ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಎಂಜಿ ಮೋಟಾರ್ ಸಂಸ್ಥೆಯು ಹೆಕ್ಟರ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ಬಿಡುಗಡೆಯ ನಂತರ ಭಾರತದಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಗ್ಲೊಸ್ಟರ್ ಕಾರಿನ ಬಿಡುಗಡೆ ಮಾಹಿತಿ ಹಂಚಿಕೊಂಡಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಕಾರು ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ಎಂಜಿ ಮೋಟಾರ್ ಸಂಸ್ಥೆಯು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಸುಮಾರು 14 ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸುವ ಮೂಲಕ ಹೊಸ ಸಂಚಲನ ಸೃಷ್ಠಿಸಿತ್ತು. ಇದರಲ್ಲಿ ಗ್ಲೊಸ್ಟರ್ ಎಸ್‌ಯುವಿ ಕೂಡಾ ಒಂದಾಗಿದ್ದು, ಫುಲ್ ಸೈಜ್ ಎಸ್‌ಯುವಿ ಮಾದರಿಗಳಿಂತಲೂ ಬಲಿಷ್ಠ ವಿನ್ಯಾಸ ಹೊಂದಿರುವ ಹೊಸ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಹೊಸ ಗ್ಲೊಸ್ಟರ್ ಕಾರಿನ ಗಾತ್ರವು ಟೊಯೊಟಾ ಐಷಾರಾಮಿ ಕಾರು ಆವೃತ್ತಿಯಾಗಿರುವ ಲ್ಯಾಂಡ್ ಕ್ರೂಸರ್ 200 ಆವೃತ್ತಿಗಿಂತಲೂ ಹೆಚ್ಚಿದ್ದು, ಬರೋಬ್ಬರಿ 5,100 ಎಂಎಂ ಉದ್ದಳತೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಸದ್ಯ ಅನಾವರಣಗೊಂಡಿರುವ ಗ್ಲೊಸ್ಟರ್ ಕಾರು ಚೀನಿ ಮಾರುಕಟ್ಟೆಯಲ್ಲಿ ಮ್ಯಾಕ್ಸಸ್ ಡಿ90 ಹೆಸರಿನೊಂದಿಗೆ ಮಾರಾಟವಾಗುತ್ತಿದ್ದು, ಎಂಜಿ ಮಾತೃಸಂಸ್ಥೆಯಾಗಿರುವ ಸೈಕ್ ಇದೀಗ ಮ್ಯಾಕ್ಸಸ್ ಡಿ90 ಕಾರು ಮಾದರಿಯನ್ನು ಹೊಸ ಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಚೀನಿ ಮಾರುಕಟ್ಟೆಯಲ್ಲಿ ಮ್ಯಾಕ್ಸಸ್ ಸಂಸ್ಥೆಯು ಕೂಡಾ ಸೈಕ್ ಸಂಸ್ಥೆಯ ಅಡಿಯಲ್ಲೇ ಕಾರ್ಯನಿರ್ವಹಣೆ ಮಾಡುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಅರಿತಿರುವ ಸೈಕ್ ಸಂಸ್ಥೆಯು ಎಂಜಿ ಬ್ಯಾಡ್ಜ್‌ನೊಂದಿಗೆ ಕೆಲವು ಬದಲಾವಣೆಗಳನ್ನು ಮಾಡಿ ಗ್ಲೊಸ್ಟರ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಫುಲ್ ಸೈಜ್ ಎಸ್‌ಯುವಿ ಆವೃತ್ತಿಯಾಗಿರುವ ಗ್ಲೊಸ್ಟರ್ ಕಾರು ಇದೇ ವರ್ಷ ನವೆಂಬರ್‌ನಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಕಾರಿನ ಗಾತ್ರಕ್ಕೆ ತಕ್ಕಂತೆ ಬಲಿಷ್ಠ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಸದ್ಯ ಮಾರುಕಟ್ಟೆಯಲ್ಲಿರುವ ಮಾಕ್ಸಸ್ ಡಿ90 ಕಾರು 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಗ್ಲೊಸ್ಟರ್ ಕಾರು ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಇದಲ್ಲದೇ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್‌ಬೋರ್ಡ್ ಮತ್ತು ಟೈಲ್‌ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 12.3-ಇಂಚಿನ ಟಚ್ ‌ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ, ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್‌ರೂಫ್ ಸೌಲಭ್ಯವಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+3 ಮಾದರಿಯಲ್ಲಿ ಸೌಲಭ್ಯವನ್ನು ಜೋಡಿಸಲಾಗಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಆಸನದಲ್ಲಿ ಹಲವಾರು ಕಾರ್ ಕನೆಕ್ಟೆಡ್ ಸೌಲಭ್ಯಗಳೊಂದಿಗೆ ಅರಾಮಾದಾಯಕ ಪ್ರಯಾಣಕ್ಕಾಗಿ ಮಸಾಜ್ ಫೀಚರ್ಸ್ ನೀಡಲಾಗಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಬಿಡುಗಡೆ ಮತ್ತು ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಮಾಹಿತಿಗಳ ಪ್ರಕಾರ, ಗ್ಲೊಸ್ಟರ್ ಎಸ್‌ಯುವಿ ಆವೃತ್ತಿಯು ಇದೇ ವರ್ಷ ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 30 ಲಕ್ಷದಿಂದ ರೂ.35 ಲಕ್ಷ ಬೆಲೆ ಅಂತರದೊಂದಿಗೆ ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿ ಎಂಜಿ ಗ್ಲೊಸ್ಟರ್

ಇನ್ನು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಸ್‌ಯುವಿ, ಎಂಪಿವಿ, ಸೆಡಾನ್ ಮತ್ತು ಎಲೆಕ್ಟ್ರಿಕ್ ಕಾರನ್ನು ಪ್ರದರ್ಶನಗೊಳಿಸಿರುವ ಎಂಜಿ ಮೋಟಾರ್ಸ್ ಸಂಸ್ಥೆಯು ಇದೇ ವರ್ಷದಲ್ಲಿ ಮೂರು ಹೊಸ ಕಾರುಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಹೆಕ್ಟರ್ ಪ್ಲಸ್ ಮತ್ತು 7 ಸೀಟರ್ ಎಂಪಿವಿ ಕಾರೊಂದು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿವೆ.

Most Read Articles

Kannada
English summary
MG Gloster will be launched in november in India features engine details. Read in Kannada.
Story first published: Friday, February 21, 2020, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X