Just In
- 22 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 59 min ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 1 hr ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 13 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- News
ಬೆಂಗಳೂರಿನಲ್ಲಿ 24 ತಾಸಿನಲ್ಲಿ ಮೂರು ಶೂಟೌಟ್!
- Sports
ಥಾಯ್ಲೆಂಡ್ ಓಪನ್ 2021: ಎರಡನೇ ಸುತ್ತಿಗೆ ಪ್ರವೇಶಿಸಿದ ಪಿವಿ ಸಿಂಧು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಫ್ ರೋಡಿಂಗ್ ಕೌಶಲ್ಯ ಪ್ರದರ್ಶನದಲ್ಲಿ ಗಮನಸೆಳೆದ ಮರ್ಸಿಡಿಸ್ ಬೆಂಝ್ ಇಕ್ಯೂಸಿ 4x4 ವರ್ಷನ್
ಜರ್ಮನ್ ಕಾರು ಉತ್ಪಾದನಾ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇಕ್ಯೂಸಿ 400 ಎಸ್ಯುವಿ ಮಾದರಿಯಲ್ಲಿ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ಕಾರು ಐಷಾರಾಮಿ ಪ್ರಯಾಣ ಒದಗಿಸುವುದಲ್ಲದೆ ಆಫ್ ರೋಡ್ ಪ್ರದರ್ಶನದಲ್ಲೂ ಗಮನಸೆಳೆಯುತ್ತಿದೆ.

ಹೊಸ ಇಕ್ಯೂಸಿ 400 ಕಾರು ಮಾದರಿಯು ಐಷಾರಾಮಿ ಪ್ರಯಾಣ ಒದಗಿಸುವುದರ ಜೊತೆಗೆ ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲೂ ಗಮನಸೆಳೆಯಲಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರಿನ ಮೊದಲ ಆಫ್ ರೋಡ್ ಕೌಶಲ್ಯದ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಆಫ್ ರೋಡ್ ಮಾದರಿಯು ಸಾಮಾನ್ಯ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, ಸಾಮಾನ್ಯ ಆವೃತ್ತಿಗಿಂತಲೂ ಆಫ್ ರೋಡ್ ಮಾದರಿಯು ಭಾರೀ ಬದಲಾವಣೆ ಪಡೆದುಕೊಂಡಿದೆ.

ಮರ್ಸಿಡಿಸ್ ಕಂಪನಿಯು ಸದ್ಯ ಇಕ್ಯೂಸಿ 400 ಮಾದರಿಯ ಸಾಮಾನ್ಯ ಆವೃತ್ತಿಯನ್ನು ಮಾತ್ರ ಮಾಡುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ 4x4 ವರ್ಷನ್ ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಎಲೆಕ್ಟ್ರಿಕ್ ಕಾರುಗಳು ಕೇವಲ ನಗರ ಪ್ರದೇಶಗಳಲ್ಲಿ ಪ್ರಯಾಣಕ್ಕೆ ಮಾತ್ರ ಸೀಮಿತ ಎನ್ನುವ ಅಭಿಪ್ರಾಯವನ್ನು ಬದಲಾಯಿಸುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಎಲೆಕ್ಟ್ರಿಕ್ ಕಾರು ಮಾದರಿಯ ಮೂಲಕ ಸಾಮಾನ್ಯ ಕಾರು ಮಾದರಿಗಳಂತೆಯೇ ಆಫ್ ರೋಡ್ ಕೌಶಲ್ಯ ಪ್ರದರ್ಶಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೊಸ ಆಫ್ ರೋಡ್ ಮಾದರಿಯು ಒರಟು ಭೂಪ್ರದೇಶಗಳಲ್ಲಿ ಸರಾಗವಾಗಿ ನುಗ್ಗಲು ಅನುಕೂಲಕರವಾಗುವಂತೆ ಜಿ-ಕ್ಲಾಸ್ ಮಾದರಿಗಿಂತ 23-ಎಂಎಂ ಎತ್ತರ, 140 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಅನ್ನು 293-ಎಂಎಂ ಗೆ ಎತ್ತರಿಸಲಾಗಿದ್ದು, ಯಾವುದೇ ಮಾದರಿಯ ರಸ್ತೆಗಳಲ್ಲೂ ಸುಲಭವಾಗಿ ಮುನ್ನುಗ್ಗುವ ಶಕ್ತಿ ಹೊಂದಿದೆ. ವಿಡಿಯೋದಲ್ಲಿ ಕಾಣುತ್ತಿರುವಂತೆ ವೆಕ್ಬೋರ್ಡ್ ಚಾಂಪಿಯನ್ಶಿಫ್ ಸನ್ನಿ ಮೇಜರ್ ಜೊತೆಗಿನ ಸರ್ಫಿಂಗ್ ಕೌಶಲ್ಯಕ್ಕೆ ಪೂರಕವಾಗಿ ಇಕ್ಯೂಸಿ ಕಾರಿನ ಪ್ರದರ್ಶನವು ಅಧ್ಬುತವಾಗಿದೆ.
ಇಕ್ಯೂಸಿ 4x4 ಪರಿಕಲ್ಪನೆ ಚಾಲನೆ ಸುಲಭಗೊಳಿಸುವಲ್ಲಿ 20 ಇಂಚಿನ ಆಫ್-ರೋಡ್ ಟೈರ್ಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಆಫ್ ರೋಡ್ಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಂದ ಪರ್ಫಾಮೆನ್ಸ್ ಸಾಧ್ಯವಿಲ್ಲ ಎನ್ನುವ ಅನುಮಾನಗಳಿಗೆ ಈ ವಿಡಿಯೋ ಉತ್ತಮ ಉದಾಹರಣೆಯಾಗಿದೆ.

