Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರೆಟಾ ಮತ್ತು ಸೆಲ್ಟೊಸ್ಗೆ ಟಕ್ಕರ್ ನೀಡಲು ಬರಲಿದೆ ಟೊಯೊಟಾ-ಮಾರುತಿ ಸುಜುಕಿಯ ಹೊಸ ಎಸ್ಯುವಿ
ಟೊಯೊಟಾ ಮತ್ತು ಮಾರುತಿ ಸುಜುಕಿ ಒಂದೆರಡು ವರ್ಷಗಳ ಹಿಂದೆ ಪಾಲುದಾರಿಕೆಯನ್ನು ಆರಂಭಿಸಿದ್ದರು. ಅಂದಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ಈ ಎರಡು ದಿಗ್ಗಜ ಕಂಪನಿಗಳು ಸೇರಿ ಎರಡು 'ರಿಬ್ಯಾಡ್ಡ್' ಮಾದರಿಗಳನ್ನು ಪರಿಚಯಿಸಿದೆ.

ಟೊಯೊಟಾ ಮತ್ತು ಮಾರುತಿ ಸುಜುಕಿ ಸಹಭಾಗಿತ್ವವು ಈಗ ಹೊಸ ಮಿಡ್ ಎಸ್ಯುವಿ ವಿಭಾಗಕ್ಕೆ ಜಂಟಿಯಾಗಿ ಹೊಚ್ಚ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲಿದೆ ವರದಿಗಳಾಗಿದೆ. ಆಟೋಕಾರ್ ಇಂಡಿಯಾದ ಪ್ರಕಾರ, 2022ರ ನಂತರದ ಟೊಯೊಟಾದೊಂದಿಗೆ ಉತ್ಪಾದನಾ ಯೋಜನೆಗಳಲ್ಲಿ ಒಂದು ನಿರ್ದಿಷ್ಟ ಬದಲಾವಣೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್ಯುವಿಯನ್ನು ಟೊಯೊಟಾ ಕಂಪನಿಯ ಬಿಡದಿಯಲ್ಲಿರುವ ಘಟಕದಲ್ಲಿ ತಯಾರಿಸುವ ಯೋಜನೆ ಆರಂಭದಲ್ಲಿತ್ತು. ಆದರೆ ಈಗ ಹೊಸ ಎಸ್ಯುವಿಯನ್ನು ಟೊಯೊಟಾ ಘಟಕದಲ್ಲಿ ತಯಾರಿಸುವ ಯೋಜನೆಯನ್ನು ರೂಪಿಸುತ್ತಿದ್ದಾರೆ.

ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಯು ಹೊಸದಾಗಿ ಬಿಡುಗಡೆಗೊಳಿಸುವ ಮಿಡ್ ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್ಯುವಿಗೆ ನೇರ ಪೈಪೋಟಿ ನೀಡುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಹಾಗೂ ಮಾರುತಿ ಸುಜುಕಿ ಕಂಪನಿಗಳು 2017ರಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಟೊಯೊಟಾ ಕಂಪನಿ ಹಾಗೂ ಮಾರುತಿ ಸುಜುಕಿ ಕಂಪನಿಗಳು ತಮ್ಮ ಕಾರುಗಳನ್ನು ಒಬ್ಬರಿಗೊಬ್ಬರು ತಮ್ಮ ಕಂಪನಿಗಳ ಬ್ಯಾಡ್ಜ್ ಅಡಿ ತಯಾರಿಸಿ ಬಿಡುಗಡೆಗೊಳಿಸಿ, ಮಾರಾಟ ಮಾಡಬಹುದು.

