ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಎಂಜಿ ಗ್ಲೊಸ್ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಎಸ್‍ಯುವಿಯಾಗಿದೆ. ಈ ವರ್ಷದ ಆರಂಭದಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಎಂಜಿ ಗ್ಲೊಸ್ಟರ್ ಎಸ್‍ಯುವಿಯನ್ನು ಪ್ರದರ್ಶಿಸಿದ್ದರು.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಎಂಜಿ ಮೋಟಾರ್ ಸಂಸ್ಥೆಯು ಗ್ಲೊಸ್ಟರ್ ಎಸ್‍ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಿಲ್ಲ. ಕೆಲವು ವರದಿಗಳ ಪ್ರಕಾರ ಮುಂದಿನ ತಿಂಗಳು 7ರಂದು ಗ್ಲೊಸ್ಟರ್ ಎಸ್‍ಯುವಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಎಂಜಿ ಗ್ಲೊಸ್ಟರ್ ಎಸ್‍ಯುವಿಯು ಮ್ಯಾಕ್ಸಸ್ ಡಿ90 ಮಾದರಿಯನ್ನು ಆಧರಿಸಿದೆ. ಇದನ್ನು ಎಂಜಿ ಮೋಟರ್ ಮೂಲ ಕಂಪನಿಯಾದ ಎಸ್‌ಐಸಿ ಚೀನಾದಲ್ಲಿ ಮಾರಾಟ ಮಾಡುತ್ತಿದೆ. ಗ್ಲೊಸ್ಟರ್ ಪೂರ್ಣ ಗಾತ್ರದ ಮೂರು-ಸಾಲಿನ ಎಸ್‍ಯುವಿಯಾಗಿದೆ.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಈ ಗ್ಲೊಸ್ಟರ್ ಎಸ್‍ಯುವಿಯ ಮುಂಭಾಗ ಮೂರು ಸ್ಲ್ಯಾಟ್ ಗ್ರಿಲ್ ನೋಡುಗರಿಗೆ ಅಗ್ರೇಸಿವ್ ವೈಬ್ ನೀಡುತ್ತದೆ, ಇದರ ನಡುವೆ ಎಂಜಿ ಲೋಗೋವನ್ನು ಅಳವಡಿಸಲಾಅಗಿದೆ. ಮುಂಭಾಗದ ಬಾನೆಟ್ ಮತ್ತು ಸಂಯೋಜಿತ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಸ್ಲೀಕ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅನ್ನು ಹೊಂದಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕೊಡಿಯಾಕ್ ಎಸ್‍‍‍ಯುವಿ

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಎಂಜಿ ಮೋಟಾರ್ ಈ ಎಸ್‍ಯುವಿಗೆ 4×4 ಸಿಸ್ಟಂ ಮತ್ತು ಡ್ರೈವ್ ಮೋಡ್‌ಗಳೊಂದಿಗೆ ಪವರ್ ಫುಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎಂಜಿ ಮೋಟಾರ್ ಹೊಸ ಆಫ್ ರೋಡ್ ಸಾಮರ್ಥ್ಯವನ್ನು ಪ್ರದರ್ಶಿಸುವ ಟಿವಿಸಿ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಎಂಜಿ ಮೋಟಾರ್ ಇಂಡಿಯಾ ಸಂಸ್ಥೆ ತನ್ನ ಗ್ಲೊಸ್ಟರ್ ಎಸ್‍ಯುವಿಯನ್ನು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ತನ್ನ ಆಫ್-ರೋಡ್ ಸಾಮರ್ಥ್ಯವನ್ನು ವೀಡಿಯೋದಲ್ಲಿ ಪ್ರದರ್ಶಿಸಿದೆ. ಇನ್ನು ಈ ಎಸ್‍ಯುವಿಯು ನೀರು ತುಂಬಿರುವ ಪ್ರದೇಶಗಳಲ್ಲಿ ಸರಾಗವಾಗಿ ಚಲಿಸುವುದನ್ನು ಪ್ರದರ್ಶಿಸಿದ್ದಾರೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಇದರರ್ಥ ಈ ಎಸ್‌ಯುವಿ ಉತ್ತಮ ವಾಟರ್ ವೇಡಿಂಗ್ ಸಾಮರ್ಥ್ಯದೊಂದಿಗೆ ಬರಲಿದೆ. ಹೆಚ್ಚುವರಿಯಾಗಿ ಎಂಜಿ ಗ್ಲೊಸ್ಟರ್ 360 ಡಿಗ್ರಿ ಕ್ಯಾಮೆರಾ,ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಎಮರ್ಜನ್ಸಿ ಸ್ಟಾಪ್‌ಲೈಟ್‌ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನಂತಹ ಸ್ಮಾರ್ಟ್ ಫೀಚರ್ ಗಳನ್ನು ಹೊಂದಿದೆ.