Just In
- 1 hr ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 3 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 4 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 4 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗ್ಲೊಸ್ಟರ್ ಎಸ್ಯುವಿ ಕಾರಿನ ಮೊದಲ ಟೀಸರ್ ಬಿಡುಗಡೆ ಮಾಡಿದ ಎಂಜಿ ಮೋಟಾರ್
ಎಂಜಿ ಮೋಟಾರ್ ಕಂಪನಿಯು ಹೆಕ್ಟರ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹೆಕ್ಟರ್ ಪ್ಲಸ್ ನಂತರ ಗ್ಲೊಸ್ಟರ್ ಎಸ್ಯುವಿ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರಿನ ಮೊದಲ ಟೀಸರ್ ಬಹಿರಂಗಗೊಳಿಸಿದೆ.
ಹೊಸ ಟೀಸರ್ನಲ್ಲಿ ಗ್ಲೊಸ್ಟರ್ ಕಾರಿನ ಮೂಲಕ ಭಾರೀ ಬದಲಾವಣೆಯ ನೀರಿಕ್ಷೆಯಲ್ಲಿರುವ ಎಂಜಿ ಮೋಟಾರ್ ಕಂಪನಿಯು ಎಸ್ಯುವಿ ಕಾರು ಖರೀದಿದಾರರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಹೊಸ ತಲೆಮಾರಿನ ಆಟೋ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಹೊಸ ಕಾರನ್ನು ಬಿಡುಗಡೆ ಮಾಡುವ ನೀರಿಕ್ಷೆಯಲ್ಲಿದೆ. ಹೊಸ ಗ್ಲೊಸ್ಟರ್ ಕಾರು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿದೆ.
ಹೀಗಾಗಿ ಹೊಸ ಕಾರಿನ ಉತ್ಪಾದನಾ ಆವೃತ್ತಿಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಕಾರಿನ ಉತ್ಪಾದನಾ ಆವೃತ್ತಿಯ ಮೊದಲ ಟೀಸರ್ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ.
ಹೊಸ ಕಾರಿನಲ್ಲಿ ಐಷಾರಾಮಿ ಟೊಯೊಟಾ ಪ್ರಾಡೋ ಮತ್ತು ವೊಲ್ವೋ ಎಕ್ಸ್ಸಿ 90 ಕಾರುಗಳಲ್ಲಿ ಕಂಡುಬರುವ ಅಡ್ವಾನ್ಸ್ ಫ್ರಂಟ್ ಕುಲಿಷನ್ ಡಿಟೆಕ್ಟ್ ತಂತ್ರಜ್ಞಾನ ಪ್ರೇರಣೆ ಹೊಂದಿದೆ ಎನ್ನಲಾಗಿದ್ದು, ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಕೊನೆಯಲ್ಲಿ ಗ್ಲೊಸ್ಟರ್ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.
ಹೆಕ್ಟರ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹೆಕ್ಟರ್ ಪ್ಲಸ್ ನಂತರ ಬಿಡುಗಡೆಯಾಗುತ್ತಿರುವ ಗ್ಲೊಸ್ಟರ್ ಕಾರು ಮೊದಲ ಮೂರು ಕಾರುಗಳಿಂತಲೂ ಐಷಾರಾಮಿ ಫೀಚರ್ಸ್ನೊಂದಿಗೆ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಫುಲ್ ಸೈಜ್ ಎಸ್ಯುವಿ ಮಾದರಿಯಾಗಿ ಬಿಡುಗಡೆಗೊಳ್ಳಲಿದೆ.
ಗ್ಲೊಸ್ಟರ್ ಕಾರು ಟೊಯೊಟಾ ಐಷಾರಾಮಿ ಕಾರು ಆವೃತ್ತಿಯಾಗಿರುವ ಲ್ಯಾಂಡ್ ಕ್ರೂಸರ್ 200 ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಗಾತ್ರ ಹೊಂದಿದ್ದು, 5,100-ಎಂಎಂ ಉದ್ದ, 1,932-ಎಂಎಂ ಅಗಲ, 1,875-ಎಂಎಂ ಎತ್ತರ, 2,950-ಎಂಎಂ ವೀಲ್ಹ್ ಬೆಸ್ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ಗ್ಲೊಸ್ಟರ್ ಕಾರಿನ ಎಂಜಿನ್ ಮಾಹಿತಿಯು ಇದುವರೆಗೂ ಬಹಿರಂಗವಾಗಿಲ್ಲವಾದರೂ ಎಂಜಿ ಮಾತೃಸಂಸ್ಥೆಯಾದ ಸೈಕ್ ಕಂಪನಿಯು ತನ್ನ ಮತ್ತೊಂದು ಅಂಗಸಂಸ್ಥೆಯಾದ ಮಾಕ್ಸಸ್ ಡಿ90 ಕಾರಿನಲ್ಲಿ ಬಳಕೆ ಮಾಡಲಾದ 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಗ್ಲೊಸ್ಟರ್ ಕಾರಿಗಾಗಿ ಆಯ್ಕೆ ಮಾಡಬಹುದಾಗಿದೆ.
MOST READ: ಪ್ರತಿ ಚಾರ್ಜ್ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್
ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿ ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್ಬೋರ್ಡ್ ಮತ್ತು ಟೈಲ್ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ, 12.3-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್ಮೆಂಟ್ ಸಿಸ್ಟಂ, ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್ರೂಫ್ ಮತ್ತು ಕ್ವಾಡ್ ಎಕ್ಸಾಸ್ಟ್ ಸಿಸ್ಟಂ ಪಡೆದುಕೊಂಡಿದೆ.
7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+3 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಜೋಡಿಸಲಾಗಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಆಸನದಲ್ಲಿ ಹಲವಾರು ಕಾರ್ ಕನೆಕ್ಟೆಡ್ ಸೌಲಭ್ಯಗಳೊಂದಿಗೆ ಅರಾಮಾದಾಯಕ ಪ್ರಯಾಣಕ್ಕಾಗಿ ಮಸಾಜ್ ಫೀಚರ್ಸ್ ನೀಡಲಾಗಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..
ಅಂದಾಜು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಮಾಹಿತಿಗಳ ಪ್ರಕಾರ, ಗ್ಲೊಸ್ಟರ್ ಎಸ್ಯುವಿ ಆವೃತ್ತಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.30 ಲಕ್ಷದಿಂದ ರೂ.35 ಲಕ್ಷ ಬೆಲೆ ಅಂತರದೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.