ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಮಾರುತಿ ಸುಜುಕಿ ಕಂಪನಿಯು ತನ್ನ ಬಹು ನಿರೀಕ್ಷಿತ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ. ಹೊಸ ಫೇಸ್‍‍ಲಿಫ್ಟ್ ಕಾರ್ ಅನ್ನು ಮುಂದಿನ ತಿಂಗಳು ನಡೆಯಲಿರುವ 2020ರ ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳಿಸಲಾಗುವುದು.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಆಟೋಕಾರ್ ಇಂಡಿಯಾ ವರದಿಗಳ ಪ್ರಕಾರ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರ್ ಅನ್ನು ಆಟೋ ಎಕ್ಸ್​ಪೋದ ಎರಡನೇ ದಿನವಾದ ಫೆಬ್ರವರಿ 6ರಂದು ಮಾರುತಿ ಸುಜುಕಿ ಕಂಪನಿಯ ಸ್ಟಾಂಡ್‍‍ನಲ್ಲಿ ಅನಾವರಣಗೊಳಿಸಲಾಗುವುದು. ಅನಾವರಣಗೊಂಡ ಕೆಲವು ದಿನಗಳ ನಂತರ ವಿಟಾರ ಬ್ರಿಝಾ ಕಾರ್ ಅನ್ನು ಬಿಡುಗಡೆಗೊಳಿಸಲಾಗುವುದು.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಈ ಕಾಂಪ್ಯಾಕ್ಟ್ ಎಸ್‍‍ಯುವಿಯ ಎಕ್ಸ್ ಟಿರಿಯರ್ ಸ್ಟೈಲಿಂಗ್ ಹಾಗೂ ಇಂಟಿರಿಯರ್‍‍ನಲ್ಲಿ ಹಲವು ಅಪ್‍‍ಡೇಟ್ ಹಾಗೂ ಬದಲಾವಣೆಗಳನ್ನು ಮಾಡಲಾಗಿದೆ. ಇದರ ಜೊತೆಗೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರಿನಲ್ಲಿ ಹಲವು ಹೊಸದಾದ ಹಾಗೂ ಅಪ್‍‍ಡೇಟ್ ಮಾಡಲಾದ ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳಿವೆ.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಫೇಸ್‍‍ಲಿಫ್ಟ್ ವಿಟಾರ ಬ್ರಿಝಾದಲ್ಲಿರುವ ಮುಂಭಾಗದ ಗ್ರಿಲ್, ಬಂಪರ್, ಹೆಡ್‍‍ಲ್ಯಾಂಪ್ ಕ್ಲಸ್ಟರ್ ಹಾಗೂ ಎಲ್‍ಇ‍‍ಡಿ ಡಿ‍ಆರ್‍ಎಲ್‍‍ಗಳನ್ನು ಅಪ್‍‍ಡೇಟ್ ಮಾಡಲಾಗಿದೆ. ಇದರ ಜೊತೆಗೆ ಹಳೆಯ ಕಾರಿನಲ್ಲಿರುವುದಕ್ಕಿಂತ ದೊಡ್ಡ ಗಾತ್ರದ ಫಾಗ್ ಲ್ಯಾಂಪ್ ಹೌಸಿಂಗ್‍, ಮುಂಭಾಗ ಹಾಗೂ ಹಿಂಭಾಗದಲ್ಲಿ ಫಾಕ್ಸ್ ಸ್ಕೀಡ್ ಪ್ಲೇಟ್‍‍ಗಳಿವೆ.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಇದರ ಜೊತೆಗೆ ಮಾರುತಿ ಸುಜುಕಿ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರಿನಲ್ಲಿ ಹೊಸ ಡೈಮಂಡ್ ಕಟ್ ಅಲಾಯ್ ವ್ಹೀಲ್, ಎಲ್‍ಇ‍‍ಡಿ ಟೇಲ್‍‍ಲೈಟ್ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಮಾಡಲಾದ ಹಿಂಭಾಗದ ಬಂಪರ್‍‍ಗಳಿವೆ. ಹೊಸ ಕಾರು ಹೊಸ ವಿನ್ಯಾಸದ ಬಣ್ಣಗಳನ್ನು ಹೊಂದಿದೆ.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಈ ಬಣ್ಣಗಳು ವಿಟಾರ ಬ್ರಿಝಾ ಕಾರಿಗೆ ಪ್ರೀಮಿಯಂ ಫೀಲ್ ನೀಡುತ್ತವೆ. ಹೊಸ ಎಸ್‍‍ಯುವಿಯ ಎಕ್ಸ್ ಟಿರಿಯರ್‍‍ನಲ್ಲಿ ಮಾತ್ರವಲ್ಲದೇ ಇಂಟಿರಿಯರ್‍‍‍ನಲ್ಲಿಯೂ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಇವುಗಳಲ್ಲಿ ಅಪ್‍‍ಡೇಟೆಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮಾರುತಿ ಸುಜುಕಿ ಕಂಪನಿಯ ಸ್ಮಾರ್ಟ್ ಪ್ಲೇ ಸ್ಟುಡಿಯೊ ಜೊತೆಗೆ ಆಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ ದೊಡ್ಡ ಗಾತ್ರದ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂಗಳಿವೆ.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಫೇಸ್‍‍ಲಿಫ್ಟ್ ಎಸ್‍‍ಯುವಿಯಲ್ಲಿ ಮಾಡಲಾಗಿರುವ ಅತಿದೊಡ್ಡ ಬದಲಾವಣೆಯೆಂದರೆ ಬಿ‍ಎಸ್ 6 ಎಂಜಿನ್. ಮಾರುಕಟ್ಟೆಯಲ್ಲಿರುವ ಎರ್ಟಿಗಾ ಹಾಗೂ ಸಿಯಾಜ್ ಕಾರುಗಳಲ್ಲಿರುವಂತಹ ಕೆ15 ಸೀರಿಸ್‍‍ನ 1.5 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಈ ಎಸ್‍‍ಯುವಿಯಲ್ಲಿ ಅಳವಡಿಸಲಾಗಿದೆ.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಈ ಪೆಟ್ರೋಲ್ ಎಂಜಿನ್ 105 ಬಿ‍‍ಹೆಚ್‍‍ಪಿ ಪವರ್ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಗಳಲ್ಲಿ 4 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ನೀಡಲಾಗುವುದು.

ಆಟೋ ಎಕ್ಸ್​ಪೋದಲ್ಲಿ ಅನಾವರಣಗೊಳ್ಳಲಿದೆ ವಿಟಾರ ಬ್ರಿಝಾ ಫೇಸ್‍‍ಲಿಫ್ಟ್ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯ ವಿಟಾರ ಬ್ರಿಝಾ ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಸ್‍‍ಯುವಿಯಾಗಿದೆ. 2016ರಲ್ಲಿ ಬಿಡುಗಡೆಯಾದ ಈ ಎಸ್‍‍ಯುವಿಯು ಕೆಲವೇ ದಿನಗಳಲ್ಲಿ ಈ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಎಸ್‍‍ಯುವಿ ಎಂಬ ಹೆಗ್ಗಳಿಕೆಯನ್ನು ಹೊಂದಿತು. ಈ ಎಸ್‍‍ಯುವಿಯು ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್ ಯುವಿ 300 ಹಾಗೂ ಫೋರ್ಡ್ ಇಕೊಸ್ಪೋರ್ಟ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Maruti Vitara Brezza Facelift Launch Date Confirmed: Unveil At 2020 Auto Expo. Read in Kannada.
Story first published: Wednesday, January 15, 2020, 11:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X