ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಇ-ಕ್ಲಾಸ್ 350ಡಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.75.29 ಲಕ್ಷಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ಹೊಸ ಇ ಕ್ಲಾಸ್ ಅನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು ಸೆಡಾನ್ ಸರಣಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೊಸ ಬೆಂಝ್ ಇ 350ಡಿ ಕಾರಿನಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರಿನಲ್ಲಿ 3.0-ಲೀಟರ್ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 282 ಬಿಹೆಚ್‌ಪಿ ಮತ್ತು 620 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ಈ ಎಂಜಿನ್ ನೊಂದಿಗೆ 9ಜಿ-ಟ್ರೋನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹಿಂದಿನ ಬಿಎಸ್-4 ಬೆಂಝ್ ಇ 350 ಡಿ ಆವೃತ್ತಿಗೆ ಹೋಲಿಸಿದರೆ 20 ಬಿಹೆಚ್‌ಪಿ ಮತ್ತು 20 ಎನ್ಎಂ ಟಾರ್ಕ್ ಹೆಚ್ಚು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ವಿ6 ಎಂಜಿನ್ ಹೊಂದಿರುವ ಹೊಸ ಇ-ಕ್ಲಾಸ್ ಸೆಡಾನ್ 5.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ಕ್ರಮಿಸುತ್ತದೆ. ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ 350ಡಿ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ಹೊಸ ಎಂಜಿನ್ ಅಪ್‌ಡೇಟ್‌ನ ಹೊರತಾಗಿ, ಹೊಸ ಮರ್ಸಿಡಿಸ್ ಬೆಂಜ್ ಇ 350 ಡಿ 18 ಇಂಚಿನ ದೊಡ್ಡ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಈ ಹೊಸ ಇ-ಕ್ಲಾಸ್ ಕಾರಿನಲ್ಲಿ ಏರ್ ಸಸ್ಪೆಂಕ್ಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರಿನ ಮುಂಭಾಗ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದ್ದರೆ ಹಿಂಭಾಗದಲ್ಲಿ ಎಲ್ಇಡಿ ಡಿಆರ್ಎಲ್ ಗಳನ್ನು ಅಳವಡಿಸಿದ್ದಾರೆ. ಇನ್ನು ಈ ಹೊಸ ಕಾರಿನಲ್ಲಿ 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಿಕಲ್ ಆಗಿ ಹೋಂದಾಣಿಕ ಮಾಡಬಹುದಾದ ಮುಂಭಾಗದ ಸೀಟುಗಳು, ಹಿಂಭಾಗದ ಪ್ರಯಾಣಿಕರಿಗೆ ವೈರ್ಲೆಸ್ ಚಾರ್ಜಿಂಗ್, 13 ಸ್ಪೀಕರ್ ಗಳೊಂದಿಗೆ ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಂ, ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ನಿತರ ಫೀಚರ್ ಗಳನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರಿನಲ್ಲಿ ಅಡಾಪ್ಟಿವ್ ಕನೆಕ್ಟೆಡ್ ಕಾರ್ ಟೆಕ್ನಾಲಜಿ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ. ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಈ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಮಲ್ಟಿಪಲ್ ಏರ್‌ಬ್ಯಾಗ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾ ಸೆನ್ಸರ್‌ಗಳು, ಹೈಸ್ಪೀಡ್ ಅಲರ್ಟ್ ಮತ್ತ್, ಎಂಜಿನ್ ಇಮೊಬೈಲೈಸರ್ ಅನ್ನು ಅಳವಡಿಸಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ 350ಡಿ ಕಾರು

ಇ-ಕ್ಲಾಸ್ ಸೆಡಾನ್‌ನ ಹೊಸ ಮರ್ಸಿಡಿಸ್ ಬೆಂಜ್ ಇ 350 ಡಿ ರೂಪಾಂತರವು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ರೇಂಜ್-ಟಾಪಿಂಗ್ ಮಾದರಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸರಣಿಯಲ್ಲಿ ಇ-ಕ್ಲಾಸ್ ಕಾರುಗಳನ್ನು ಹೆಚ್ಚು ಮಾರಾಟವಾಗುತ್ತದೆ. ಹೊಸ ಮರ್ಸಿಡಿಸ್ ಬೆಂಜ್ ಇ 350 ಡಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 530 ಡಿ ಮತ್ತು ಆಡಿ ಎ6 ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Mercedes-Benz E 350d Variant Launched In India. Read in Kannada.
Story first published: Saturday, April 25, 2020, 19:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X