ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರಾಟ ಪ್ರಕ್ರಿಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯತ್ತಮ ಮೈಲೇಜ್ ಪ್ರೇರಿತ ಕಾರು ಪೈಕಿ ಒಂದಾಗಿರುವ ಎಂಜಿ ಮೋಟಾರ್ ನಿರ್ಮಾಣದ ಜೆಡ್ಎಸ್ ಇವಿ ಎಸ್‌ಯುವಿ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

2020ರ ದೆಹಲಿ ಆಟೋ ಎಕ್ಸ್‌ಪೋ ನಂತರ ಜೆಡ್ಎಸ್ ಇವಿ ಕಾರಿನ ವಿತರಣೆಯನ್ನು ಆರಂಭಿಸಿರುವ ಎಂಜಿ ಮೋಟಾರ್ ಕಂಪನಿಯು ಇದುವರೆಗೆ ಸುಮಾರು 4 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದ್ದು, ಉತ್ಪಾದನೆ ಮತ್ತು ಬೇಡಿಕೆ ಅನುಸಾರವಾಗಿ ಕಾರು ವಿತರಣೆಯನ್ನು ಆರಂಭಿಸಲಾಗಿದೆ. ನಿನ್ನೆಯಷ್ಟೇ ಕೇರಳದ ಕೊಚ್ಚಿನ್‌ನಲ್ಲಿ ಒಂದೇ ದಿನ 11 ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ ಮಾಡಲಾಗಿದ್ದು, ಹೊಸ ಕಾರು ಹ್ಯುಂಡೈ ಕೊನಾ ಇವಿ ಕಾರಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

ಎಂಜಿ ಮೋಟಾರ್ ಕಂಪನಿಯು ಇದೇ ಹಿಂದೆ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಸಂದರ್ಭದಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್ ಮತ್ತು ಹೈದ್ರಾಬಾದ್ ನಗರಗಳಲ್ಲಿ ಮಾತ್ರವೇ ಮಾರಾಟಕ್ಕೆ ಚಾಲನೆ ನೀಡಿತ್ತು. ಇದೀಗ ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆ ಹೆಚ್ಚಿದಂತೆ ಮತ್ತೆ ಪ್ರಮುಖ ಆರು ಹೊಸ ನಗರಗಳಲ್ಲೂ ಜೆಡ್ಎಸ್ ಇವಿ ಕಾರಿನ ಮಾರಾಟವನ್ನು ವಿಸ್ತರಣೆ ಮಾಡಿದೆ.

ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

ಹೊಸದಾಗಿ ಪುಣೆ, ಜಯಪುರ್, ಚೆನ್ನೈ, ಸೂರತ್, ಕೊಚ್ಚಿನ್ ಮತ್ತು ಚಂಡಿಗಢದಲ್ಲಿ ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಬುಕ್ಕಿಂಗ್ ಪ್ರಕ್ರಿಯೆಯ ಜೊತೆಗೆ ಕಾರು ವಿತರಣೆಯನ್ನು ಕೂಡಾ ಪುನಾರಂಭಗೊಳಿಸಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

ಎಂಜಿ ಮೋಟಾರ್ ಕಂಪನಿಯು ಲಾಕ್‌ಡೌನ್ ಹಿನ್ನಲೆ ಬಿಡಿಭಾಗಗಳ ಕೊರತೆಯಿಂದಾಗಿ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯನ್ನು ತಾತ್ಕಾಲಿಕ ಬಂದ್ ಮಾಡಿತ್ತು. ಇದೀಗ ಲಾಕ್‌ಡೌನ್ ವಿನಾಯ್ತಿ ನೀಡಿರುವುದರಿಂದ ಆಟೋ ಉದ್ಯಮ ಮತ್ತೆ ಪುನಾರಂಭಗೊಂಡಿದೆ.

ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಸದ್ಯ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಮಾದರಿಯ ಬೆಸ್ ವೆರಿಯೆಂಟ್ ಮಾದರಿಯಾಗಿ ಮತ್ತು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿ ಮಾರಾಟವಾಗುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

ಜೆಡ್ಎಸ್ ಇವಿ ಕಾರಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಎಕ್ಸೈಟ್ ಆವೃತ್ತಿಗೆ ರೂ.20.58 ಲಕ್ಷ ಮತ್ತು ಎಕ್ಸ್‌ಕ್ಲೂಸಿವ್ ಆವೃತ್ತಿಗೆ ರೂ.23.58 ಲಕ್ಷ ನಿಗದಿ ಪಡಿಸಲಾಗಿದ್ದು, ಬಿಡುಗಡೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಬುಕ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ಬರೋಬ್ಬರಿ ರೂ.1 ಲಕ್ಷ ಆಫರ್ ನೀಡಲಾಗಿತ್ತು. ಆದರೆ ಇದೀಗ ಯಾವುದೇ ಆಫರ್ ನೀಡುತ್ತಿಲ್ಲ.

ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

ಬ್ಯಾಟರಿ ಸಾಮರ್ಥ್ಯ

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಒಂದೇ ದಿನದಲ್ಲಿ 11 ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ವಿತರಣೆ

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ವೆರಿಯೆಂಟ್ 400 ಕಿ.ಮೀ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪಡೆದುಕೊಳ್ಳಲಿದ್ದು, ಮೈಲೇಜ್‌ಗೆ ತಕ್ಕಂತೆ ಕಾರಿನ ಬೆಲೆ ಕೂಡಾ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
MG Dealership In Kerala Delivers 11 ZS Electric Cars On A Single Day. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X