ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎ-ಕ್ಲಾಸ್ ಲಿಮೋಸಿನ್ ಕಾರನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಮರ್ಸಿಡಿಸ್ ಬೆಂಝ್ ತನ್ನ ಹೊಸ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ಈ ಹೊಸ ಎ-ಕ್ಲಾಸ್ ಲಿಮೋಸಿನ್ ಕಾರಿಗೆ ರೂ.2 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಅಳವಡಿಸಿದೆ. ಇಂಟಿಗ್ರೇಟೆಡ್ ಡಿಆರ್‍ಎಲ್‍‍ಗಳನ್ನು ಹೊಂದಿರುವ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದೆ. ಐಷಾರಾಮಿ ಸೆಡಾನ್ ಎ-ಕ್ಲಾಸ್‍‍ನಲ್ಲಿ ದೊಡ್ಡ ರೂಫ್ ಅನ್ನು ಹೊಂದಿದೆ. ದೊಡ್ಡದಾದ ಸ್ವೆಫ್ಟ್ ಲೈಟ್ ಮತ್ತು ಹಿಂಭಾಗದಲ್ಲಿ ಆಕರ್ಷಕ ಬಂಪರ್ ಅನ್ನು ಹೊಂದಿದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ವಿಶೇಷವಾಗಿ ಎ-ಕ್ಲಾಸ್ ಕಾರಿನಲ್ಲಿ ಟ್ವೀಕ್ಡ್ ಫ್ರಂಟ್ ಗ್ರಿಲ್ ಮತ್ತು ಬಂಪರ್, ಸ್ಪೋರ್ಟಿಯರ್ ಅಲಾಯ್ ವ್ಹೀಲ್, ಆಗ್ರೆಸಿವ್ ಹಿಂಭಾಗದ ಡಿಫ್ಯೂಸರ್ ಮತ್ತು ವೃತ್ತಕಾರದ ಡ್ಯುಯಲ್ ಟಿಪ್ ಎಕ್ಸಾಸ್ಟ್ ಪೈಪ್‍‍ಗಳನ್ನು ಒಳಗೊಂಡಿದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ಎ-ಕ್ಲಾಸ್ ಕಾರಿನ ಇಂಟಿರಿಯರ್‍‍ನಲ್ಲಿ ದೊಡ್ಡ ಸಲೂನ್‍‍ಗಳನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಎಂಬಿ‍‍ಯುಎಕ್ಸ್ ಸಿಸ್ಟಂ, ವಾಯ್ಸ್ ಕಂಟ್ರೋಲ್‍ ಮತ್ತು ಫ್ರೀಸ್ಟ್ಯಾಂಡಿಂಗ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇನ್ಫೋಟೇನ್‍‍ಮೆಂಟ್ ಡಿಸ್‍‍ಪ್ಲೇ ಸುತ್ತಲೂ ಮೂರು ವೃತ್ತಾಕಾರದ ಕ್ರೋಮ್ ಮತ್ತು ಕ್ರೋಮ್ ಕವರ್ ಆಗಿರುವ ಸ್ಟೀಯರಿಂಗ್ ನಿಂದ ಕಾರಿನ ಇಂಟಿರಿಯರ್ ಐಷಾರಾಮಿ ಲುಕ್ ಅನ್ನು ಹೊಂದಿದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ಈ ಕಾರಿನಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 306 ಬಿ‍‍ಹೆಚ್‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ಇನ್ನು ಈ ಕಾರಿನಲ್ಲಿ 4 ಮ್ಯಾಟಿಕ್ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ. ಈ ಎಎಂಜಿ ಎ35 ಕಾರು ಕೇವಲ 4.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ಮರ್ಸಿಡಿಸ್‍ ಬೆಂಝ್ ಎ-ಕ್ಲಾಸ್ ಕಾರು ಎಂಎಫ್ಎ 2 ಪ್ಲಾಟ್‍‍ಫಾರ್ಮ್‍ ಅನ್ನು ಆಧರಿಸಿದೆ. ಈ ಕಾರುಗಳನ್ನು ನಾಕ್ ಡೌ‍‍ನ್(ಸಿಕೆಡಿ) ಮೂಲಕ ಭಾರತಕ್ಕೆ ತರಲಾಗುತ್ತದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ಚೀನಾ ಮಾರುಕಟ್ಟೆಯಲ್ಲಿ ಈ ಸೆಡಾನ್ ಉದ್ದವಾದ ವ್ಹೀಲ್ ಬೇಸ್‍‍ನಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಈ ಸೆಡಾನ್ 2,729 ಎಂಎಂ ವ್ಹೀಲ್‍‍ಬೇಸ್ ಅನ್ನು ಹೊಂದಿದೆ. ಈ ಕಾರಿಗೆ ಎ-ಕ್ಲಾಸ್ ನಿಂದ ಪ್ರತ್ಯೇಕಿಸಲು ಮರ್ಸಿಡಿಸ್ ಸೆಡಾನ್ ಎ-ಕ್ಲಾಸ್ ಲಿಮೋಸಿನ್ ಎಂಬ ನಾಮಕರಣ ಮಾಡಲು ಮರ್ಸಿಡಿಸ್ ಕಂಪನಿ ನಿರ್ಧರಿಸಿದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಆರಂಭ

ಈ ಐಷಾರಾಮಿ ಕಾರು ಭಾರತದಲ್ಲಿ ಬಿಡುಗಡೆಯಾದ ಬಳಿಕ ಆಡಿ ಎ‍3 ಮತ್ತು ಮುಂಬರುವ ಬಿ‍ಎಂಡಬ್ಲೂ 2 ಸೀರಿಸ್ ಕಾರಿಗೆ ಪೈಪೋಟಿ ನೀಡುತ್ತದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.40 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
You Can Book A Mercedes-Benz A-Class Limousine For Rs 2 lakh In India. Read in Kannada.
Story first published: Wednesday, February 26, 2020, 13:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X