ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಟೊಯೊಟಾ ಮತ್ತು ಮಾರುತಿ ಸುಜುಕಿ ಒಂದೆರಡು ವರ್ಷಗಳ ಹಿಂದೆ ಪಾಲುದಾರಿಕೆಯನ್ನು ಆರಂಭಿಸಿದ್ದರು. ಅಂದಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ಈ ಎರಡು ದಿಗ್ಗಜ ಕಂಪನಿಗಳು ಸೇರಿ ಎರಡು 'ರಿಬ್ಯಾಡ್ಡ್' ಮಾದರಿಗಳನ್ನು ಪರಿಚಯಿಸಿದೆ.

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಟೊಯೊಟಾ ಮತ್ತು ಮಾರುತಿ ಸುಜುಕಿ ಸಹಭಾಗಿತ್ವವು ಈಗ ಹೊಸ ಮಿಡ್ ಎಸ್‍ಯುವಿ ವಿಭಾಗಕ್ಕೆ ಜಂಟಿಯಾಗಿ ಹೊಚ್ಚ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲಿದೆ ವರದಿಗಳಾಗಿದೆ. ಆಟೋಕಾರ್ ಇಂಡಿಯಾದ ಪ್ರಕಾರ, 2022ರ ನಂತರದ ಟೊಯೊಟಾದೊಂದಿಗೆ ಉತ್ಪಾದನಾ ಯೋಜನೆಗಳಲ್ಲಿ ಒಂದು ನಿರ್ದಿಷ್ಟ ಬದಲಾವಣೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‍ಯುವಿಯನ್ನು ಟೊಯೊಟಾ ಕಂಪನಿಯ ಬಿಡದಿಯಲ್ಲಿರುವ ಘಟಕದಲ್ಲಿ ತಯಾರಿಸುವ ಯೋಜನೆ ಆರಂಭದಲ್ಲಿತ್ತು. ಆದರೆ ಈಗ ಹೊಸ ಎಸ್‍ಯುವಿಯನ್ನು ಟೊಯೊಟಾ ಘಟಕದಲ್ಲಿ ತಯಾರಿಸುವ ಯೋಜನೆಯನ್ನು ರೂಪಿಸುತ್ತಿದ್ದಾರೆ.

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಯು ಹೊಸದಾಗಿ ಬಿಡುಗಡೆಗೊಳಿಸುವ ಮಿಡ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗೆ ನೇರ ಪೈಪೋಟಿ ನೀಡುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಹಾಗೂ ಮಾರುತಿ ಸುಜುಕಿ ಕಂಪನಿಗಳು 2017ರಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಟೊಯೊಟಾ ಕಂಪನಿ ಹಾಗೂ ಮಾರುತಿ ಸುಜುಕಿ ಕಂಪನಿಗಳು ತಮ್ಮ ಕಾರುಗಳನ್ನು ಒಬ್ಬರಿಗೊಬ್ಬರು ತಮ್ಮ ಕಂಪನಿಗಳ ಬ್ಯಾಡ್ಜ್ ಅಡಿ ತಯಾರಿಸಿ ಬಿಡುಗಡೆಗೊಳಿಸಿ, ಮಾರಾಟ ಮಾಡಬಹುದು.

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಪ್ರಸ್ತುತ ಟೊಯೊಟಾ ಕಂಪನಿಯು ರಾಮನಗರ ಬಳಿಯ ಬಿಡಡಿಯಲ್ಲಿ ಎರಡು ಉತ್ಪಾದನಾ ಕೇಂದ್ರಗಳಿದೆ. ಇಲ್ಲಿ ಟೊಯೊಟಾದ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ತಯಾರಿಸುತ್ತಿದ್ದರೆ, ಇನ್ನೊಂದರಲ್ಲಿ ಯಾರೀಸ್ ಮತ್ತು ಕ್ಯಾಮ್ರಿ ಹೈಬ್ರಿಡ್ ಕಾರುಗಳನ್ನು ಉತ್ಪಾದಿಸಲಾಗುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ವರದಿಗಳ ಪ್ರಕಾರ ಟೊಯೊಟಾ ಕಂಪನಿಯ ಎರಡನೇ ಘಟಕದಲ್ಲಿ ಹೊಸ ಮಿಡ್ ಎಸ್‍ಯುವಿಯನ್ನು ತಯಾರಿಸಲಾಗುತ್ತದೆ. ಆದರೆ ಅದನ್ನು ನಿರ್ವಹಿಸಲು ಮಾರುತಿ ಸುಜುಕಿಗೆ ನೀಡಲಾಗುವುದು.

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಜಪಾನ್ ಮೂಲದ ಎರಡು ದಿಗ್ಗಜ ಕಂಪನಿಗಳ ನಡುವಿನ ಜಂಟಿ ಅಭಿವೃದ್ಧಿಯು ಬ್ರ್ಯಾಂಡ್‌ಗಳಿಗೆ ರಿಬ್ಯಾಡ್ಜ್ ಮಾದರಿಯಲ್ಲಿ ಎರಡು ಮಿಡ್ ಎಸ್‍ಯುಗಳಿಗೂ ಕಾರಣವಾಗುತ್ತದೆ. ಎರಡು ಮಿಡ್ ಎಸ್‍ಯುವಿಗಳು ಒಂದೇ ರೀತಿಯ ಆಧಾರಗಳನ್ನು ಮುಂದಕ್ಕೆ ಸಾಗಿಸುತ್ತವೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಟೊಯೊಟಾ ಡಿಜಿಎನ್‌ಎ ಅರ್ಕಿಟೆಕ್ಚರ್ ಅನ್ನು ಬಳಸುತ್ತವೆ. ವಿನ್ಯಾಸ ಮತ್ತು ಸ್ಟೈಲಿಂಗ್ ಗಳು ವಿಭಿನ್ನವಾಗಿರುತ್ತದೆ. ಆಯಾ ಬ್ರ್ಯಾಂಡ್‌ನ ವಿನ್ಯಾಸ ಭಾಷೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗುತ್ತದೆ.

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಹೊಸ ಮಿಡ್ ಎಸ್‍ಯುವಿ ಮಾರುತಿ ಸುಜುಕಿಯ ವಿಶ್ವಾಸಾರ್ಹ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ನಿಂದ ಬರಲಿದೆ. ಎಂಜಿನ್‌ನ ಟರ್ಬೊ-ಪೆಟ್ರೋಲ್ ಆವೃತ್ತಿಯು ಭವಿಷ್ಯದಲ್ಲಿ ಸಹ ಪೈಪ್‌ಲೈನ್‌ನಲ್ಲಿರಬಹುದು ಎಂದು ವರದಿಗಳು ಸೂಚಿಸುತ್ತವೆ.

ಕ್ರೆಟಾ ಮತ್ತು ಸೆಲ್ಟೊಸ್‌ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್‍ಯುವಿ

ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಮಿಡ್ ಎಸ್‍ಯುವಿಯನ್ನು ಜಂಟಿ ಅಭಿವೃದ್ಧಿ ಪಡಿಸುವುದರಿಂದ ಎರಡೂ ಬ್ರ್ಯಾಂಡ್‌ಗಳು ಆರ್ಥಿಕ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಈ ಹೊಸ ಮಿಡ್ ಎಸ್‍ಯುವಿಯನ್ನು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಪೈಪೋಟಿ ನೀಡಲು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು.

Most Read Articles

Kannada
English summary
New Toyota-Maruti Suzuki SUV Coming Soon. Read In Kannada.
Story first published: Friday, December 4, 2020, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X