ಇನ್ನು ಮರ್ಸಿಡಿಸ್ ಬೆಂಝ್ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಎಸ್ಯುವಿ ಕಾರು ಮಾದರಿಯಾಗಿರುವ ಇಕ್ಯೂಸಿ 400 ಆವೃತ್ತಿಯ ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್ಯುವಿಯು ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಗರಿಷ್ಠ 470 ಕಿ.ಮೀ ಮೈಲೇಜ್ ಹಿಂದಿರುಗಿಸುವ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ.

ಇಕ್ಯೂಸಿಯಲ್ಲಿನ ಫುಲ್ ಎಲೆಕ್ಟ್ರಿಕ್ ಪವರ್ಟ್ರೇನ್ ಮಾದರಿಯು 405-ಬಿಹೆಚ್ಪಿ ಪವರ್ ಮತ್ತು 765-ಎನ್ಎ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 5.1 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗದಲ್ಲಿ ಕ್ರಮಿಸುತ್ತದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಜೊತೆಗೆ 4x4 ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಕಾರು ಮಾದರಿಯು ಇಕೋ, ಕಂಫರ್ಟ್, ಡೈನಾಮಿಕ್ ಮತ್ತು ಇಂಡಿವಿಚ್ಯೂಲ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಒಳಗೊಂಡಿದ್ದು, ಚಾರ್ಜಿಂಗ್ ಸೌಲಭ್ಯಕ್ಕಾಗಿ ಇಕ್ಯೂಸಿ 400 ಮಲ್ಟಿಪಲ್ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ.

ಈ ಮೂಲಕ ಎಲೆಕ್ಟ್ರಿಕ್ ಎಸ್ಯುವಿ ಕಾರುಗಳಲ್ಲೇ ಹಲವಾರು ಐಷಾರಾಮಿ ಫೀಚರ್ಸ್ ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 99.30 ಲಕ್ಷ ಬೆಲೆ ಹೊಂದಿದ್ದು, ಈ ಇವಿ ಎಸ್ಯುವಿಗೆ ಭಾರತದಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಆದರೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ದವಾಗಿರುವ ಆಡಿ ಇ-ಟ್ರಾನ್ ಎಸ್ಯುವಿ ಕಾರು ಮರ್ಸಿಡಿಸ್ ಇಕ್ಯೂಸಿ ಜೊತೆ ಪ್ರತಿಸ್ಪರ್ಧಿಯಾಗಲಿದ್ದು, ಮಾಲಿನ್ಯ ತಡೆ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲೆ ನಿರ್ಬಂಧ ಹೇರುತ್ತಿರುವುದೇ ಎಲೆಕ್ಟ್ರಿಕ್ ವಾಹನ ಮಾರಾಟವು ನಿಧಾನವಾಗಿ ಬೆಳವಣಿಗೆ ಕಾಣಲು ಪ್ರಮುಖ ಕಾರಣವಾಗಿದೆ.