ಆಟೋ ಎಕ್ಸ್‌ಪೋ 2020: ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಬ್ರಿಟಿಷ್ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಎಂಜಿ ಮೋಟಾರ್ ತನ್ನ ಪ್ರಮುಖ ಕಾರು ಆವೃತ್ತಿಗಳ ಮೂಲಕ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿದ್ದು, ವಿವಿಧ ಮಾದರಿಯ ಬರೋಬ್ಬರಿ 14 ಹೊಸ ಮಾದರಿಯ ಕಾರು ಆವೃತ್ತಿಗಳ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಮಾದರಿಯ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ, ಎಂಪಿವಿ ಸೇರಿದಂತೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರು ಆವೃತ್ತಿಗಳನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಇದರಲ್ಲಿ ಹಲವು ಕಾರು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಹೊಸ ಕಾರುಗಳನ್ನು ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಿರುವ ಎಂಜಿ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಹಾಗಾದ್ರೆ ಎಂಜಿ ಹೊಸ ಕಾರುಗಳ ಯಾವವು? ಮತ್ತು ಹೊಸ ಕಾರುಗಳು ಏನೆಲ್ಲಾ ವಿಭಿನ್ನ ತಾಂತ್ರಿಕ ಅಂಶಗಳನ್ನು ಹೊಂದಿವೆ ಎಂಬುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಹೆಕ್ಟರ್ ಪ್ಲಸ್ ಎಸ್‌ಯುವಿ

ಸದ್ಯ ಮಾರುಕಟ್ಟೆಯಲ್ಲಿ 5 ಸೀಟರ್ ಹೆಕ್ಟರ್ ಮುಂದುವರಿದ ಭಾಗವಾಗಿ ಹೆಕ್ಟರ್ ಪ್ಲಸ್ ಆವೃತ್ತಿಯನ್ನು ಅನಾವರಣಗೊಳಿಸಿರುವ ಎಂಜಿ ಸಂಸ್ಥೆಯು ಹೊಸ ಕಾರಿನಲ್ಲಿ 6 ಸೀಟರ್ ಮತ್ತು 7 ಸೀಟರ್ ಆಯ್ಕೆಯನ್ನು ನೀಡಲು ಮುಂದಾಗಿದ್ದು, ಹೊಸ ಕಾರು ಹೆಚ್ಚುವರಿ ಆಸನ ಸೌಲಭ್ಯದ ಹೊರತಲಾಗಿ ಸಾಮಾನ್ಯ ಕಾರು ಮಾದರಿಯಲ್ಲೇ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಈ ಮೂಲಕ ಮತ್ತಷ್ಟು 7 ಸೀಟರ್ ಎಸ್‌ಯುವಿ ಕಾರು ಖರೀದಿದಾರರನ್ನು ಸೆಳೆಯಲು ಮುಂದಾಗಿರುವ ಎಂಜಿ ಮೋಟಾರ್ ಸಂಸ್ಥೆಯು ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್ ಜೊತೆಗೆ ಟೊಯೊಟಾ ಇನೋವಾ ಕ್ರಿಸ್ಟಾ ಆವೃತ್ತಿಗೂ ಪೈಪೋಟಿ ನೀಡಲಿದ್ದು, ಜೂನ್ ಅಥವಾ ಜುಲೈ ಹೊತ್ತಿಗೆ ಬಿಡುಗಡೆಯಾಗಲಿರುವ ಹೊಸ ಕಾರು ಸಾಮಾನ್ಯ ಹೆಕ್ಟರ್ ಕಾರಿಗಿಂತಲೂ ತುಸು ದುಬಾರಿಯಾಗಲಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

