ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ವ್ಯಾಗನ್‍ಆರ್ ಎಲೆಕ್ಟ್ರಿಕ್ ಕಾರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಈ ಕಾರ್ ಅನ್ನು ಮುಂಬರುವ 2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ದೇಶದಲ್ಲಿ ಅಲ್ಲೊಂದು ಇಲ್ಲೊಂದು ಕಾಣುತ್ತಿದ್ದ ಎಲೆಕ್ಟ್ರಿಕ್‌ ವಾಹನಗಳು, ಇಂದು ಎಲ್ಲೆಡೆಯು ಕಾಣುತ್ತವೆ. ಇದರಿಂದ ಜನಪ್ರಿಯ ಕಂಪನಿಗಳು ಪೈಪೋಟಿಗೆ ಇಳಿದು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಇದೇ ಸಾಲಿನಲ್ಲಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಮಾಡಲು ಮುಂದಾಗಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸುವ ಮೊದಲು ಸ್ಪೈ ವೀಡಿಯೋವನ್ನು 91 ವ್ಹೀಲ್ಸ್ ಬಹಿರಂಗಗೊಳಿಸಿದೆ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಈ ವೀಡಿಯೋ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯ ಇಂಟಿರಿಯರ್ ಅನ್ನು ಬಹಿರಂಗಪಡಿಸಿದೆ. ಹೊಸ ಎಲೆಕ್ಟ್ರಿಕ್ ಮಾರುತಿ ವ್ಯಾಗನ್‍ಆರ್‍‍ನ ಇಂಟಿರಿಯರ್‍‍ನಲ್ಲಿ ದೊಡ್ಡ ಸೆಂಟ್ರಲ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಗೇರ್ ಬಾಕ್ಸ್ ಸಮೀಪ ಬಿ ಮತ್ತು ಡಿ ಎಂಬ ಅಕ್ಷರಗಳನ್ನು ಸಹ ಕಾಣಬಹುದು. ವ್ಯಾಗನ್ಆರ್ ಎಲೆಕ್ಟ್ರಿಕ್ ಹ್ಯಾಚ್‍‍ಬ್ಯಾಕ್‍ನಲ್ಲಿರುವ ಈ ಅಕ್ಷರಗಳು ಡ್ರೈವ್ ಮೋಡ್‍‍ಗಳು ಎಂದು ಭಾವಿಸುತ್ತೇವೆ. ಇಂಟಿರಿಯರ್‍‍‍ನಲ್ಲಿ ಸೆಂಟರ್ ಕನ್ಸೋಲ್‍‍ನ ಪಕ್ಕದಲ್ಲಿರುವ ಎಸಿ ವೆಂಟ್ಸ್ ಗಳಿವೆ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಎರಡೂ ಎಸಿ ವೆಂಟ್ಸ್ ಸುತ್ತಲೂ ಸಿಲ್ವರ್ ಅಂಶಗಳನ್ನು ನೀಡಲಾಗಿದೆ. ಇನ್ಫೋಟೇನ್‍‍ಮೆಂಟ್ ಡಿಸ್‍‍ಪ್ಲೇ ಕೆಳಗೆ ಕ್ಲೈಮೆಟ್ ಕಂಟ್ರೋಲ್ ಮತ್ತು ಇನ್ನೂಂದು ಸಣ್ಣ ಡಿಸ್‍‍ಪ್ಲೇಯನ್ನು ಅಳವಡಿಸಲಾಗಿದೆ. ಇನ್ನೂ ಉಳಿದ ಕೆಲವು ಪ್ರಮುಖ ಭಾಗಗಳನ್ನು ಮರೆಮಾಚಲಾಗಿದೆ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಸ್ಪೈ ವೀಡಿಯೋದಲ್ಲಿ ಇಂಟಿರಿಯರ್ ಹೊರತಾಗಿ ಸ್ವಲ್ಪ ಮಟ್ಟಿಗೆ ಹೊರಭಾಗವು ಬಹಿರಂಗಪಡಿಸಲಾಗಿದೆ. ಇದರಲ್ಲಿ ಇಗ್ನಿಸ್ ಕಾರಿನ ಮಾದರಿಯ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ ಟೇಲ್ ಲೈಟ್‍ಗಳ ಜೊತೆಯಲ್ಲಿ ರೇರ್ ವಿಂಡೋ ವೈಪರ್ ಮತ್ತು ಡಿಫೋಗರ್ ಅನ್ನು ಅಳವಡಿಸಲಾಗಿದೆ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಮಾರುತಿ ಸುಜುಕಿ ವ್ಯಾಗನ್‍ಆರ್ ಎಲೆಕ್ಟ್ರಿಕ್ ಕಾರಿನ ಹಿಂಭಾಗದ ಕೆಲವು ಅಂಶಗಳು ಬಹಿರಂಗವಾಗಿಲ್ಲ. ಕಳೆದ ವರ್ಷ ಕಂಪನಿಯು ವ್ಯಾಗನ್‍ಆರ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಟೆಸ್ಟ್ ಮಾಡಿ ಅಭಿವೃದ್ದಿಪಡಿಸಲು ಪ್ರಾರಂಭಿಸಿದ್ದರು.

ಹೊಸ ಹ್ಯಾಚ್‍‍ಬ್ಯಾಕ್ ಅನ್ನು ಭಾರತದ ಚಾಲನಾ ಪರಿಸ್ಥಿತಿಗಳಿಗೆ ಸೂಕ್ತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಕಳೆದ ವರ್ಷ ಸ್ಪಾಟ್ ಟೆಸ್ಟ್ ಮಾಡಿದ ವ್ಯಾಗನ್ಆರ್ ಜಪಾನೀಸ್ ಸ್ಪೆಕ್ ಮಾದರಿಯಾಗಿತ್ತು. ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಗನ್‍ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಇನ್ನೂ ಕೂಡ ಯಾವುದೇ ನಿಖರವಾದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಹೊಸ ವ್ಯಾಗನ್‍ಆರ್ ಎಲೆಕ್ಟ್ರಿಕ್ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಚ್ ಮಾಡಿದಾಗ 200 ಕಿ.ಮೀ ಚಲಿಸುತ್ತದೆ. ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಈ ಹ್ಯಾಚ್‍‍ಬ್ಯಾಕ್ ಹೊಂದಿದೆ. ವ್ಯಾಗನ್‍ಆರ್ ಎಲೆಕ್ಟ್ರಿಕ್ ಕಾರಿನ ಇಂಟಿರಿಯರ್ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನ ವ್ಯಾಗನ್‍ಆರ್ ಆಗಬಹುದು. ಮಾರುತಿ ಸುಜುಕಿ ಕಂಪನಿಯು ಭಾರತದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ದೊಡ್ಡ ಮಟ್ಟದ ಗ್ರಾಹಕರನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ವ್ಯಾಗನ್‍ಆರ್ ಎಲೆಕ್ಟ್ರಿಕ್ ಹ್ಯಾಚ್‍‍ಬ್ಯಾಕ್ ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
New Maruti WagonR Interiors Spied For The First Time: Spy Pics, Video & Details - Read in Kannada
Story first published: Thursday, January 9, 2020, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X