ವಿದೇಶಿ ಮಾರುಕಟ್ಟೆಗಾಗಿ ಎಕ್ಸ್ಎಲ್7 ಅಭಿವೃದ್ದಿಪಡಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಾಹನಗಳ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಶ್ರೇಣಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ.

ವಿದೇಶಿ ಮಾರುಕಟ್ಟೆಗಾಗಿ ಎಕ್ಎಲ್7 ಅಭಿವೃದ್ದಿಪಡಿಸಿದ ಮಾರುತಿ ಸುಜುಕಿ

ಭಾರತದಲ್ಲಿ ಮಾರಾಟಗೊಳ್ಳುವ ಹಲವಾರು ಕಾರು ಮಾದರಿಗಳನ್ನು ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಳಿಸುವ ಮಾರುತಿ ಸುಜುಕಿ ಕಂಪನಿಯು ಕೈಗೆಟುವಕುವ ಬೆಲೆಯಿಂದಾಗಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಎರ್ಟಿಗಾ ಮಾದರಿಯೊಂದಿಗೆ ಅಭಿವೃದ್ದಿಗೊಳಿಸಲಾದ ಎಕ್ಸ್ಎಲ್6 ಮಾದರಿಯು ಇದೀಗ ವಿದೇಶಿ ಮಾರುಕಟ್ಟೆಗಳಲ್ಲಿ ಎಕ್ಸ್ಎಲ್7 ಹೆಸರಿನೊಂದಿಗೆ ಮಾರಾಟಗೊಳ್ಳಲು ಸಿದ್ದವಾಗುತ್ತಿದೆ.

ವಿದೇಶಿ ಮಾರುಕಟ್ಟೆಗಾಗಿ ಎಕ್ಎಲ್7 ಅಭಿವೃದ್ದಿಪಡಿಸಿದ ಮಾರುತಿ ಸುಜುಕಿ

ಇಂಡೋನೇಷ್ಯಾದಲ್ಲಿ ಅನಾವರಣಗೊಂಡಿರುವ ಎಕ್ಸ್ಎಲ್7 ಮಾದರಿಯು ಎಂಪಿವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಎಕ್ಸ್ಎಲ್6 ಮಾದರಿಯನ್ನೇ ಆಧಾರಿಸಿ ಹೊಸ ಕಾರನ್ನು ಅಭಿವೃದ್ದಿಪಡಿಸಲಾಗಿದೆ.

ವಿದೇಶಿ ಮಾರುಕಟ್ಟೆಗಾಗಿ ಎಕ್ಎಲ್7 ಅಭಿವೃದ್ದಿಪಡಿಸಿದ ಮಾರುತಿ ಸುಜುಕಿ

ಮೂಲ ಕಾರು ಮಾದರಿಯಾದ ಎರ್ಟಿಗಾ ಕಾರಿನಲ್ಲೇ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಎಕ್ಸ್ಎಲ್6 ಎಂಪಿವಿ ಮಾದರಿಯನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಆಗ್ನೇಯ ಏಷ್ಯಾದ ರಾಷ್ಟ್ರಗಳಿಗಾಗಿ ಎಕ್ಸ್ಎಲ್7 ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಎಕ್ಸ್ಎಲ್7 ಮಾದರಿಯ ಹೊರ ನೋಟವು ಎಕ್ಸ್ಎಲ್6 ಕಾರಿಗಿಂತಲೂ ತುಸು ಭಿನ್ನವಾಗಿದ್ದು, 7 ಸೀಟರ್ ಸೌಲಭ್ಯದೊಂದಿಗೆ ಎಂಪಿವಿ ಖರೀದಿದಾರರ ಗಮನಸೆಳೆಯಲಿದೆ. 2+3+2 ಆಸನ ಮಾದರಿಯನ್ನು ಹೊಂದಿರುವ ಎಕ್ಸ್ಎಲ್7 ಮಾದರಿಯು ಎಕ್ಸ್ಎಲ್6 ಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.

ವಿದೇಶಿ ಮಾರುಕಟ್ಟೆಗಾಗಿ ಎಕ್ಎಲ್7 ಅಭಿವೃದ್ದಿಪಡಿಸಿದ ಮಾರುತಿ ಸುಜುಕಿ

ಎಕ್ಸ್ಎಲ್7 ಕಾರಿನ ಗ್ರಿಲ್, ಬಂಪರ್, ಹುಡ್, ಹೆಡ್‌ಲೈಟ್, ಟೈಲ್‌ಲೈಟ್ ಸೌಲಭ್ಯವು ಎಕ್ಸ್‌ಎಲ್ 6 ಮಾದರಿಯ ಹೋಲಿಕೆಯನ್ನೇ ಪಡೆದುಕೊಂಡಿದ್ದು, ಎಕ್ಸ್‌ಎಲ್7 ಕಾರಿನಲ್ಲಿ ಡ್ಯುಯಲ್ ಟೋನ್ 16-ಇಂಚಿನ ಅಲಾಯ್ ವೀಲ್ಹ್ ನೀಡಿದ್ದಲ್ಲಿ ಎಕ್ಸ್‌ಎಲ್6 ಮಾದರಿಯು 15-ಇಂಚಿನ ಅಲಾಯ್ ವೀಲ್ಹ್ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವಿದೇಶಿ ಮಾರುಕಟ್ಟೆಗಾಗಿ ಎಕ್ಎಲ್7 ಅಭಿವೃದ್ದಿಪಡಿಸಿದ ಮಾರುತಿ ಸುಜುಕಿ

ಆದರೆ ಎಕ್ಸ್ಎಲ್6 ಮಾದರಿಯಲ್ಲಿ ಮಧ್ಯದ ಆಸನ ಮೂಲಕ ಪ್ರಯಾಣಿಕರಿಗೆ ಪ್ರತ್ಯೇಕ ಆರ್ಮ್ ರೆಸ್ಟ್ ಮತ್ತು ಹೆಡ್ ರೆಸ್ಟ್ ಹೊಂದಿದ್ದರೆ ಎಕ್ಸ್ಎಲ್7 ಮಾದರಿಯಲ್ಲಿ 7 ಆಸನ ಸೌಲಭ್ಯ ಜೋಡಣೆಯಿಂದಾಗಿ ಅಂತಹ ಸೌಲಭ್ಯವಿಲ್ಲ ಎನ್ನಬಹುದು.

ವಿದೇಶಿ ಮಾರುಕಟ್ಟೆಗಾಗಿ ಎಕ್ಎಲ್7 ಅಭಿವೃದ್ದಿಪಡಿಸಿದ ಮಾರುತಿ ಸುಜುಕಿ

ಇನ್ನು ಎಕ್ಸ್ಎಲ್7 ಕಾರು ಮಾದರಿಯು ಎಕ್ಸ್ಎಲ್6 ಮಾದರಿಯಲ್ಲೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಳ್ಳುತ್ತದೆ.

MOST READ: ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..!

ವಿದೇಶಿ ಮಾರುಕಟ್ಟೆಗಾಗಿ ಎಕ್ಎಲ್7 ಅಭಿವೃದ್ದಿಪಡಿಸಿದ ಮಾರುತಿ ಸುಜುಕಿ

ಎಕ್ಸ್ಎಲ್7 ಮಾದರಿಯು ಸದ್ಯಕ್ಕೆ ಇಂಡೋನೇಷ್ಯಾ, ಥೈಲ್ಯಾಂಡ್ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಮಾದರಿಯನ್ನು ಭಾರತದಲ್ಲಿ ಮಾಡುವ ಬಗೆಗೆ ಯಾವುದೇ ನಿಖರ ಮಾಹಿತಿಗಳಿಲ್ಲ. ಭಾರತದಲ್ಲಿ ಈಗಾಗಲೇ ಎರ್ಟಿಗಾ ಮಾದರಿಯು 7 ಸೀಟರ್ ಮತ್ತು ಪ್ರೀಮಿಯಂ ಸೌಲಭ್ಯ ಬಯಸುವ ಗ್ರಾಹಕರಿಗೆ ಎಕ್ಸ್ಎಲ್6 ಖರೀದಿಗೆ ಲಭ್ಯವಿರುವದರಿಂದ ಹೊಸ ಮಾದರಿಯ ಕಾರು ಬಿಡುಗಡೆಯಾಗುವುದು ಖಚಿತತೆಯಿಲ್ಲ.

Most Read Articles

Kannada
English summary
Maruti XL7 walkaround video features specifications details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X