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಇದರೊಂದಿಗೆ ಈ ಪ್ರೀಮಿಯಂ ಎಸ್‍ಯುವಿಯಲ್ಲಿ ಕೂಲಿಷನ್ ವಾರ್ನಿಂಗ್, ಬ್ಲೈಂಡ್-ಸ್ಪಾಟ್ ಮಾನಿಟರ್, ಆಟೋ ಪಾರ್ಕ್ ಅಸಿಸ್ಟ್ ಮತ್ತು ಲೇನ್ ಎಕ್ಸಿಸ್ಟ್ ಸೇರಿದಂತೆ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂಗಳನ್ನು ಹೊಂದಿರಲಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಎಂಜಿ ಗ್ಲೊಸ್ಟರ್ ಎಸ್‍ಯುವಿಯಲ್ಲಿ 12.3-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, ಕಂಪನಿಯ ಐಸ್ಮಾರ್ಟ್ ಕನೆಕ್ಟಿವಿಟಿ ಕಾರು ತಂತ್ರಜ್ಞಾನ, 12-ಸ್ಪೀಕರ್ ಮ್ಯೂಸಿಕ್ ಸಿಸ್ಟಂ ಮತ್ತು 8-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತ ಫೀಚರ್ ಗಳನ್ನು ಒಳಗೊಂಡಿದೆ.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಈ ಎಸ್‌ಯುವಿಯಲ್ಲಿ ಕ್ಲೈಮೆಟ್ ಕಂಟ್ರೋಲ್, ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳು ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ. 64-ಆಂಬಿಯೆಂಟ್ ಲೈಟಿಂಗ್ ಫೀಚರ್ ಪಡೆದ ತನ್ನ ವಿಭಾಗದಲ್ಲಿ ಇದು ಮೊದಲ ಎಸ್‌ಯುವಿ ಆಗಲಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಎಸ್‍ಯುವಿಯ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ. ಇದರಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 220 ಬಿಹೆಚ್‌ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ಗೆ ಜೋಡಿಸಲಾಗುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 212 ಬಿಹೆಚ್‌ಪಿ ಪವರ್ ಮತ್ತು 480 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ಟಿವಿಸಿ ಬಿಡುಗಡೆ

ಎಂಜಿ ಗ್ಲೊಸ್ಟರ್ ಎಸ್‍ಯುವಿಯು 5005 ಎಂಎಂ ಉದ್ದ, 1,932 ಎಂಎಂ ಅಗಲ ಮತ್ತು 1,875 ಎಂಎಂ ಎತ್ತರವನ್ನು ಹೊಂದಿದೆ. ಈ ಹೊಸ ಎಂಜಿ ಗ್ಲೊಸ್ಟರ್ ಪ್ರೀಮಿಯಂ ಎಸ್‍ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
MG Gloster Goes Off Roading In New TVC Video. Read In Kannada.
Story first published: Monday, September 21, 2020, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X