ಪ್ರಸ್ತುತ ಟೊಯೊಟಾ ಕಂಪನಿಯು ರಾಮನಗರ ಬಳಿಯ ಬಿಡಡಿಯಲ್ಲಿ ಎರಡು ಉತ್ಪಾದನಾ ಕೇಂದ್ರಗಳಿದೆ. ಇಲ್ಲಿ ಟೊಯೊಟಾದ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ತಯಾರಿಸುತ್ತಿದ್ದರೆ, ಇನ್ನೊಂದರಲ್ಲಿ ಯಾರೀಸ್ ಮತ್ತು ಕ್ಯಾಮ್ರಿ ಹೈಬ್ರಿಡ್ ಕಾರುಗಳನ್ನು ಉತ್ಪಾದಿಸಲಾಗುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ವರದಿಗಳ ಪ್ರಕಾರ ಟೊಯೊಟಾ ಕಂಪನಿಯ ಎರಡನೇ ಘಟಕದಲ್ಲಿ ಹೊಸ ಮಿಡ್ ಎಸ್ಯುವಿಯನ್ನು ತಯಾರಿಸಲಾಗುತ್ತದೆ. ಆದರೆ ಅದನ್ನು ನಿರ್ವಹಿಸಲು ಮಾರುತಿ ಸುಜುಕಿಗೆ ನೀಡಲಾಗುವುದು.

ಜಪಾನ್ ಮೂಲದ ಎರಡು ದಿಗ್ಗಜ ಕಂಪನಿಗಳ ನಡುವಿನ ಜಂಟಿ ಅಭಿವೃದ್ಧಿಯು ಬ್ರ್ಯಾಂಡ್ಗಳಿಗೆ ರಿಬ್ಯಾಡ್ಜ್ ಮಾದರಿಯಲ್ಲಿ ಎರಡು ಮಿಡ್ ಎಸ್ಯುಗಳಿಗೂ ಕಾರಣವಾಗುತ್ತದೆ. ಎರಡು ಮಿಡ್ ಎಸ್ಯುವಿಗಳು ಒಂದೇ ರೀತಿಯ ಆಧಾರಗಳನ್ನು ಮುಂದಕ್ಕೆ ಸಾಗಿಸುತ್ತವೆ.
MOST READ: ಕ್ರ್ಯಾಶ್ ಟೆಸ್ಟ್ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಟೊಯೊಟಾ ಡಿಜಿಎನ್ಎ ಅರ್ಕಿಟೆಕ್ಚರ್ ಅನ್ನು ಬಳಸುತ್ತವೆ. ವಿನ್ಯಾಸ ಮತ್ತು ಸ್ಟೈಲಿಂಗ್ ಗಳು ವಿಭಿನ್ನವಾಗಿರುತ್ತದೆ. ಆಯಾ ಬ್ರ್ಯಾಂಡ್ನ ವಿನ್ಯಾಸ ಭಾಷೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗುತ್ತದೆ.

ಹೊಸ ಮಿಡ್ ಎಸ್ಯುವಿ ಮಾರುತಿ ಸುಜುಕಿಯ ವಿಶ್ವಾಸಾರ್ಹ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ನಿಂದ ಬರಲಿದೆ. ಎಂಜಿನ್ನ ಟರ್ಬೊ-ಪೆಟ್ರೋಲ್ ಆವೃತ್ತಿಯು ಭವಿಷ್ಯದಲ್ಲಿ ಸಹ ಪೈಪ್ಲೈನ್ನಲ್ಲಿರಬಹುದು ಎಂದು ವರದಿಗಳು ಸೂಚಿಸುತ್ತವೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಮಿಡ್ ಎಸ್ಯುವಿಯನ್ನು ಜಂಟಿ ಅಭಿವೃದ್ಧಿ ಪಡಿಸುವುದರಿಂದ ಎರಡೂ ಬ್ರ್ಯಾಂಡ್ಗಳು ಆರ್ಥಿಕ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಈ ಹೊಸ ಮಿಡ್ ಎಸ್ಯುವಿಯನ್ನು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್ಯುವಿಗೆ ಪೈಪೋಟಿ ನೀಡಲು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು.