ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎ-ಕ್ಲಾಸ್ ಸೆಡಾನ್ ಅನ್ನು ಭಾರತದಲ್ಲಿ 2019ರಲ್ಲಿ ಬಿಡುಗಡೆಗೊಳಿಸಲಿದೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಮರ್ಸಿಡಿಸ್ ಬೆಂಝ್ ಕಳೆದ ವರ್ಷ ಎ-ಕ್ಲಾಸ್ ಬೆಂಝ್ ಅನ್ನು ಬಿಡುಗಡೆಗೊಳಿಸಲಾಗಿಲ್ಲ.

ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ 2020ರ ಆಟೋ ಎಕ್ಸ್ ಪೋದಲ್ಲಿ ಎ-ಕ್ಲಾಸ್ ಸೆಡಾನ್ ಅನ್ನು ಪ್ರದರ್ಶನಪಡಿಸಲಿದೆ ಎಂದು ಕಂಪನಿಯು ಖಚಿತಪಡಿಸಿದೆ. ಈ ವರ್ಷದ ಕೊನೆಯಲ್ಲಿ ಈ ಸೆಡಾನ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಇಂಡಿಯನ್ ಸ್ಪೆಕ್ ಎ-ಕ್ಲಾಸ್ ಸೆಡಾನ್ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಕಾರನ್ನು ಚಕ್ನ್‍‍ನಲ್ಲಿರುವ ತಯಾರಕ ಘಟಕದಲ್ಲಿ ಅಭಿವೃದ್ದಿಪಡಿಸಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

ಇಂಟರ್‍‍ನ್ಯಾಷನಲ್-ಸ್ಪೆಕ್ ಮಾದರಿಯು ಹಲವು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.3 ಲೀಟರ್ ಪೆಟ್ರೋಲ್ ಎಂಜಿನ್ ಕೂಡ ಒಂದಾಗಿದೆ. ಈ ಎಂಜಿನ್ 136 ಬಿ‍‍ಹೆಚ್‍‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದೇ ಎಂಜಿನ್ 163 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಕೂಡ ಇದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

ಇನ್ನೂ 2.0 ಲೀಟರ್ ಇನ್‍‍ಲೈನ್ 4 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಈ ಎಂಜಿನ್ 224 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಫೀಡ್ ಜಿ-ಡಿಸಿಟಿ ಆಟೋ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನೂ 1.5 ಡೀಸೆಲ್ ಎಂಜಿನ್‍‍ನಲ್ಲಿ 116 ಬಿ‍ಹೆಚ್‍‍ಪಿ ಪವರ್ ಮತ್ತು 260 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

ಎ-ಕ್ಲಾಸ್ ಸೆಡಾನ್ ಇಂಟಿರಿಯರ್‍‍ನಲ್ಲಿ ದೊಡ್ಡ ಸಲೂನ್‍‍ಗಳನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಎಂಬಿ‍‍ಯುಎಕ್ಸ್ ಸಿಸ್ಟಂ, ವಾಯ್ಸ್ ಕಂಟ್ರೋಲ್‍ ಮತ್ತು ಫ್ರೀಸ್ಟ್ಯಾಂಡಿಂಗ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇನ್ಫೋಟೇನ್‍‍ಮೆಂಟ್ ಡಿಸ್‍‍ಪ್ಲೇ ಸುತ್ತಲೂ ಮೂರು ವೃತ್ತಾಕಾರದ ಕ್ರೋಮ್ ಮತ್ತು ಕ್ರೋಮ್ ಕವರ್ ಆಗಿರುವ ಸ್ಟೀಯರಿಂಗ್ ನಿಂದ ಕಾರಿನ ಇಂಟಿರಿಯರ್ ಐಷಾರಾಮಿ ಲುಕ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

ಎಂಬಿ ಇಂಡಿಯನ್ ಲೈನ್‍ಅಪ್‍ನಲ್ಲಿ ಸಿಎಲ್ಎ ಕೂಪ್ ಅನ್ನು ಬದಲಾಯಿಸಿ ಆ ಸ್ಥಾನಕ್ಕೆ ಎ-ಕ್ಲಾಸ್ ಸೆಡಾನ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ವಾದವಿತ್ತು. ಆದರೆ ಜರ್ಮನಿಯ ವಾಹನ ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ಈ ವಾದವನ್ನು ನಿರಾಕರಿಸಿದೆ. ಮುಂದಿನ ದಿನಗಳಲ್ಲಿ ಜಿಎಲ್‍‍ಸಿ ನವೀಕರಸಿ ಬಿಡುಗಡೆಗೊಳಿಸಲಿದೆ.

ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

ಸಿಎಲ್ಎ ಮತ್ತು ಎ-ಕ್ಲಾಸ್ ಸೆಡಾನ್ ಹೊರತಾಗಿ, ಮರ್ಸಿಡಿಸ್ ಬೆಂಝ್ ಕಂಪನಿಯು ಜಿ‍ಎಲ್ಇ ಎಸ್‍‍ಯುವಿಯನ್ನು ಕೂಡ ಬಿಡುಗಡೆಗೊಳಿಸಲಿದೆ. ಈ ಎಲ್ಲಾ ಮೂರು ಕಾರುಗಳು ಮರ್ಸಿಡಿಸ್‍ನ ಎಂಎಫ್ಎ ಪ್ಲಾಟ್‍‍ಫಾರ್ಮ್‍ನಲ್ಲಿ ತಯಾರಿಸಲಾಗಿದೆ. ಈ ಕಾರುಗಳನ್ನು ನಾಕ್ ಡೌ‍‍ನ್(ಸಿಕೆಡಿ) ಮೂಲಕ ಭಾರತಕ ತರಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

2020ರ ಜಿಎಲ್ಇ ಎಸ್‍‍ಯು‍ವಿಯಲ್ಲಿ 3.0 ಲೀಟರ್ 400ಡಿ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 3,600 - 4,000 ಆರ್‍‍ಪಿ‍ಎಂನಲ್ಲಿ 330 ಬಿ‍ಹೆಚ್‍ಪಿ ಪವರ್ ಮತ್ತು 1,200 - 3,000 ಆರ್‍‍ಪಿಎಂನಲ್ಲಿ 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಟೋ ಎಕ್ಸ್‌ಪೋ 2020: ಎ-ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ 2020ರ ಆಟೋ ಎಕ್ಸ್ ಪೋದಲ್ಲಿ ಎ-ಕ್ಲಾಸ್ ಸೆಡಾನ್ ಅನ್ನು ಪ್ರದರ್ಶಿಸಲಿದೆ. ಈ ಎ-ಕ್ಲಾಸ್ ಸೆಡಾನ್‍‍ನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.32 ಲಕ್ಷ ದಿಂದ 40 ಲಕ್ಷದವರೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Mercedes-Benz To Debut A-Class Sedan In India At 2020 Auto Expo. Read in Kannada
Story first published: Monday, January 27, 2020, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X