ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಮಾರುತಿ ಸುಜುಕಿ ಕಂಪನಿಯ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯು ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯು ಮೂರು ಲಕ್ಷ ಮಾರಾಟವಾಗಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಭಾರತೀಯ ಮಾರುಕಟ್ಟೆಯಲ್ಲಿ ಮೂರು ತಲೆಮಾರುಗಳಲ್ಲಿ 24 ಲಕ್ಷ ವ್ಯಾಗನ್ಆರ್ ಮಾರಾಟವಾಗಿದೆ. ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ವ್ಯಾಗನ್ಆರ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದ್ದ ವ್ಯಾಗನ್ಆರ್ ಅನ್ನು ಮಾರುತಿ ಸುಜುಕಿ ಸಿಎನ್‌ಜಿ ಆವೃತ್ತಿಯಲ್ಲಿಯು ಬಿಡುಗಡೆಗೊಳಿಸಿದ್ದರು. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಹೊಸ ಮೈಲಿಗಲ್ಲು ಸಾಧಿಸಿರುವುದರ ಬಗ್ಗೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರು ಮಾತನಾಡಿ, ಸುಮಾರು ಎರಡು ದಶಕಗಳಿಂದ ಭಾರತದ ಟಾಪ್-10 ಕಾರುಗಳಲ್ಲಿ ನಿರಂತರವಾಗಿ ಕಾಣಿಸಿಕೊಂಡಿರುವ ಮಾರುತಿ ಸುಜುಕಿ ವ್ಯಾಗನ್ಆರ್ ತನ್ನ ವಿಭಾಗದಲ್ಲಿ ನಾಯಕನಾಗಿ ಮುಂದುವರೆದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಗನ್ಆರ್ 1999ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ 24 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಗ್ರಾಹಕರ ಬೆಂಬಲಕ್ಕಾಗಿ ಧನ್ಯವಾದ ಹೇಳಲು ನಾವು ಈ ಅವಕಾಶವನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಮಾರುತಿ ಸುಜುಕಿ ವ್ಯಾಗನ್ಆರ್ ಅನ್ನು ಎರಡು ಆವೃತ್ತಿಗಳಲ್ಲಿ 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಮಾರಾಟ ಮಾಡಲಾಗುತ್ತದೆ. ಎಸ್-ಸಿಎನ್‌ಜಿ ಆವೃತ್ತಿಯು 1.0-ಲೀಟರ್ ಪೆಟ್ರೋಲ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಇದು 58 ಬಿಹೆಚ್‌ಪಿ ಮತ್ತು 78 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ಇದನ್ನು ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ(ಒ) ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ, ಇದರಲ್ಲಿ ಸುರಕ್ಷತೆಗಾಗಿ ಡ್ರೈವರ್-ಸೈಡ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಹೈಸ್ಪೀಡ್ ಅಲರ್ಟ್, ಸೀಟ್‌ಬೆಲ್ಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರ ಪೀಚರ್ ಗಳನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಇನ್ನು ಎಲ್‌ಎಕ್ಸ್‌ಐ(ಒ) ರೂಪಾಂತರದಲ್ಲಿ ಪ್ರಯಾಣಿಕರ ಬದಿಯ ಏರ್‌ಬ್ಯಾಗ್ ಮತ್ತು ಹೊಸ ಫೀಚರ್ ಗಳನ್ನು ಹೊಂದಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯು 33.54 ಕಿಮೀ ಮೈಲೇಜ್ ಅನ್ನು ನೀಡುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಇದರೊಂದಿಗೆ ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಕಳೆದ 10 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇಕೋ ಮಾದರಿಯ 7 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಕಂಪನಿಯು ಇಕೋ ವ್ಯಾನ್ ಅನ್ನು ಭಾರತದಲ್ಲಿ 2010ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿ

ಇನ್ನು ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯಲ್ಲಿ ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಡ್ಯುಯಲ್ ಇಸಿಯುಗಳನ್ನು ಒಳಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಿಎನ್‌ಜಿ ಆವೃತ್ತಿಗಳಲ್ಲಿ ವ್ಯಾಗನ್ಆರ್ ಸಿಎನ್‌ಜಿ ಕೂಡ ಒಂದಾಗಿದೆ.

Most Read Articles

Kannada
English summary
Maruti Suzuki WagonR CNG Sales Cross The 3 Lakh. Read In Kannada.
Story first published: Friday, September 25, 2020, 16:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X