ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯನ್ನು ಇತ್ತೀಚೆಗೆ ಅನಾವರಣಗೊಳಿಸಿರುವ ಎಂಜಿ ಮೋಟಾರ್ ಕಂಪನಿಯು ಮುಂದಿನ ತಿಂಗಳು ಅಕ್ಟೋಬರ್ ಆರಂಭದಲ್ಲಿ ಹೊಸ ಕಾರು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಬಲಿಷ್ಠ ಎಂಜಿನ್‌ ಜೊತೆಗೆ ಹಲವಾರು ಐಷಾರಾಮಿ ಫೀಚರ್ಸ್ ಪಡೆದುಕೊಳ್ಳಲಿದೆ.

ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಎಂಜಿ ಮೋಟಾರ್ ಕಂಪನಿಯು ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, 4x4 ಮಾದರಿಯಲ್ಲಿ ಟ್ವಿನ್ ಟರ್ಬೋ ಮತ್ತು 4x2 ಮಾದರಿಯಲ್ಲಿ ಸಿಂಗಲ್ ಟರ್ಬೋ ಎಂಜಿನ್ ನೀಡಲಾಗಿದೆ. ಎರಡು ಮಾದರಿಗಳಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ನೀಡಲಾಗಿದ್ದು, ಟ್ವಿನ್ ಟರ್ಬೋ ಮಾದರಿಯು 218-ಬಿಹೆಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಸಿಂಗಲ್ ಟರ್ಬೋ ಮಾದರಿಯು 160-ಬಿಎಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಇನ್ನು ಐಷಾರಾಮಿ ಫೀಚರ್ಸ್‌ನೊಂದಿಗೆ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿರುವ ಗ್ಲೊಸ್ಟರ್ ಕಾರು ಸ್ಮಾರ್ಟ್ ಮತ್ತು ಸೂಪರ್ ವೆರಿಯೆಂಟ್‌ನೊಂದಿಗೆ 6 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರವಿದೆ.

ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಪ್ರೀಮಿಯಂ ಎಸ್‌ಯುವಿ ಕಾರು ಮಾದರಿಯಾಗಿರುವ ಗ್ಲೊಸ್ಟರ್ ಮಾದರಿಯನ್ನ ಮೊದಲ ಬಾರಿಗೆ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಎಂಜಿ ಮೋಟಾರ್ ಕಂಪನಿಯು ಇದೀಗ ಅಧಿಕೃತವಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಲೆವಲ್ 1 ಅಟೊನೊಮಸ್ ಸಿಸ್ಟಂ ಸೇರಿದಂತೆ ಹತ್ತಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿಯುತ್ತಿದೆ.

ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಗ್ಲೊಸ್ಟರ್ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. ಗ್ಲೊಸ್ಟರ್ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಪಾರ್ಕ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೈನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಫಾರ್ವಡ್ ಕುಲಿಷನ್ ವಾರ್ನಿಂಗ್ ಸೌಲಭ್ಯಗಳಿವೆ.

ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಐಷಾರಾಮಿ ಫೀಚರ್ಸ್‌ಗಳ ಜೊತೆಗೆ ಆಫ್ ರೋಡ್ ಕೌಶಲ್ಯದಲ್ಲೂ ಗಮನಸೆಳೆಯುವ ಹೊಸ ಗ್ಲೊಸ್ಟರ್ ಕಾರು ಆಲ್ ಟೆರೆನ್ ಸಿಸ್ಟಂ, ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿದ್ದು, ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿ ಸ್ಯಾಂಡ್, ಮಡ್, ರಾಕ್, ಸ್ನೋ, ಇಕೋ, ಸ್ಪೋರ್ಟ್ ಮತ್ತು ನಾರ್ಮಲ್ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಕಾರಿನಲ್ಲಿ ಎಂಜಿ ಮೋಟಾರ್ಸ್ ಕಂಪನಿಯೇ ಅಭಿವೃದ್ದಿಗೊಳಿಸಲಾದ ಐ-ಸ್ಮಾರ್ಟ್ 2.0 ಕಾರ್ ಕನೆಕ್ಟೆಡ್ ಟೆಕ್ನಾಲಜಿ ಜೋಡಿಸಲಾಗಿದ್ದು, ಆ್ಯಂಟಿ-ಥೆಫ್ಟ್ ಇಮೊಬಿಲೈಸೇಶನ್, ಕ್ರಿಟಿಕಲ್ ಟ್ರೈರ್ ಪ್ರೆಷರ್ ವಾಯ್ಸ್ ಅಲರ್ಟ್, ಮ್ಯಾಪ್‌ಮೈಇಂಡಿಯಾದ 3ಡಿ ಮ್ಯಾಪ್, ಪಾಟ್‌ಹೊಲ್ ಅಲರ್ಟ್, ಸ್ಪೀಡ್ ಅಲರ್ಟ್ ಸೌಲಭ್ಯಗಳಿವೆ.

ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಜೊತೆಗೆ ಹೊಸ ಕಾರಿನಲ್ಲಿ ಎಲ್‌ಇಡಿ ಲೈಟಿಂಗ್ಸ್, ಪನೊರಮಿಕ್ ಸನ್‌ರೂಫ್, 19-ಇಂಚಿನ ಅಲಾಯ್ ವೀಲ್ಹ್, 12.3-ಇಂಚಿನ ಟಚ್ ಸ್ಕ್ರೀನ್ ಇನ್ಟೋಟೈನ್‌ಮೆಂಟ್, ಮುಂಭಾಗದಲ್ಲಿ ಮತ್ತು ಮಧ್ಯದ ಸಾಲಿನ ಆಸನಗಳಲ್ಲಿ ವೆಂಟಿಲೆಟರ್ ಆಸನೊಂದಿಗೆ ಹಿಟಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಲೆದರ್ ಸೀಟುಗಳು, 8-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಸೇರಿ ಹಲವಾರು ಫೀಚರ್ಸ್‌ಗಳಿವೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಬಲಿಷ್ಠ ಡೀಸೆಲ್ ಟರ್ಬೋ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಹೊಸ ಕಾರು ಖರೀದಿಗೆ ಈಗಾಗಲೇ ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್ ಮತ್ತು ಎಂಜಿನ್ ಸೌಲಭ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 35 ಲಕ್ಷದಿಂದ ರೂ.40 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Most Read Articles

Kannada
English summary
MG Gloster SUV Diesel Engine Details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X