ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೊಸ ಕಾರುಗಳ ಅಭಿವೃದ್ದಿ ಮತ್ತು ಮಾರಾಟದ ವಿಭಾಗದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಶೀಘ್ರದಲ್ಲೇ ತನ್ನ ಜನಪ್ರಿಯ ಎರ್ಟಿಗಾ ಎಂಪಿವಿ ಆವೃತ್ತಿಯಲ್ಲಿ ಎಕ್ಸ್ಎಲ್ 7 ವರ್ಷನ್ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಈಗಾಗಲೇ ಎರ್ಟಿಗಾ ಆವೃತ್ತಿಯಲ್ಲಿ ಎಕ್ಸ್ಎಲ್ 6 ಆವೃತ್ತಿಯನ್ನು ಮಾರಾಟ ಮಾಡುತ್ತಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಎಕ್ಸ್ಎಲ್ 7 ಆವೃತ್ತಿಯನ್ನು ಅಭಿವೃದ್ದಿಗೊಳಿಸಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಕೈಗೊಂಡಿದೆ. ಹೊಸ ಕಾರು ತಾಂತ್ರಿಕವಾಗಿ ಸಾಮಾನ್ಯ ಎರ್ಟಿಗಾ ಮಾದರಿಯಂತೆ ಅಭಿವೃದ್ದಿಗೊಂಡಿದ್ದು, ಮೂರನೇ ಸಾಲಿನಲ್ಲಿರುವ ಆಸನವನ್ನು ವಿಸ್ತರಿಸಲು ಕಾರಿನ ಗಾತ್ರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಇದರ ಹೊರತಾಗಿ ಹೊಸ ಕಾರಿನ ಕುರಿತಾಗಿ ಯಾವುದೇ ಮಾಹಿತಿ ಇಲ್ಲವಾದರೂ ಹೊಸ ಕಾರು ಬಿಎಸ್-6 ನಿಯಮ ಜಾರಿ ನಂತರ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಎಕ್ಸ್ಎಲ್ 6 ಆವೃತ್ತಿಗಿಂತ ತುಸು ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿದೆ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಸಾಮಾನ್ಯ ಎರ್ಟಿಗಾಗಿಂತ ರೂ.70 ಸಾವಿರ ಹೆಚ್ಚುವರಿ ಬೆಲೆ ಪಡೆದಿರುವ ಎಕ್ಸ್‌ಎಲ್6 ಮಾದರಿಯು ಸದ್ಯ ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.79 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 11.46 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದೀಗ ಎಕ್ಸ್ಎಲ್ 7 ಮಾದರಿಯು ಎಕ್ಸ್ಎಲ್ 6ಗಿಂತ ರೂ.20 ಸಾವಿರದಿಂದ ರೂ.30 ಸಾವಿರ ದುಬಾರಿಯಾಗಿರಲಿದೆ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಎಕ್ಸ್ಎಲ್6 ಕಾರು ಎರ್ಟಿಗಾ ಕಾರಿನ ಜೆಟಾ ಮತ್ತು ಅಲ್ಫಾ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಎಕ್ಸ್ಎಲ್6 ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಎಕ್ಸ್ಎಲ್6 ಕಾರು ಕೇವಲ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿ ಮಾಡಬಹುದಾಗಿದ್ದು, ಡೀಸೆಲ್ ಎಂಜಿನ್ ಪರಿಚಯಿಸಿಲ್ಲ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೀಗಾಗಿ ಇದು ವ್ಯಯಕ್ತಿಯ ಕಾರು ಬಳಕೆದಾರನ್ನೇ ಗುರಿಯಾಗಿಸಿ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರು ಬಿಎಸ್-6 ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಕೆ15ಬಿ ಪೆಟ್ರೋಲ್ ಎಂಜಿನ್ ಮೂಲಕ 105-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹಾಗೆಯೇ ಎಕ್ಸ್ಎಲ್ 7 ಮಾದರಿಯು ಕೂಡಾ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, 4,445 ಎಂಎಂ ಉದ್ದ, 1,775 ಎಂಎಂ ಅಗಲ ಹಾಗೂ 1,700 ಎಂಎಂ ಎತ್ತರವನ್ನು ಹೊಂದಿರುವ ಎಕ್ಸ್ಎಲ್6 ಕಾರಿಗಿಂತಲೂ ತುಸು ವಿಭಿನ್ನವಾದ ಇಂಟಿರಿಯರ್ ಹೊಂದಿರಲಿದೆ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಇನ್ನು ಮಲ್ಟಿ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಕಾರು ಮಾರಾಟ ವಿಭಾಗದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಬಿಡುಗಡೆಯಾದ ಕೆಲವೇ ವರ್ಷಗಳಲ್ಲಿ ಬರೋಬ್ಬರಿ 5 ಲಕ್ಷ ಯುನಿಟ್ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

2013ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸಿದ್ದ ಎರ್ಟಿಗಾ ಕಾರು ಮಾದರಿಯು ಇದುವರೆಗೂ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಹಳೆಯ ತಲೆಮಾರಿನ ಕಾರು ಮಾದರಿಯು 4,18,128 ಯುನಿಟ್ ಮಾರಾಟಗೊಂಡಿದ್ದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದ ಹೊಸ ತಲೆಮಾರಿನ ಎರ್ಟಿಗಾ ಆವೃತ್ತಿಯು ಬರೋಬ್ಬರಿ 1 ಲಕ್ಷ ಯುನಿಟ್ ಮಾರಾಟಗೊಂಡಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ 5 ಲಕ್ಷ ಯುನಿಟ್ ಮಾರಾಟಗೊಂಡ ಹೆಗ್ಗಳಿಕೆಗೆ ಪಾತ್ರವಾಗಿರುವ ಎರ್ಟಿಗಾ ಕಾರು ಶೀಘ್ರದಲ್ಲೇ ಮತ್ತಷ್ಟು ಹೊಸತನದೊಂದಿಗೆ ರಸ್ತೆಗಿಳಿಯಲು ಸಿದ್ದತೆ ನಡೆಸಿದೆ.

ಎಕ್ಸ್ಎಲ್ 7 ಎರ್ಟಿಗಾ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಎರ್ಟಿಗಾ ಕಾರು ಬಿಎಸ್-6 ಎಂಜಿನ್ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್, ಬಿಎಸ್-4 ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು ಸಿಎನ್‌ಜಿ ಎಂ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಡೀಸೆಲ್ ಎಂಜಿನ್ ಕೂಡಾ ಬಿಎಸ್-6 ನಿಯಮ ಅನುಸಾರ ನವೀಕರಣಗೊಳ್ಳಲಿದೆ.

Most Read Articles

Kannada
English summary
Maruti Suzuki XL7 Ertiga based MPV spy pics design details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X