Just In
- 1 hr ago ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- 2 hrs ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 3 hrs ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್ಯುವಿ ಕಾರುಗಳಲ್ಲೇ ವಿನೂತನ ಫೀಚರ್ಸ್ ಹೊಂದಿರಲಿದೆ ಎಂಜಿ ಗ್ಲೊಸ್ಟರ್
ಎಂಜಿ ಮೋಟಾರ್ ಕಂಪನಿಯು ತನ್ನ ಬಹುನೀರಿಕ್ಷಿತ ಕಾರು ಮಾದರಿಯಾದ ಗ್ಲೊಸ್ಟರ್ ಎಸ್ಯುವಿ ಮಾದರಿಯ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಎಸ್ಯುವಿ ಮಾದರಿಯಲ್ಲೇ ವಿನೂತನ ಫೀಚರ್ಸ್ ಹೊಂದಿರಲಿದೆ.
ಹೊಸ ಗ್ಲೊಸ್ಟರ್ ಕಾರು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿದೆ. ಹೀಗಾಗಿ ಹೊಸ ಕಾರಿನ ಉತ್ಪಾದನಾ ಆವೃತ್ತಿಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಕಾರು ಉತ್ಪಾದನಾ ಆವೃತ್ತಿಯೊಂದಿಗೆ ಎಸ್ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.
ಹೊಸ ಕಾರು ಪರ್ಲ್ ವೈಟ್, ಬ್ಲ್ಯಾಕ್, ರೆಡ್ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗುವ ಸುಳಿವು ನೀಡಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್ ಆರಂಭದಲ್ಲಿ ಗ್ಲೊಸ್ಟರ್ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.
ಹೆಕ್ಟರ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹೆಕ್ಟರ್ ಪ್ಲಸ್ ನಂತರ ಬಿಡುಗಡೆಯಾಗುತ್ತಿರುವ ಗ್ಲೊಸ್ಟರ್ ಕಾರು ಮೊದಲ ಮೂರು ಕಾರುಗಳಿಂತಲೂ ಐಷಾರಾಮಿ ಫೀಚರ್ಸ್ನೊಂದಿಗೆ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಫುಲ್ ಸೈಜ್ ಎಸ್ಯುವಿ ಮಾದರಿಯಾಗಿ ಬಿಡುಗಡೆಗೊಳ್ಳಲಿದೆ.
ಗ್ಲೊಸ್ಟರ್ ಕಾರು ಟೊಯೊಟಾ ಐಷಾರಾಮಿ ಕಾರು ಆವೃತ್ತಿಯಾಗಿರುವ ಲ್ಯಾಂಡ್ ಕ್ರೂಸರ್ 200 ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಗಾತ್ರ ಹೊಂದಿದ್ದು, 5,100-ಎಂಎಂ ಉದ್ದ, 1,932-ಎಂಎಂ ಅಗಲ, 1,875-ಎಂಎಂ ಎತ್ತರ, 2,950-ಎಂಎಂ ವೀಲ್ಹ್ ಬೆಸ್ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ಗ್ಲೊಸ್ಟರ್ ಕಾರಿನ ಎಂಜಿನ್ ಮಾಹಿತಿಯು ಇದುವರೆಗೂ ಬಹಿರಂಗವಾಗಿಲ್ಲವಾದರೂ ಎಂಜಿ ಮಾತೃಸಂಸ್ಥೆಯಾದ ಸೈಕ್ ಕಂಪನಿಯು ತನ್ನ ಮತ್ತೊಂದು ಅಂಗಸಂಸ್ಥೆಯಾದ ಮಾಕ್ಸಸ್ ಡಿ90 ಕಾರಿನಲ್ಲಿ ಬಳಕೆ ಮಾಡಲಾದ 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಗ್ಲೊಸ್ಟರ್ ಕಾರಿಗಾಗಿ ಆಯ್ಕೆ ಮಾಡಬಹುದಾಗಿದೆ.
MOST READ: ಪ್ರತಿ ಚಾರ್ಜ್ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್
ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿ ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್ಬೋರ್ಡ್ ಮತ್ತು ಟೈಲ್ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ, 12.3-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್ಮೆಂಟ್ ಸಿಸ್ಟಂ, ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್ರೂಫ್ ಮತ್ತು ಕ್ವಾಡ್ ಎಕ್ಸಾಸ್ಟ್ ಸಿಸ್ಟಂ ಪಡೆದುಕೊಂಡಿದೆ.
7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+3 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಜೋಡಿಸಲಾಗಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಆಸನದಲ್ಲಿ ಹಲವಾರು ಕಾರ್ ಕನೆಕ್ಟೆಡ್ ಸೌಲಭ್ಯಗಳೊಂದಿಗೆ ಅರಾಮಾದಾಯಕ ಪ್ರಯಾಣಕ್ಕಾಗಿ ಮಸಾಜ್ ಫೀಚರ್ಸ್ ನೀಡಲಾಗಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..
ಅಂದಾಜು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಮಾಹಿತಿಗಳ ಪ್ರಕಾರ, ಗ್ಲೊಸ್ಟರ್ ಎಸ್ಯುವಿ ಆವೃತ್ತಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.30 ಲಕ್ಷದಿಂದ ರೂ.35 ಲಕ್ಷ ಬೆಲೆ ಅಂತರದೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.