360ಎಂ ಎಂಪಿವಿ

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿರುವ 360ಎಂ ಎಂಪಿವಿ ಆವೃತ್ತಿಯು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಕೆಳದರ್ಜೆಯ ಕಾರು ಮಾದರಿಯಾಗಿದ್ದು, ಎರ್ಟಿಗಾ ಕಾರಿಗಿಂತಲೂ ಹೆಚ್ಚು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಉತ್ತಮವಾದ ಒಳವಿನ್ಯಾಸ ಹೊಂದಿದೆ. 4,615-ಎಂಎಂ ಉದ್ದ, 1,735-ಎಂಎಂ ಅಗಲ, 1,660-ಎಎಂ ಎತ್ತರ, 2,750-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, 7 ಸೀಟರ್ ಸೌಲಭ್ಯದೊಂದಿಗೆ 3ನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಹೊಂದಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಈ ಮೂಲಕ ಹೊಸ ಎರ್ಟಿಗಾ ಕಾರಿಗಿಂತಲೂ ಹೆಚ್ಚುವರಿಯಾಗಿ 220-ಎಂಎಂ ಉದ್ದ ಹೊಂದಿದ್ದರೆ ಇನೋವಾ ಕ್ರಿಸ್ಟಾ ಕಾರಿಗಿಂತ 125-ಎಂಎಂ ಕಡಿಮೆ ಉದ್ದಳತೆ ಹೊಂದಿದ್ದು, ಸನ್‌ರೂಫ್, ಆಲ್‌ವೀಲ್ಹ್ ಡಿಸ್ಕ್‌ಬ್ರೇಕ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ. ಇನ್ನು ಹೊಸ ಕಾರು ಹೆಕ್ಟರ್ ಮಾದರಿಯಲ್ಲೇ ಫಿಯೆಟ್‌ನಿಂದ ಎರವಲು ಪಡೆಯಲಾಗಿರುವ 2.0-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಲಿದ್ದು, 2021ರಲ್ಲಿ ಬಿಡುಗಡೆಯಾಗಲಿರುವ ಈ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.12 ಲಕ್ಷದಿಂದ ರೂ. 16 ಲಕ್ಷ ಬೆಲೆ ಪಡೆದುಕೊಳ್ಳಲಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಜೆಡ್ಎಸ್ ಪೆಟ್ರೋಲ್

ಭಾರತದಲ್ಲಿ ಈಗಾಗಲೇ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಮಾರಾಟಮಾಡುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು ಇದೀಗ ಸಾಮಾನ್ಯ ಮಾದರಿಯ ಜೆಡ್ಎಸ್ ಎಸ್‌ಯುವಿ ಮಾದರಿಯನ್ನು ಸಹ ಬಿಡುಗಡೆಗೆ ಮುಂದಾಗಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲೇ ಹೊಸ ವಿನ್ಯಾಸವನ್ನು ಹೊಂದಿರುವ ಜೆಡ್ಎಸ್ ಕಾರು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಈಗಾಗಲೇ ವಿವಿಧ ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಆದರೆ ಬಿಡುಗಡೆಯ ಅವಧಿ ಕುರಿತು ಯಾವುದೇ ಅಧಿಕೃತ ಮಾಹಿತಿಗಳಿಲ್ಲ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಜಿ10 ಲಗ್ಷುರಿ ಎಂಪಿವಿ

ಎಂಪಿವಿ ವಿಭಾಗದಲ್ಲೂ ಭಾರೀ ಬದಲಾವಣೆಯ ನೀರಿಕ್ಷೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು 7 ಸೀಟರ್ ಮಾದರಿಗಳಾದ 360ಎಂ ಮತ್ತು ಹೆಕ್ಟರ್ ಪ್ಲಸ್ ಅನಾವರಣಗೊಳಿಸಿರುವುದಲ್ಲದೇ 9 ಸೀಟರ್ ಮಾದರಿಯಾದ ಜಿ10 ಆವೃತ್ತಿಯನ್ನು ಸಹ ಅನಾವರಣಗೊಳಿಸಿ ಬಿಡುಗಡೆಯ ಸುಳಿವು ನೀಡಿದೆ. ಸದ್ಯ ಚೀನಿ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮ್ಯಾಕ್ಸಸ್ ಜಿ10 ಕಾರು ಮಾದರಿಯೇ ಭಾರತದಲ್ಲಿ ಎಂಜಿ ಹೆಸರಿನೊಂದಿಗೆ ಮಾರಾಟವಾಗಲಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಮತ್ತು 9 ಸೀಟರ್ ಸೌಲಭ್ಯ ಹೊಂದಲಿರುವ ಹೊಸ ಜಿ10 ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದ್ದು, ಇನೋವಾ ಕ್ರಿಸ್ಟಾ ಮತ್ತು ಕಿಯಾ ಕಾರ್ನಿವಾಲ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಎಂಜಿ3 ಹ್ಯಾಚ್‌ಬ್ಯಾಕ್

