ದಸರಾ ಸಂಭ್ರಮ: ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ದೇಶಾದ್ಯಂತ ದಸರಾ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಸಂಭ್ರಮಕ್ಕಾಗಿ ಹೊಸ ವಾಹನ ಖರೀದಿ ಭರಾಟೆ ಕೂಡಾ ಜೋರಾಗಿದೆ. ಮಧ್ಯಮ ಗಾತ್ರದ ವಾಹನಗಳು ಮಾತ್ರವಲ್ಲದೆ ಐಷಾರಾಮಿ ವಾಹನಗಳಿಗೆ ಭರ್ಜರಿ ಬೇಡಿಕೆ ಹರಿದುಬಂದಿದ್ದು, ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ಮರ್ಸಿಡಿಸ್ ಬೆಂಝ್ ಕೂಡಾ ದಸರಾ ಸಂಭ್ರಮದ ವೇಳೆ ದಾಖಲೆ ಪ್ರಮಾಣದ ಕಾರು ವಿತರಣೆ ಮಾಡಿದೆ.

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಗ್ರಾಹಕರ ಬೇಡಿಕೆ ಹಲವು ಮಾದರಿಯ ಕಾರು ಮಾದರಿಗಳ ಮಾರಾಟವನ್ನು ಹೊಂದಿದ್ದು, ಮೊದಲ ಬಾರಿಗೆ ದಸರಾ ಸಂಭ್ರಮ ವೇಳೆ ಅತಿ ಹೆಚ್ಚು ಕಾರು ವಿತರಣೆ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ನಿನ್ನೆ ನಡೆದ ಆಯುಧ ಪೂಜೆ ಸಂಭ್ರಮಕ್ಕಾಗಿ ಒಟ್ಟು 550 ಐಷಾರಾಮಿ ಕಾರುಗಳನ್ನು ವಿತರಣೆ ಮಾಡಿದ್ದು, ಐಷಾರಾಮಿ ವಾಹನಗಳ ಮಾರಾಟ ವಿಭಾಗದಲ್ಲಿ ಇದು ಅತಿ ದೊಡ್ಡ ಸಂಖ್ಯೆ ಎನ್ನಬಹುದು.

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ಕರೋನಾ ವೈರಸ್‌ನಿಂದಾದ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮರ್ಸಿಡಿಸ್ ಬೆಂಝ್ ಕಾರುಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬಂದಿದ್ದು, ದೆಹಲಿ ಮತ್ತು ಎನ್‌ಸಿಆರ್ ಒಂದರಲ್ಲೇ 175 ಐಷಾರಾಮಿ ಕಾರುಗಳು ಮಾರಾಟಗೊಂಡಿದೆ.

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ಇನ್ನುಳಿದ ಕಾರು ಮಾದರಿಗಳು ದೇಶದ ಪ್ರಮುಖ ನಗರಗಳಲ್ಲಿ ಮಾರಾಟಗೊಳ್ಳುವ ಮೂಲಕ ಆಟೋ ಕಂಪನಿಗಳಲ್ಲಿ ದಸರಾ ಹಬ್ಬವು ಭರ್ಜರಿ ಆದಾಯ ತಂದಿಕೊಟ್ಟಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಆಗಿದ್ದ ನಷ್ಟವು ಇದೀಗ ಸುಧಾರಣೆಗೆ ಬಂದಿದೆ.

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ಮುಂಬರುವ ದೀಪಾವಳಿ ಸಂಭ್ರಮದಲ್ಲಿ ಇನ್ನಷ್ಟು ಹೊಸ ವಾಹನಗಳನ್ನು ಮಾರಾಟ ಮಾಡುವ ಗುರಿಹೊಂದಿರುವ ವಿವಿಧ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹಲವಾರು ಆಫರ್‌ಗಳ ಜೊತೆಗೆ ಸರಳ ಸಾಲ-ಸೌಲಭ್ಯಗಳನ್ನು ಘೋಷಣೆ ಮಾಡಿದ್ದು, ಸಾಲ ಮರುಪಾವತಿಗಳು ಹಲವಾರು ವಿನಾಯ್ತಿಗಳನ್ನು ನೀಡಿ ಹೊಸ ವಾಹನ ಖರೀದಿಗೆ ಉತ್ತೇಜಿಸುತ್ತಿವೆ.

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ಕರೋನಾ ಸಂಕಷ್ಟದಲ್ಲಿ ವಾಹನ ಖರೀದಿಯಿಂದ ಆಗುವ ಆರ್ಥಿಕ ಸಂಕಷ್ಟಗಳ ಬಗೆಗೆ ಅರಿತಿರುವ ಆಟೋ ಉತ್ಪಾದನಾ ಕಂಪನಿಗಳು ಪ್ರಸ್ತುತ ಸಂದರ್ಭದಲ್ಲಿ ವಾಹನ ಖರೀದಿಯನ್ನು ಮುಂದೂಡಿಕೆ ಮಾಡುತ್ತಿರುವ ಗ್ರಾಹಕರಿಗೆ ಹಲವಾರು ಹಣಕಾಸು ನೆರವಿನೊಂದಿಗೆ ಸಾಲ ಮರುಪಾವತಿಗಾಗಿ ದೀರ್ಘಾವಧಿಯ ಲೋನ್‌ಗಳನ್ನು ನೀಡಲಾಗುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ಹಾಗೆಯೇ ಕರೋನಾ ವೈರಸ್ ಪರಿಣಾಮ ಸ್ವಂತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿರುವುದು ಕೂಡಾ ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಜೋರಾಗಲು ಪ್ರಮುಖ ಕಾರಣವಾಗಿದ್ದು, ಆಟೋ ಉದ್ಯಮ ವಿಶ್ಲೇಷಕರ ಅಧ್ಯಯನ ವರದಿಯಂತೆಯೇ ಇದೀಗ ವಾಹನ ಖರೀದಿ ಭರಾಟೆ ಜೋರಾಗುತ್ತಿದೆ.

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ಲಾಕ್‌ಡೌನ್ ಸಂದರ್ಭದಲ್ಲೇ ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಏರಿಳಿತ ಬಗಗೆ ಮಾಹಿತಿ ಹಂಚಿಕೊಂಡಿದ್ದ ಆಟೋ ಉದ್ಯಮ ವಿಶ್ಲೇಷಕರು ಕರೋನಾ ವೈರಸ್‌ನಿಂದಾಗಿ ಮುಂಬರುವ ದಿನಗಳಲ್ಲಿ ವಾಹನ ಮಾರಾಟವು ದುಪ್ಪಟ್ಟುಗೊಳ್ಳಲಿದೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದರು.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಮರ್ಸಿಡಿಸ್ ಬೆಂಝ್

ವಿಶ್ಲೇಷಕರ ಅಭಿಪ್ರಾಯದಂತೆ ಇದೀಗ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಕಳೆದ ವರ್ಷದ ವಾಹನ ಮಾರಾಟಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇದೀಗ ಹೊಸ ವಾಹನಗಳನ್ನು ಮಾರಾಟ ಮಾಡಿದ್ದು, ದೀಪಾವಳಿ ಹೊತ್ತಿಗೆ ಹೊಸ ವಾಹನಗಳ ಬೇಡಿಕೆ ಇನ್ನಷ್ಟು ಅಧಿಕಗೊಳ್ಳುವ ನೀರಿಕ್ಷೆಗಳಿವೆ.

Most Read Articles

Kannada
English summary
Mercedes-Benz India Sales Registers New Record This Festive Season. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X