ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ಜಿಎಲ್‍‍ಎ ಎಸ್‍ಯುವಿಯನ್ನು ಇತ್ತೀಚೆಗೆ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಹೊಸ ಬೆಂಝ್ ಜಿಎಲ್‍ಎ ಎಸ್‍‍ಯುವಿಯನ್ನು ಅಕ್ಟೋಬರ್‌ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಜಿಎಲ್‍‍ಎ ಎಸ್‍ಯುವಿಯ ಹೆಸರನ್ನು ಸೇರಿಸಲಾಗಿದೆ. ಅಲ್ಲದೇ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡ ಜಿಎಲ್‍‍ಎ ಎಸ್‍ಯುವಿಯ ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಿದೆ. ಎಂಟ್ರಿ ಲೆವೆಲ್ ಜಿಎಲ್‍ಎ ಎಸ್‍‍ಯುವಿಯು ಹೊಸ ಎಂಫ್‍ಎ-2 ಪ್ಲಾಟ್‍‍‍‍ಫಾರಂ ಅನ್ನು ಆಧರಿಸಿದೆ. ಈ ಹೊಸ ಜಿಎಲ್‍ಎ ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.43 ಲಕ್ಷಗಳಾಗಿದೆ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಮರ್ಸಿಡಿಸ್‍ನ ಇತರ ಕಾಂಪ್ಯಾಕ್ಟ್ ಮಾದರಿಗಳಾದ ಹೊಸ ಎ-ಕ್ಲಾಸ್, ಸಿಎಲ್‍ಎ ಮತ್ತು ಜಿ‍ಎಲ್‍‍ಬಿ ಎಸ್‍‍ಯುವಿಗಳು ಕೂಡ ಇದೇ ಪ್ಲಾಟ್‍‍ಫಾರ್ಮ್ ಆಧರಿಸಿ ತಯಾರಾಗಿವೆ. ಹೊಸ ಜಿಎಲ್‍ಎ ಎಸ್‍‍ಯುವಿ, ಕ್ರಾಸ್‌ಒವರ್ ಮಾದರಿಯ ವಿನ್ಯಾಸವನ್ನು ಹೊಂದಿದೆ.

MOST READ: ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ಐ20 ಕಾರು

ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಹೊಸ ತಲೆಮಾರಿನ ಬೆಂಝ್ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಾರಿಗಿಂತ 100 ಎಂಎಂ ಎತ್ತರ, 20 ಎಂಎಂ ಉದ್ದವನ್ನು ಹೆಚ್ಚಿಸಿದೆ. 30 ಎಂಎಂ ಹೆಚ್ಚು ವ್ಹೀಲ್‍‍ಬೇಸ್ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಕ್ಯಾಬಿನ್ ಒಳಗೆ ಹೆಚ್ಚಿನ ಸ್ಪೇಸ್ ಅನ್ನು ನೀಡಲಾಗಿದೆ. ಹೊಸ ಮರ್ಸಿಡಿಸ್ ಜಿ‍ಎಲ್‍ಇ, ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍‍ಗಳಿಗಾಗಿ ಪ್ರತ್ಯೇಕ ಎರಡು ಸ್ಕ್ರೀನ್‍‍ಗಳನ್ನು ಹೊಂದಿರಲಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಹೊಸ ಜಿ‍ಎಲ್ಎ ಎಸ್‍ಯುವಿಯಲ್ಲಿ ಸೆಂಟರ್ ಕಂನ್ಸೋಲ್‍‍ನಲ್ಲಿ ಟಚ್‍‍ಪ್ಯಾಡ್ ಹಾಗೂ ಇಂಟಿಗ್ರೇಟೆಡ್ ಗ್ರಾಬ್ ಹ್ಯಾಂಡಲ್‍‍ಗಳಿರಲಿವೆ. ಹೊಸ ಎಸ್‍ಯುವಿಯ ಕ್ಯಾಬಿನ್‍‍‍ಗೆ ಪ್ರೀಮಿಯಂ ಅನುಭವವನ್ನು ನೀಡುವುದಕ್ಕಾಗಿ ಇಂಟಿರಿಯರ್‍‍ನಲ್ಲಿ ಕ್ಲೈಮೇಟ್ ಕಂಟ್ರೋಲ್, ಎಸಿ ವೆಂಟ್‍‍ಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಹೊಸ ಜಿಎಲ್ಎ ಎಸ್‍ಯುವಿ 220 ಡಿ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿ‍‍ಹೆಚ್‍ಪಿ ಪವರ್ ಮತ್ತು 400 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 163 ಬಿ‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಇನ್ನೂ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 306 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹೊಸ ಬೆಂಝ್ ಜಿಎ‍ಲ್ಎ ಎಸ್‍‍ಯು‍ವಿಯು ಆಕರ್ಷಕ ಲುಕ್ ಮತ್ತು ಹಲವಾರು ಫೀಚರ್ ಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

2020ರ ಜಿಎಲ್ಎ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 1, ಲ್ಯಾಂಡ್ ರೋವರ್ ಡಿಸ್ಕವರಿ, ಆಡಿ ಕ್ಯೂ 3 ಮತ್ತು ವೋಲ್ವೋ ಎಕ್ಸ್‌ಸಿ 40 ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New Mercedes-Benz GLA India Launch Timeline Revealed. Read in Kannada.
Story first published: Monday, May 18, 2020, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X