರಿಸಿದೆ. ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿಯು ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರವೇ ಮುಂಬರುವ ದಿನಗಳಲ್ಲಿ ಹೊಸ ಮಾದರಿಯ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದ್ದು, ಇನ್ನುಳಿದಂತೆ ಪೆಟ್ರೋಲ್ ಕಾರುಗಳನ್ನು ಈಗಾಗಲೇ ಸಂಪೂರ್ಣವಾಗಿ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಮಾರಾಟ ಮಾಡುತ್ತಿದೆ.

Most Read Articles

Kannada
English summary
Maruti Suzuki Swift new 1.2-litre dualjet petrol launch soon details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X