ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ವಿವಿಧ ಮಾದರಿಯ 14 ಹೊಸ ಕಾರುಗಳ ಪ್ರದರ್ಶನಗೊಳಿಸುವ ಮೂಲಕ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಎಂಜಿ ಮೋಟಾರ್ ಕಂಪನಿಯು ಶೀಘ್ರದಲ್ಲೇ ಕೆಲವು ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಿರುವ 14 ಹೊಸ ಕಾರುಗಳಲ್ಲಿ ಮೂರು ಪ್ರಮುಖ ಕಾರು ಮಾದರಿಗಳನ್ನು ಇದೇ ವರ್ಷ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಎಂಜಿ ಮೋಟಾರ್ ಕಂಪನಿಯು ಎಸ್‌ಯುವಿ ಮತ್ತು ಎಂಪಿವಿ ವಿಭಾಗದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದೆ. ಹಾಗಾದ್ರೆ ಈ ವರ್ಷ ಎಂಜಿ ಮೋಟಾರ್ ಬಿಡುಗಡೆ ಮಾಡಲಿರುವ ಹೊಸ ಕಾರುಗಳು ಯಾವವು? ಬಿಡುಗಡೆ ಅವಧಿ ಮತ್ತು ಬೆಲೆ ಕುರಿತಾದ ಮಾಹಿತಿ ಇಲ್ಲಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಎಂಜಿ ಮೋಟಾರ್ ಕಂಪನಿಯು ಈಗಾಗಲೇ ಹೆಕ್ಟರ್ ಮತ್ತು ಜೆಎಡ್ ಎಲೆಕ್ಟ್ರಿಕ್ ಕಾರುಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಮಾರುಕಟ್ಟೆ ವಿಸ್ತರಣೆಗಾಗಿ ಎಂಪಿವಿ ಮತ್ತು ಫುಲ್ ಸೈಜ್ ಎಸ್‌ಯುವಿ ಕಾರುಗಳ ಬಿಡುಗಡೆ ಮೇಲೆ ಗಮನಹರಿಸಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಎಂಪಿವಿ ವಿಭಾಗದಲ್ಲೂ ಭಾರೀ ಬದಲಾವಣೆಯ ನೀರಿಕ್ಷೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು 7 ಸೀಟರ್ ಮಾದರಿಗಳಾದ 360ಎಂ ಮತ್ತು ಹೆಕ್ಟರ್ ಪ್ಲಸ್ ಅನಾವರಣಗೊಳಿಸಿರುವುದಲ್ಲದೇ ಇದೀಗ 9 ಸೀಟರ್ ಮಾದರಿಯಾದ ಜಿ10 ಆವೃತ್ತಿಯನ್ನು ಸಹ ಅನಾವರಣಗೊಳಿಸಿ ಬಿಡುಗಡೆಯ ಸುಳಿವು ನೀಡಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಸದ್ಯ ಚೀನಿ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮ್ಯಾಕ್ಸಸ್ ಜಿ10 ಕಾರು ಮಾದರಿಯೇ ಇದೀಗ ಭಾರತದಲ್ಲಿ ಎಂಜಿ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ. 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯಲ್ಲಿ ಮಾರಾಟವಾಗುತ್ತಿರುವ ಜಿ10 ಕಾರು ಭಾರತದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 7 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಮಾರಾಟವಾಗುವ ನೀರಿಕ್ಷೆಯಲ್ಲಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಇದರಲ್ಲಿ ಹೈ ಎಂಡ್ ಆವೃತ್ತಿಯು 2+2+3 ಮಾದರಿಯಲ್ಲಿ 7 ಸೀಟರ್ ಸೌಲಭ್ಯವನ್ನು ಹೊಂದಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಸೀಟು ಹಲವು ವಿಶೇಷತೆಗಳೊಂದಿಗೆ ಬರಲಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಅರಾಮದಾಯಕವಾಗಿ ಕುಳಿತುಕೊಳ್ಳಬಹುದಲ್ಲದೇ ಕಾಲುಗಳನ್ನು ಚಾಚಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದು, ಕ್ಯಾಪ್ಟನ್ ಸೀಟ್ ಮುಂಭಾಗದಲ್ಲಿ ಎಂಟರ್‌ಟೈನ್‌ಮೆಂಟ್ ಡಿಸ್‌ಪ್ಲೇ, ವೆಂಟಿಲೆಟೆಡ್ ಲೆದರ್ ಹೊದಿಕೆ, ಹಿಂಭಾಗದ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ನೀಡಲಾಗಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಇನ್ನು 9 ಸೀಟರ್ ಆವೃತ್ತಿಯು 2+2+2+3 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿದ್ದು, ಮಧ್ಯದಲ್ಲಿರುವ ಆಸನಗಳು ಪ್ರತ್ಯೇಕ ನಿಯಂತ್ರಣ ಹೊಂದಿವೆ. ಮುಂಭಾದಲ್ಲಿರುವ ಆಸನ ಮಾದರಿಯಲ್ಲೇ ಹಿಂಭಾಗದ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ನೀಡಲಾಗಿದ್ದು, 9 ಜನ ಪ್ರಯಾಣಿಕರು ಯಾವುದೇ ಕಿರಿಕಿರಿಯಲ್ಲದೇ ಅರಾಮವಾಗಿ ಪ್ರಯಾಣಿಸಬಹುದಾಗಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಜಿ10 ಕಾರು ಸದ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕಿಯಾ ಕಾರ್ನಿವಾಲ್ ಕಾರಿಗಿಂತಲೂ ಹೆಚ್ಚು ಉದ್ದಳತೆ ಹೊಂದಿದ್ದು, 5,168-ಎಂಎಂ ಉದ್ದ, 1,980-ಎಂಎಂ ಅಗಲ ಮತ್ತು 1,928-ಎಂಎಂ ಎತ್ತರದೊಂದಿಗೆ ಎಂಪಿವಿ ಕಾರಗಳಲ್ಲೇ ವಿಶೇಷ ಎನ್ನಿಸಲಿದೆ.

ಕಿಯಾ ಕಾರ್ನಿವಾಲ್ ಪ್ರತಿಸ್ಪರ್ಧಿ ಎಂಜಿ ಜಿ10 ಎಂಪಿವಿ ಬಿಡುಗಡೆ ಮಾಹಿತಿ ಬಹಿರಂಗ

ಬಿಡುಗಡೆ ಅವಧಿಯ ಮತ್ತು ಬೆಲೆ(ಅಂದಾಜು)

ಮಾಹಿತಿಗಳ ಪ್ರಕಾರ ಹೊಸ ಜಿ10 ಕಾರು 2020ರ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ಹೆಕ್ಟರ್ 7 ಸೀಟರ್ ಮತ್ತು ಗ್ಲೋಸ್ಟರ್ ಎಸ್‌ಯುವಿ ಬಿಡುಗಡೆಯಾಗಲಿವೆ. ಹೊಸ ಕಾರು ಇನೋವಾ ಕ್ರಿಸ್ಟಾ ಮತ್ತು ಕಿಯಾ ಕಾರ್ನಿವಾಲ್ ನಡುವಿನ ಹೊಂದುವ ಸಾಧ್ಯತೆಗಳಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
MG G10 9-Seater MPV Launch Timeline, Kia Carnival Rival. Read in Kannada.
Story first published: Tuesday, April 7, 2020, 13:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X