ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸುತ್ತಿದ್ದು, ಬಿಡುಗಡೆಗೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳು ಮತ್ತು ವೆರಿಯೆಂಟ್ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿದೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿರುವ ಎಂಜಿ ಗ್ಲೊಸ್ಟರ್ ಕಾರು 4x2 ಮತ್ತು 4x4 ಮಾದರಿಗಳನ್ನು ಹೊಂದಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ. ಹೊಸ ಕಾರು ಲೆವಲ್ 1 ಅಟೊನೊಮಸ್ ಸಿಸ್ಟಂ ಸೇರಿದಂತೆ ಹತ್ತಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿಯುತ್ತಿದ್ದು, ಹೊಸ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಗ್ಲೊಸ್ಟರ್ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಪಾರ್ಕ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೈನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಫಾರ್ವಡ್ ಕುಲಿಷನ್ ವಾರ್ನಿಂಗ್ ಸೌಲಭ್ಯಗಳಿವೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಐಷಾರಾಮಿ ಫೀಚರ್ಸ್‌ಗಳ ಜೊತೆಗೆ ಆಫ್ ರೋಡ್ ಕೌಶಲ್ಯದಲ್ಲೂ ಗಮನಸೆಳೆಯುವ ಹೊಸ ಗ್ಲೊಸ್ಟರ್ ಕಾರು ಆಲ್ ಟೆರೆನ್ ಸಿಸ್ಟಂ, ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿದ್ದು, ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿ ಸ್ಯಾಂಡ್, ಮಡ್, ರಾಕ್, ಸ್ನೋ, ಇಕೋ, ಸ್ಪೋರ್ಟ್ ಮತ್ತು ನಾರ್ಮಲ್ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಗ್ಲೊಸ್ಟರ್ ಕಾರಿನಲ್ಲಿ ಎಂಜಿ ಮೋಟಾರ್ಸ್ ಕಂಪನಿಯೇ ಅಭಿವೃದ್ದಿಗೊಳಿಸಲಾದ ಐ-ಸ್ಮಾರ್ಟ್ 2.0 ಕಾರ್ ಕನೆಕ್ಟೆಡ್ ಟೆಕ್ನಾಲಜಿ ಜೋಡಿಸಲಾಗಿದ್ದು, ಆ್ಯಂಟಿ-ಥೆಫ್ಟ್ ಇಮೊಬಿಲೈಸೇಶನ್, ಕ್ರಿಟಿಕಲ್ ಟ್ರೈರ್ ಪ್ರೆಷರ್ ವಾಯ್ಸ್ ಅಲರ್ಟ್, ಮ್ಯಾಪ್‌ಮೈಇಂಡಿಯಾದ 3ಡಿ ಮ್ಯಾಪ್, ಪಾಟ್‌ಹೊಲ್ ಅಲರ್ಟ್, ಸ್ಪೀಡ್ ಅಲರ್ಟ್ ಸೌಲಭ್ಯಗಳಿವೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಜೊತೆಗೆ ಹೊಸ ಕಾರಿನಲ್ಲಿ ಎಲ್‌ಇಡಿ ಲೈಟಿಂಗ್ಸ್, ಪನೊರಮಿಕ್ ಸನ್‌ರೂಫ್, 19-ಇಂಚಿನ ಅಲಾಯ್ ವೀಲ್ಹ್, 12.3-ಇಂಚಿನ ಟಚ್ ಸ್ಕ್ರೀನ್ ಇನ್ಟೋಟೈನ್‌ಮೆಂಟ್, ಮುಂಭಾಗದಲ್ಲಿ ಮತ್ತು ಮಧ್ಯದ ಸಾಲಿನ ಆಸನಗಳಲ್ಲಿ ವೆಂಟಿಲೆಟರ್ ಆಸನೊಂದಿಗೆ ಹಿಟಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಲೆದರ್ ಸೀಟುಗಳು, 8-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಸೇರಿ ಹಲವಾರು ಫೀಚರ್ಸ್‌ಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಎಂಜಿನ್ ಮತ್ತು ಪರ್ಫಾಮೆನ್ಸ್

ಎಂಜಿ ಮೋಟಾರ್ ಕಂಪನಿಯು ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, 4x4 ಮಾದರಿಯಲ್ಲಿ ಟ್ವಿನ್ ಟರ್ಬೋ ಮತ್ತು 4x2 ಮಾದರಿಯಲ್ಲಿ ಸಿಂಗಲ್ ಟರ್ಬೋ ಎಂಜಿನ್ ನೀಡಲಾಗಿದೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಎರಡು ಮಾದರಿಗಳಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ನೀಡಲಾಗಿದ್ದು, ಟ್ವಿನ್ ಟರ್ಬೋ ಮಾದರಿಯು 218-ಬಿಹೆಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಸಿಂಗಲ್ ಟರ್ಬೋ ಮಾದರಿಯು 160-ಬಿಎಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಎಂಜಿ ಗ್ಲೊಸ್ಟರ್ ಎಸ್‌ಯುವಿ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಹೊಸ ಕಾರು ಖರೀದಿಗೆ ಈಗಾಗಲೇ ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್ ಮತ್ತು ಎಂಜಿನ್ ಸೌಲಭ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 35 ಲಕ್ಷದಿಂದ ರೂ.40 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Most Read Articles

Kannada
English summary
MG Gloster SUV Variants And Features. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X