ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ಜಿಎಲ್‍ಇ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. 2020ರ ಬೆಂಝ್ ಜಿಎಲ್ಇ ಮರ್ಸಿಡಿಸ್ ಕಂಪನಿಯ ಎಂಟ್ರಿ ಲೆವೆಲ್ ಎಸ್‍‍ಯುವಿಯಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

2020ರ ಬೆಂಝ್ ಜಿಎಲ್ಇ ಎಸ್‍‍ಯುವಿಯು ಎರಡು ವೆರಿಯೆಂಟ್‍‍ನಲ್ಲಿ ಲಭ್ಯವಿದೆ. ಇದರಲ್ಲಿ ಬೇಸ್ ಡಿ ರೂಪಾಂತರದ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.73.70 ಲಕ್ಷಗಳಾಗಿದೆ. ಇನ್ನೂ ಟಾಪ್-ಸ್ಪೆಕ್ ಜಿಎಲ್ಇ 400ಡಿ ಎಲ್‍‍ಡಬ್ಲ್ಯುಬಿ (ಹಿಪ್-ಹಾಪ್ ಎಡಿಷನ್) ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.25 ಕೋಟಿಗಳಾಗಿದೆ. ಜಿ‍ಎಲ್‍ಇ ಎಸ್‍‍ಯುವಿ ಈ ಮೊದಲು ಮರ್ಸಿಡಿಸ್ ಕಂಪನಿಯ ಎಂ‍ಎಲ್ ಕ್ಲಾಸ್ ಸರಣಿಯಲ್ಲಿತ್ತು.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

ಹೊಸ ಬೆಂಝ್ ಜಿಎಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಹೊಂದಿದ್ದು, ಮೊದಲ ತಲೆಮಾರಿನ ಜಿಎಲ್ಇ ಎಸ್‍‍ಯು‍ವಿಯ ಶೈಲಿಯಲ್ಲಿ ಮುಂದುವರೆದಿದೆ. ಈ ಎಸ್‍‍ಯುವಿಯು ಹೆಚ್ಚಿನ ಕ್ಯಾಬಿನ್ ಸ್ಪೇಸ್ ಅನ್ನು ಹೊಂದಿದೆ. ಬಿಡುಗಡೆಯಾಗಿರುವ ಬೆಂಝ್ ಕಾರು ಬಿ‍ಎಸ್6 ಎಂಜಿನ್ ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

ಈ ಐಷಾರಾಮಿ ಎಸ್‍‍ಯುವಿ ಇಂಟಿಗ್ರೇಟೆಡ್ ಡಿ‍ಆರ್‍ಎಲ್‍‍ಗಳ ಜೊತೆಗೆ ಮರುವಿನ್ಯಾಸದ ಹೆಡ್‍‍ಲ್ಯಾಂಪ್‍,ಹೊಸ ಗ್ರಿಲ್, ಮರುವಿನ್ಯಾಸದ ಫ್ರಂಟ್ ಬಂಪರ್ ಹಾಗೂ ಟೇಲ್‍‍ಲ್ಯಾಂಪ್ ಕ್ಲಸ್ಟರ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಜಿ‍‍ಎಲ್‍ಇಗೆ ಹೋಲಿಸಿದರೆ, ಹೊಸ ಜಿ‍ಎಲ್‍ಇ ಎಸ್‍‍ಯುವಿಯು ಉದ್ದವಾದ ವ್ಹೀಲ್ ಬೇಸ್‍ ಹೊಂದಿರಲಿದೆ. ಇದರಿಂದಾಗಿ ಹೊಸ ಜಿ‍ಎಲ್‍‍ಇ 69 ಎಂಎಂಗೂ ಅಧಿಕವಾದ ಲೆಗ್‍‍ರೂಂ ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

ಮಾರುಕಟ್ಟೆಯಲ್ಲಿರುವ ಜಿ‍ಎಲ್‍ಇ ಎಸ್‍‍ಯುವಿಗೆ ಹೋಲಿಸಿದರೆ ಹೆಚ್ಚು ಸುಧಾರಿತವಾದ ಸಸ್ಪೆಂಷನ್ ಸೆಟ್‍ಅಪ್ ಹೊಂದಿದೆ. ಹೊಸ ಮರ್ಸಿಡಿಸ್ ಜಿ‍ಎಲ್‍ಇ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿಗಾಗಿ ಪ್ರತ್ಯೇಕವಾದ 12.3 ಇಂಚಿನ ಸ್ಕ್ರೀನ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

ಹೊಸ ಎಸ್‍ಯುವಿಯ ಕ್ಯಾಬಿನ್‍‍‍ಗೆ ಪ್ರೀಮಿಯಂ ಅನುಭವವನ್ನು ನೀಡುವುದಕ್ಕಾಗಿ ಇಂಟಿರಿಯರ್‍‍ನಲ್ಲಿ ಕ್ಲೈಮೆಟ್ ಕಂಟ್ರೋಲ್ ಯುನಿಟ್, ಮರುವಿನ್ಯಾಸಗೊಳಿಸಲಾದ ಏರ್ ಕಂಡೀಷನಿಂಗ್ ವೆಂಟ್‍‍ಗಳಿವೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

2020ರ ಬೆಂಝ್ ಜಿಎಲ್ಇ 300 ಡಿ ರೂಪಾಂರವು 1.9 ಲೀಟರ್, ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 245 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

ಹೊಸ ಜಿಎಲ್ಇ ಎಸ್‍‍ಯು‍ವಿಯ 400 ಡಿ ರೂಪಾಂತರವು 2.9 ಲೀಟರ್ ಇನ್‍-ಲೈನ್ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 330 ಬಿ‍ಹೆಚ್‍ಪಿ ಪವರ್ ಮತ್ತು 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಮಾದರಿಯ ಎಂಜಿನ್‍ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ ಎಸ್‍‍ಯುವಿ

ಹೊಸ ಬೆಂಝ್ ಜಿಎ‍ಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಹೊ‍ಸ ಜಿಎಲ್ಇ ದೇಶಿಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 5, ಲ್ಯಾಂಡ್ ರೋವರ್ ಡಿಸ್ಕವರಿ, ಆಡಿ ಕ್ಯೂ 7 ಮತ್ತು ವೋಲ್ವೋ ಎಕ್ಸ್‌ಸಿ 90 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2020 Mercedes-Benz GLE Launched In India: Prices Start At Rs 73.70 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X