ಕಾರು ಮಾರಾಟ ಹೆಚ್ಚಿಸಲು ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದ ಖ್ಯಾತ ಕಾರು ತಯಾರಕ ಕಂಪನಿ

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿರುವ ತನ್ನ ಕಂಪನಿಯ ಶೋರೂಂಗಳನ್ನು ತೆರೆದಿದ್ದು, ಕಾರುಗಳ ಮಾರಾಟವನ್ನು ಆರಂಭಿಸಿದೆ. ಬೇರೆ ಕಂಪನಿಗಳು ತಮ್ಮ ಕಾರುಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿವೆ. ಆದರೆ ಮಾರುತಿ ಸುಜುಕಿ ಕಂಪನಿಯು ಯಾವುದೇ ರಿಯಾಯಿತಿಯನ್ನು ನೀಡುತ್ತಿಲ್ಲ.

ಕಾರು ಮಾರಾಟ ಹೆಚ್ಚಿಸಲು ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದ ಖ್ಯಾತ ಕಾರು ತಯಾರಕ ಕಂಪನಿ

ಲಾಕ್‌ಡೌನ್ ಕಾರಣದಿಂದಾಗಿ ಭಾರತದ ಎಲ್ಲಾ ಶೋರೂಂಗಳನ್ನು ಸುಮಾರು 2 ತಿಂಗಳ ಕಾಲ ಮುಚ್ಚಲಾಗಿತ್ತು. ವಾಹನ ಮಾರಾಟವನ್ನು ಪುನರಾರಂಭಿಸಿರುವ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳ ಮಾರಾಟದ ಮೇಲೆ ಭಾರೀ ಪ್ರಮಾಣದ ರಿಯಾಯಿತಿಯನ್ನು ನೀಡುತ್ತಿವೆ. ಬಿಎಸ್ 6 ಮಾದರಿಗಳ ಮೇಲೂ ರಿಯಾಯಿತಿಯನ್ನು ನೀಡುತ್ತಿವೆ.

ಕಾರು ಮಾರಾಟ ಹೆಚ್ಚಿಸಲು ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದ ಖ್ಯಾತ ಕಾರು ತಯಾರಕ ಕಂಪನಿ

ಶೋರೂಂಗಳನ್ನು ತೆರೆದ ನಂತರ ಕಂಪನಿಗಳು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ಹೆಚ್ಚು ಜನರು ಕಾರು ಖರೀದಿಸುವ ಬಗ್ಗೆ ಉತ್ಸುಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುವ ಅಗತ್ಯವಿದೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕಾರು ಮಾರಾಟ ಹೆಚ್ಚಿಸಲು ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದ ಖ್ಯಾತ ಕಾರು ತಯಾರಕ ಕಂಪನಿ

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಕಂಪನಿಯ ಅಧ್ಯಕ್ಷರಾದ ಆರ್.ಸಿ.ಭಾರ್ಗವರವರು ಕಾರುಗಳ ಮೇಲೆ ನೀಡುವ ರಿಯಾಯಿತಿಯು ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಒಂದು ತಿಂಗಳು ಅಥವಾ ಎರಡು ತಿಂಗಳ ನಂತರ ನಾವು ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಹೊಂದಿರುವುದಿಲ್ಲವೆಂದು ಹೇಳಿದರು.

ಕಾರು ಮಾರಾಟ ಹೆಚ್ಚಿಸಲು ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದ ಖ್ಯಾತ ಕಾರು ತಯಾರಕ ಕಂಪನಿ

ದೊಡ್ಡ ಪ್ರಮಾಣದ ರಿಯಾಯಿತಿ ನೀಡುವ ಅಗತ್ಯವನ್ನು ನಾನು ಕಾಣುತ್ತಿಲ್ಲ. ಮಾರುಕಟ್ಟೆ ಹೇಗೆ ಇರಲಿದೆ ಎಂಬ ಬಗ್ಗೆ ನಮಗೆ ತಿಳಿಯುವುದಿಲ್ಲ. ರಿಯಾಯಿತಿಗಳು ಮಾರುಕಟ್ಟೆ ಸ್ಥಿತಿಯನ್ನು ಅವಲಂಬಿಸಿರುತ್ತವೆ. ಮಾರುಕಟ್ಟೆ ಸ್ಥಿತಿ ಪ್ರತಿ ತಿಂಗಳು ಬದಲಾಗುತ್ತಿರುತ್ತದೆ ಎಂದು ಅವರು ಹೇಳಿದರು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರು ಮಾರಾಟ ಹೆಚ್ಚಿಸಲು ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದ ಖ್ಯಾತ ಕಾರು ತಯಾರಕ ಕಂಪನಿ

ಉಳಿದ ಕಂಪನಿಗಳಂತೆ ಮಾರುತಿ ಸುಜುಕಿ ಕಂಪನಿಯು ಕೂಡ ಏಪ್ರಿಲ್‌ ತಿಂಗಳಿನಲ್ಲಿ ಯಾವುದೇ ಕಾರುಗಳನ್ನು ಮಾರಾಟ ಮಾಡಿಲ್ಲ. ಮಾರುತಿ ಸುಜುಕಿ ಕಂಪನಿಯು ತನ್ನ ಉತ್ಪಾದನೆಯನ್ನು ಪುನರಾರಂಭಿಸಿದೆ. ಕೇವಲ ಒಂದು ಶಿಫ್ಟ್‌ನಲ್ಲಿ ಮಾತ್ರ ಉತ್ಪಾದನೆಯನ್ನು ಆರಂಭಿಸಲಾಗಿದೆ. ಇದರಿಂದಾಗಿ ಕಾರುಗಳ ಉತ್ಪಾದನೆ ಕಡಿಮೆಯಾಗಿದೆ.

ಕಾರು ಮಾರಾಟ ಹೆಚ್ಚಿಸಲು ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದ ಖ್ಯಾತ ಕಾರು ತಯಾರಕ ಕಂಪನಿ

ಲಾಕ್‌ಡೌನ್‌ನ ವಿನಾಯಿತಿಯ ನಂತರ ಮಾರುತಿ ಸುಜುಕಿ ಕಂಪನಿಯ ಶೋರೂಂಗಳನ್ನು ತೆರೆಯಲಾಗಿದೆ. ಕಂಪನಿಯು ಮೇ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯ ಬುಕ್ಕಿಂಗ್‌ಗಳನ್ನು ಪಡೆದಿದೆ. ಮೇ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 5000 ವಾಹನಗಳನ್ನು ವಿತರಿಸಿದ್ದು, ಮಾರಾಟವು ನಿಧಾನವಾಗಿ ಚೇತರಿಕೆ ಕಾಣುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರು ಮಾರಾಟ ಹೆಚ್ಚಿಸಲು ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದ ಖ್ಯಾತ ಕಾರು ತಯಾರಕ ಕಂಪನಿ

ಕಾರುಗಳ ಮೇಲೆ ರಿಯಾಯಿತಿಗಳನ್ನು ಡೀಲರ್‌ಶಿಪ್‌ಗಳ ಹಂತದಲ್ಲಿ ನೀಡಲಾಗುತ್ತದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಡೀಲರ್‌ಗಳು ಕಾರುಗಳ ಮೇಲೆ ದೊಡ್ಡ ಪ್ರಮಾಣದ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ ನಂತರ ಕಾರುಗಳ ಮಾರಾಟ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Maruti Suzuki will not offer big discounts to increase demand says company Chairman. Read in Kannada.
Story first published: Friday, May 22, 2020, 15:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X