ಎಂಜಿ ಸಂಸ್ಥೆಯು ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಜನಪ್ರಿಯವಾಗಿರುವ ಸ್ವಿಫ್ಟ್ ಮತ್ತು ಗ್ರಾಂಡ್ ಐ10 ಕಾರುಗಳಿಗೆ ಪೈಪೋಟಿಯಾಗಿ ಎಂಜಿ3 ಎನ್ನುವ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಎಂಜಿ3 ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಮೂಲಕ 112-ಬಿಎಚ್‌ಪಿ ಮತ್ತು 150-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಸದ್ಯ ಯುಕೆ‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಎಂಜಿ3 ಕಾರು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, 2021ರ ವೇಳೆಗೆ ಭಾರತದಲ್ಲೂ ಬಿಡುಗಡೆಯಾಗಲಿರುವ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 5.50 ಲಕ್ಷದಿಂದ ರೂ.8 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಗ್ಲೊಸ್ಟರ್ ಎಸ್‌ಯುವಿ

ಗ್ಲೊಸ್ಟರ್ ಕಾರು ಚೀನಿ ಮಾರುಕಟ್ಟೆಯಲ್ಲಿ ಮ್ಯಾಕ್ಸಸ್ ಡಿ90 ಹೆಸರಿನೊಂದಿಗೆ ಮಾರಾಟವಾಗುತ್ತಿದ್ದು, ಎಂಜಿ ಮಾತೃಸಂಸ್ಥೆಯಾಗಿರುವ ಸೈಕ್ ಇದೀಗ ಮ್ಯಾಕ್ಸಸ್ ಡಿ90 ಕಾರು ಮಾದರಿಯನ್ನು ಹೊಸ ಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಸದ್ಯ ಮಾರುಕಟ್ಟೆಯಲ್ಲಿರುವ ಮಾಕ್ಸಸ್ ಡಿ90 ಕಾರು 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಗ್ಲೊಸ್ಟರ್ ಕಾರು ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಬಹುದಾಗಿದೆ. ದೇ ವರ್ಷ ಅಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಮಾಡುವುದಾಗಿ ಸುಳಿವು ನೀಡಿರುವ ಎಂಜಿ ಸಂಸ್ಥೆಯ ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 30 ಲಕ್ಷದಿಂದ ರೂ.35 ಲಕ್ಷದೊಳಗೆ ಬಿಡುಗಡೆ ಮಾಡಲಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಚೀನಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ರೊವೆಸ್ ಮಾರ್ವೆಲ್ ಎಕ್ಸ್ ಆವೃತ್ತಿಯನ್ನು ಭಾರತದಲ್ಲಿ ಎಂಜಿ ಹೆಸರಿನಲ್ಲಿ ಬಿಡುಗಡೆ ಮುಂದಾಗಿರುವ ಸೈಕ್ ಸಂಸ್ಥೆಯು ಜೆಡ್ಎಸ್ ಇವಿ ಕಾರು ಮಾದರಿಯಲ್ಲೇ ಅಧಿಕ ಮಟ್ಟದ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

52.5 ಕಿ.ವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ 403 ಕಿ.ಮೀ ಹೊಂದಿರುವ ಮಾರ್ವೆಲ್ ಎಕ್ಸ್ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ. ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಕಂಪನಿ ಯಾವುದೇ ಅಧಿಕೃತವಾಗಿ ಮಾಹಿತಿ ಬಹಿರಂಗಪಡಿಸಿಲ್ಲವಾದರೂ ಹೊಸ ಕಾರು ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ ಎನ್ನಬಹುದು.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಇಎಂಜಿ6 ಹೈಬ್ರಿಡ್

