ಆಟೋ ಎಕ್ಸ್‌ಪೋ 2020: ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಇಎಂಜಿ6 ಹೈಬ್ರಿಡ್ ಕಾರು ಅನಾವರಣ

ಎಂಜಿ ಮೋಟಾರ್ ಸಂಸ್ಥೆಯು ತನ್ನ ಪ್ರಮುಖ ಕಾರು ಆವೃತ್ತಿಗಳ ಮೂಲಕ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿದ್ದು, ವಿವಿಧ ಮಾದರಿಯ 14 ಕಾರು ಆವೃತ್ತಿಗಳ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಇಎಂಜಿ6 ಹೈಬ್ರಿಡ್ ಕಾರು ಅನಾವರಣ

ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಮಾದರಿಯ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ, ಎಂಪಿವಿ ಸೇರಿದಂತೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರು ಆವೃತ್ತಿಗಳನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಇಎಂಜಿ6 ಎನ್ನುವ ಹೈಬ್ರಿಡ್ ಸೆಡಾನ್ ಆವೃತ್ತಿಯೊಂದು ಭಾರೀ ಆಕರ್ಷಣೆಗೆ ಕಾರಣವಾಗಿದೆ. ಭಾರತದಲ್ಲಿ ಈಗಾಗಲೇ ವಿವಿಧ ಕಾರು ಉತ್ಪಾದನಾ ಸಂಸ್ಥೆಗಳು ಹೈಬ್ರಿಡ್ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಉಳಿದ ಕಾರು ಮಾದರಿಗಳಿಂತಲೂ ಇಎಂಜಿ6 ಹೆಚ್ಚು ಮೈಲೇಜ್ ನೀಡಲಿದೆ.

ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಇಎಂಜಿ6 ಹೈಬ್ರಿಡ್ ಕಾರು ಅನಾವರಣ

1.5-ಲೀಟರ್ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಪ್ರೇರಣೆ ಹೊಂದಿರುವ ಇಎಂಜಿ6 ಹೈಬ್ರಿಡ್ ಆವೃತ್ತಿಯು ಪೂರ್ಣ ಪ್ರಮಾಣದ ಪೆಟ್ರೋಲ್ ಟ್ಯಾಂಕ್‌ ಪ್ಲಸ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಗರಿಷ್ಠ 705 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಇಎಂಜಿ6 ಹೈಬ್ರಿಡ್ ಕಾರು ಅನಾವರಣ

ಒಂದು ವೇಳೆ ಇಎಂಜಿ6 ಕಾರನ್ನು ಕೇವಲ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಚಾಲನೆ ಮಾಡಿದ್ದಲ್ಲಿ ಸೆಲ್ಫ್ ಚಾರ್ಜಿಂಗ್ ಮೂಲಕ ಗರಿಷ್ಠ 53 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಸಾಮಾನ್ಯ ಪೆಟ್ರೋಲ್ ಕಾರುಗಳಿಂತಲೂ ಹೆಚ್ಚು ಮೈಲೇಜ್ ನೀಡುವ ಕಾರು ಆವೃತ್ತಿಯಾಗಿರಲಿದೆ.

ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಇಎಂಜಿ6 ಹೈಬ್ರಿಡ್ ಕಾರು ಅನಾವರಣ

ಕಾರು ಚಾಲನೆ ವೇಳೆ ಆದ್ಯತೆ ಮೇರೆಗೆ ಎಂಜಿನ್ ಆಯ್ಕೆ ಮಾಡಿಕೊಂಡು ಪ್ರಯಾಣ ಮಾಡಬಹುದಾಗಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಮತ್ತು ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರುಗಳಿಂತಲೂ ಕಡಿಮೆ ಬೆಲೆ ಮತ್ತು ಹೆಚ್ಚು ಮೈಲೇಜ್‌ಯುಳ್ಳ ಕಾರು ಮಾದರಿಯಾಗಿರಲಿದೆ. ಈ ಮೂಲಕ ಮಧ್ಯಮ ಕ್ರಮಾಂಕದ ಬಿ ಸೆಗ್ಮೆಂಟ್ ಸೆಡಾನ್ ಕಾರುಗಳ ಮಾರಾಟ ವಿಭಾಗಕ್ಕೂ ಲಗ್ಗೆಯಿಡಲಿರುವ ಎಂಜಿ ಸಂಸ್ಥೆಯು ಎಲ್ಲಾ ಕಾರು ವಿಭಾಗಗಳನ್ನು ಸದ್ದು ಮಾಡಲಿದೆ.

ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಇಎಂಜಿ6 ಹೈಬ್ರಿಡ್ ಕಾರು ಅನಾವರಣ

ಹೊಸ ಕಾರಿನ ಬೆಲೆ ಮತ್ತು ಬಿಡುಗಡೆ(ಅಂದಾಜು)

ಸದ್ಯ ಮಾರುಕಟ್ಟೆಯಲ್ಲಿ ಕ್ಯಾಮ್ರಿ ಹೈಬ್ರಿಡ್ ಮತ್ತು ಅಕಾರ್ಡ್ ಹೈಬ್ರಿಡ್ ಕಾರುಗಳು ರೂ.45 ಲಕ್ಷದಿಂದ ರೂ.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಪ್ರತಿ ಸ್ಪರ್ಧಿ ಕಾರುಗಳಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಇಎಂಜಿ6 ಹೈಬ್ರಿಡ್ ಆವೃತ್ತಿಯು ರೂ.35 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಇಎಂಜಿ6 ಹೈಬ್ರಿಡ್ ಕಾರು ಅನಾವರಣ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೆಕ್ಟರ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಎಂಜಿ ಸಂಸ್ಥೆಯು ಮುಂದಿನ ಕಾರು ಮಾದರಿಯಾಗಿ ಎಸ್‌ಯುವಿ ಮತ್ತು ಎಂಪಿವಿ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ತದನಂತರವಷ್ಟೇ ಇಎಂಜಿ6 ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಇಎಂಜಿ6 ಹೈಬ್ರಿಡ್ ಕಾರು ಅನಾವರಣ

ಪ್ರಸ್ತುತ ಚೀನಿ ಮಾರುಕಟ್ಟೆಯಲ್ಲಿ ಇಎಂಜಿ6 ಹೈಬ್ರಿಡ್ ಆವೃತ್ತಿಯು ಎಂಜಿ ಮಾತೃಸಂಸ್ಥೆಯಾದ ಸೈಕ್ ಅಧೀನ ಮತ್ತೊಂದು ಕಾರು ಸಂಸ್ಥೆ ಬೌಜನ್ ನಿರ್ಮಾಣದ ಕಾರು ಮಾದರಿಯಾಗಿದ್ದು, ಇದೀಗ ಭಾರತದಲ್ಲಿ ಎಂಜಿ ಹೆಸರಿನೊಂದಿಗೆ ರೀಬ್ಯಾಡ್ಜ್ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

Most Read Articles

Kannada
English summary
MG Motor India has showcased eMG6 hybrid sedan car at auto expo. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X