ವೈರಸ್ ಭೀತಿ: ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೆ ಹೊಸ ಸುರಕ್ಷಾ ಮಾರ್ಗಸೂಚಿ ಪ್ರಕಟ

ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ಮೂರನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಷರತ್ತುಬದ್ದ ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಪುನಾರಂಭಿಸಿವೆ.

ವೈರಸ್ ಭೀತಿ: ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೆ ಹೊಸ ಸುರಕ್ಷಾ ಮಾರ್ಗಸೂಚಿ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ಕೂಡಾ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಪುನಾರಂಭಿಸಿದ್ದು, ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಉದ್ಯಮ ವ್ಯವಹಾರಗಳನ್ನು ಕೈಗೊಳ್ಳುತ್ತಿದೆ. ಜೊತೆಗೆ ಗ್ರಾಹಕರ ಸೇವೆಗಳಿಗೂ ಚಾಲನೆ ನೀಡಿರುವ ಮಾರುತಿ ಸುಜುಕಿಯು ಸೋಂಕು ಹರಡದಂತೆ ಗರಿಷ್ಠ ಎಚ್ಚರಿಕೆ ಕ್ರಮಗಳನ್ನು ಪ್ರಕಟಿಸಿದ್ದು, ವ್ಯವಹಾರದ ಸಂದರ್ಭದಲ್ಲಿ ಸುರಕ್ಷಾ ವಿಚಾರವಾಗಿ ಯಾವುದೇ ರಾಜಿ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.

ವೈರಸ್ ಭೀತಿ: ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೆ ಹೊಸ ಸುರಕ್ಷಾ ಮಾರ್ಗಸೂಚಿ

ದೇಶಾದ್ಯಂತ ಈಗಾಗಲೇ ಬಹುತೇಕ ಕಾರು ಮಾರಾಟ ಮಳಿಗೆಗಳ್ನು ತೆರೆದಿರುವ ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೂ ಚಾಲನೆ ನೀಡಿದ್ದು, ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಹಂತದ ಸುರಕ್ಷತೆ ಕಾಯ್ದುಕೊಳ್ಳುವಂತೆ ಮಾರ್ಗಸೂಚಿ ನೀಡಿದೆ.

ವೈರಸ್ ಭೀತಿ: ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೆ ಹೊಸ ಸುರಕ್ಷಾ ಮಾರ್ಗಸೂಚಿ

ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿ ಬಳಕೆ ಮಾಡುವಂತೆ ಸೂಚನೆ ನೀಡಿದೆ.

ವೈರಸ್ ಭೀತಿ: ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೆ ಹೊಸ ಸುರಕ್ಷಾ ಮಾರ್ಗಸೂಚಿ

ಹಾಗೆಯೇ ಅಧಿಕೃತ ವಾಹನಗಳ ಮಾರಾಟ ಮಳಿಗೆಗಳಲ್ಲೂ ಹೆಚ್ಚಿನ ಮಟ್ಟದ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದ್ದು, ನಿಯಮಿತವಾಗಿ ಟೆಸ್ಟಿಂಗ್ ವಾಹನಗಳ ಸ್ವಚ್ಚತೆ, ಸಿಬ್ಬಂದಿಯ ಆರೋಗ್ಯ ತಪಾಸಣೆ, ಸಿಬ್ಬಂದಿ ನಡುವೆ ಸಾಮಾಜಿಕ ಅಂತರ, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್ ಶೀಲ್ಡ್ ಕಡ್ಡಾಯ ಬಳಕೆ ಮಾಡಬೇಕಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ವೈರಸ್ ಭೀತಿ: ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೆ ಹೊಸ ಸುರಕ್ಷಾ ಮಾರ್ಗಸೂಚಿ

ಇದಲ್ಲದೇ ಗ್ರಾಹಕರ ಸೇವೆಗಳನ್ನು ಕೈಗೊಳ್ಳುವ ಸಿಬ್ಬಂದಿ ಕೂಡಾ ನಿಗದಿತ ಸ್ಥಳದಿಂದ ಹೊರಹೊಗುವಾಗ ಮತ್ತು ಒಳಬರುವಾಗ ಥರ್ಮಾಮೀಟರ್‌ನಿಂದ ಟೆಸ್ಟಿಂಗ್ ಕಡ್ಡಾಯವಾಗಿದ್ದು, ಸರ್ವೀಸ್‌ಗೆ ಬರುವ ವಾಹನಗಳನ್ನು ಕೂಡಾ ಪೂರ್ತಿಯಾಗಿ ನಂಜುನಿರೋಧಕ ರಸಾಯನಿಕಗಳಿಂದ ಶುಚಿಗೊಳಿಸಿದ ನಂತರವೇ ರೀಪೆರಿ ಮತ್ತು ವಿತರಣೆ ಮಾಡುತ್ತದೆ.

ವೈರಸ್ ಭೀತಿ: ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೆ ಹೊಸ ಸುರಕ್ಷಾ ಮಾರ್ಗಸೂಚಿ

ಇನ್ನು ಹೊಸ ವಾಹನಗಳನ್ನು ನೇರವಾಗಿ ಶೋರೂಂನಲ್ಲಿ ವಿತರಣೆಯನ್ನು ತಪ್ಪಿಸುವುದಕ್ಕಾಗಿ ಹೊಸ ಮಾರ್ಗ ಕಂಡುಕೊಂಡಿರುವ ವಾಹನ ಕಂಪನಿಗಳು ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಆನ್‌ಲೈನ್ ಬುಕ್ಕಿಂಗ್ ಪಡೆದುಕೊಂಡು ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುತ್ತಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ವೈರಸ್ ಭೀತಿ: ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳಿಗೆ ಹೊಸ ಸುರಕ್ಷಾ ಮಾರ್ಗಸೂಚಿ

ಈ ವೇಳೆಯೂ ಗ್ರಾಹಕರಿಗೆ ಗರಿಷ್ಠ ಸುರಕ್ಷತೆಯೊಂದಗೆ ವಾಹನಗಳನ್ನು ವಿತರಣೆ ಮಾಡಲಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಗರಿಷ್ಠ ಮುಂಜಾಗ್ರತೆ ಕೈಗೊಳ್ಳುತ್ತಿದ್ದು, ಸಂಕಷ್ಟದ ನಡುವೆಯೂ ಉದ್ಯಮ ವ್ಯವಹಾರವನ್ನು ಕಾಯ್ದುಕೊಳ್ಳಲು ಹರಸಾಹಸಪಡುತ್ತಿವೆ.

Most Read Articles

Kannada
English summary
Maruti Suzuki True Value Dealerships Receive Safety Guidelines For Operation Restart. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X