ಭಾರತದಲ್ಲಿ ಈಗಾಗಲೇ ವಿವಿಧ ಕಾರು ಉತ್ಪಾದನಾ ಸಂಸ್ಥೆಗಳು ಹೈಬ್ರಿಡ್ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಉಳಿದ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವ ಇಎಂಜಿ6 ಬಿಡುಗಡೆಗಾಗಿ ಎಂಜಿ ಎದುರು ನೋಡುತ್ತಿದೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

1.5-ಲೀಟರ್ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಪ್ರೇರಣೆ ಹೊಂದಿರುವ ಇಎಂಜಿ6 ಹೈಬ್ರಿಡ್ ಆವೃತ್ತಿಯು ಪೂರ್ಣ ಪ್ರಮಾಣದ ಪೆಟ್ರೋಲ್ ಟ್ಯಾಂಕ್‌ ಪ್ಲಸ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಗರಿಷ್ಠ 705 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಪ್ರತಿ ಸ್ಪರ್ಧಿ ಕಾರುಗಳಿಂತಲೂ ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿರುವ ಇಎಂಜಿ6 ಹೈಬ್ರಿಡ್ ಆವೃತ್ತಿಯು ರೂ.35 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಇ200 ಎಲೆಕ್ಟ್ರಿಕ್

ವಿಶೇಷ ವಿನ್ಯಾಸದ ಸಣ್ಣ ಗಾತ್ರ ಎಲೆಕ್ಟ್ರಿಕ್ ಕಾರು ಮಾದರಿಯೊಂದನ್ನು ಅನಾವರಣಗೊಳಿಸಿರುವ ಎಂಜಿ ಸಂಸ್ಥೆಯು ಹೊಸ ಇ200 ಕಾರಿನಲ್ಲಿ ಪ್ರತಿ ಚಾರ್ಜ್‌ಗೆ ಗರಿಷ್ಠ 200ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಹೇಳಿದ್ದು, ಬಾಕ್ಸಿ ಟೈಪ್ ಬಾಡಿ ವಿನ್ಯಾಸ ಹೊಂದಿರುವ ಹೊಸ ಕಾರು ಇಬ್ಬರು ಮಾತ್ರ ಪ್ರಯಾಣಿಸಬಹುದಾದ ಆಸನ ಸೌಲಭ್ಯದೊಂದಿಗೆ ಕ್ವಾಡ್ರಿ ಸೈಕಲ್ ವಿಭಾಗದಲ್ಲಿ ಮಾರಾಟವಾಗಲಿದೆ. ಆದ್ರೆ ಈ ಹೊಸ ಇವಿ ಕಾರು ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಯಾವುದೇ ಖಚಿತತೆ ಇಲ್ಲ.

ಬರೋಬ್ಬರಿ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಿದ ಎಂಜಿ ಮೋಟಾರ್

ಇನ್ನು ಎಂಜಿ ಸಂಸ್ಥೆಯು 2020ರ ಆಟೋ ಎಕ್ಸ್‌ಪೋದಲ್ಲಿ ಹೊಸ ಮಾದರಿಯ ಸೆಡಾನ್ ಆವೃತ್ತಿಯಾದ ಆರ್‌ಸಿ6 ಮತ್ತು ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ವಿಷನ್ ಐ-ಕಾನ್ಸೆಪ್ಟ್ ಸೇರಿದಂತೆ ಒಟ್ಟು 14 ಕಾರುಗಳನ್ನು ಪ್ರದರ್ಶಿಸಿದ್ದು, ಇದರಲ್ಲಿ ಗ್ಲೊಸ್ಟರ್, ಜಿ10 ಲಗ್ಷುರಿ ಎಂಪಿವಿ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿ ಭಾರೀ ನೀರಿಕ್ಷೆಯಲ್ಲಿವೆ.

Most Read Articles

Kannada
English summary
MG Motor Car Showcased at auto expo 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X