ಹೊಸ ಬಣ್ಣಗಳ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಗ್ಲೊಸ್ಟರ್

ಎಂಜಿ ಮೋಟಾರ್ ಕಂಪನಿಯು ತನ್ನದೇ ನಾಲ್ಕನೇ ಕಾರು ಮಾದರಿಯಾಗಿ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ರೋಡ್ ಟೆಸ್ಟಿಂಗ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆಯ ಮಾಹಿತಿಯು ಬಹಿರಂಗವಾಗಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಗ್ಲೊಸ್ಟರ್

ಹೊಸ ಕಾರು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿದೆ. ಹೀಗಾಗಿ ಹೊಸ ಕಾರಿನ ಉತ್ಪಾದನಾ ಆವೃತ್ತಿಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಕಾರು ವೈಟ್, ಬ್ಲ್ಯಾಕ್, ರೆಡ್ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗುವ ಸುಳಿವು ನೀಡಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ಆರಂಭದಲ್ಲಿ ಗ್ಲೊಸ್ಟರ್ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಗ್ಲೊಸ್ಟರ್

ಹೆಕ್ಟರ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹೆಕ್ಟರ್ ಪ್ಲಸ್ ನಂತರ ಬಿಡುಗಡೆಯಾಗುತ್ತಿರುವ ಗ್ಲೊಸ್ಟರ್ ಕಾರು ಮೊದಲ ಮೂರು ಕಾರುಗಳಿಂತಲೂ ಐಷಾರಾಮಿ ಫೀಚರ್ಸ್‌ನೊಂದಿಗೆ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಫುಲ್ ಸೈಜ್ ಎಸ್‌ಯುವಿ ಮಾದರಿಯಾಗಿ ಬಿಡುಗಡೆಗೊಳ್ಳಲಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಕಾರು ಟೊಯೊಟಾ ಐಷಾರಾಮಿ ಕಾರು ಆವೃತ್ತಿಯಾಗಿರುವ ಲ್ಯಾಂಡ್ ಕ್ರೂಸರ್ 200 ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಗಾತ್ರ ಹೊಂದಿದ್ದು, 5,100-ಎಂಎಂ ಉದ್ದ, 1,932-ಎಂಎಂ ಅಗಲ, 1,875-ಎಂಎಂ ಎತ್ತರ, 2,950-ಎಂಎಂ ವೀಲ್ಹ್ ಬೆಸ್ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಗ್ಲೊಸ್ಟರ್

ಭಾರತದಲ್ಲಿ ಬಿಡುಗಡೆಯಾಗಲಿರುವ ಗ್ಲೊಸ್ಟರ್ ಕಾರಿನ ಎಂಜಿನ್ ಮಾಹಿತಿಯು ಇದುವರೆಗೂ ಬಹಿರಂಗವಾಗಿಲ್ಲವಾದರೂ ಎಂಜಿ ಮಾತೃಸಂಸ್ಥೆಯಾದ ಸೈಕ್ ಕಂಪನಿಯು ತನ್ನ ಮತ್ತೊಂದು ಅಂಗಸಂಸ್ಥೆಯಾದ ಮಾಕ್ಸಸ್ ಡಿ90 ಕಾರಿನಲ್ಲಿ ಬಳಕೆ ಮಾಡಲಾದ 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ ಅನ್ನು ಗ್ಲೊಸ್ಟರ್ ಕಾರಿಗಾಗಿ ಆಯ್ಕೆ ಮಾಡಬಹುದಾಗಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಹೊಸ ಬಣ್ಣಗಳ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಗ್ಲೊಸ್ಟರ್

ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿ ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್‌ಬೋರ್ಡ್ ಮತ್ತು ಟೈಲ್‌ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 12.3-ಇಂಚಿನ ಟಚ್ ‌ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ, ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್‌ರೂಫ್ ಮತ್ತು ಕ್ವಾಡ್ ಎಕ್ಸಾಸ್ಟ್ ಸಿಸ್ಟಂ ಪಡೆದುಕೊಂಡಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಗ್ಲೊಸ್ಟರ್

7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+3 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಜೋಡಿಸಲಾಗಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಆಸನದಲ್ಲಿ ಹಲವಾರು ಕಾರ್ ಕನೆಕ್ಟೆಡ್ ಸೌಲಭ್ಯಗಳೊಂದಿಗೆ ಅರಾಮಾದಾಯಕ ಪ್ರಯಾಣಕ್ಕಾಗಿ ಮಸಾಜ್ ಫೀಚರ್ಸ್ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ಬಣ್ಣಗಳ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಗ್ಲೊಸ್ಟರ್

ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಮಾಹಿತಿಗಳ ಪ್ರಕಾರ, ಗ್ಲೊಸ್ಟರ್ ಎಸ್‌ಯುವಿ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.30 ಲಕ್ಷದಿಂದ ರೂ.35 ಲಕ್ಷ ಬೆಲೆ ಅಂತರದೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
MG Gloster Spied Testing In India. Read in Kannada.
Story first published: Wednesday, July 29, 2020, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X