ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಕಳೆದ ವಾರ ಹರಿಯಾಣದಲ್ಲಿ ಎಂಜಿ ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ವರದಿಯಾಗಿತ್ತು. ಈಗ ಈ ಬಗ್ಗೆ ಎಂಜಿ ಮೋಟಾರ್ ಇಂಡಿಯಾ ಅಧಿಕೃತವಾದ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ. ಈ ಹೇಳಿಕೆಯಲ್ಲಿ ಎಂಜಿ ಹೆಕ್ಟರ್ ಕಾರಿಗೆ ಯಾವ ಕಾರಣಕ್ಕೆ ಬೆಂಕಿ ಬಿದ್ದಿತ್ತು ಎಂಬ ಬಗ್ಗೆ ಸ್ಪಷ್ಟನೆ ನೀಡಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಎಂಜಿ ಮೋಟಾರ್ ಕೂಲಂಕುಷವಾದ ತನಿಖೆಯನ್ನು ಕೈಗೊಂಡಿತ್ತು. ಈ ತನಿಖೆಯಲ್ಲಿ ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಕಾರಣಗಳು ತಿಳಿದು ಬಂದಿವೆ. ಇದರ ಪ್ರಕಾರ ಎಂಜಿನ್ ಬೇನಲ್ಲಿ ಇಡಲಾಗಿದ್ದ ವಸ್ತುವೊಂದರ ಕಾರಣಕ್ಕೆ ಹೆಚ್ಚು ಟೆಂಪರೆಚರ್‍‍ನಿಂದಾಗಿ ಬೆಂಕಿ ಹೊತ್ತಿ ಕೊಂಡಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಕಳೆದ ವಾರ ಎಂಜಿ ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ವೀಡಿಯೊ ವೈರಲ್ ಆಗಿತ್ತು. ಈ ವೀಡಿಯೊವನ್ನು ಸಾವಿರಾರು ಜನರು ವೀಕ್ಷಿಸಿದ್ದರೆ, ನೂರಾರು ಜನರು ಶೇರ್ ಮಾಡಿದ್ದರು. ಕೆಲವು ಜನರು ಎಂಜಿ ಮೋಟಾರ್ ಕಳಪೆ ದರ್ಜೆಯ ಕಾರ್ ಅನ್ನು ತಯಾರಿಸಿದೆ ಎಂದು ಕಂಪನಿಯನ್ನೇ ದೂಷಿಸಿದ್ದರು.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಇನ್ನೂ ಕೆಲವರು ಈ ಬಗ್ಗೆ ಕಂಪನಿಯು ಅಧಿಕೃತ ತನಿಖೆಯನ್ನು ನಡೆಸುವಂತೆ ಆಗ್ರಹಿಸಿದ್ದರು. ಎಂಜಿ ಮೋಟಾರ್ ಒಂದು ತನಿಖೆಯ ಬದಲು ಎರಡು ತನಿಖೆಗಳನ್ನು ನಡೆಸಿತ್ತು. ತನಿಖೆ ಪೂರ್ಣಗೊಂಡ ನಂತರ ಎಂಜಿ ಕಂಪನಿಯು ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಈ ಹೇಳಿಕೆಯಲ್ಲಿ, ನಾವು ತನಿಖೆಗಾಗಿ ಎರಡು ಟೀಂ ರಚಿಸಿದ್ದೇವು. ಒಂದು ಟೀಂನಲ್ಲಿ ನಮ್ಮ ಕಂಪನಿಯ ಪರಿಣಿತ ಎಂಜಿನಿಯರ್‍‍ಗಳಿದ್ದರು. ಇನ್ನೊಂದು ಟೀಂನಲ್ಲಿ ಸರ್ಕಾರದ ನೇತೃತ್ವದಲ್ಲಿ ಹೊರಗಡೆಯ ತಂಡವನ್ನು ರಚಿಸಿ, ಕಾರಿಗೆ ಬೆಂಕಿ ಬೀಳಲು ಕಾರಣವೇನು ಎಂಬುದನ್ನು ತಿಳಿಸಲು ಸೂಚಿಸಲಾಗಿತ್ತು ಎಂದು ಹೇಳಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಈ ಎರಡು ಟೀಂಗಳು ನಡೆಸಿದ ತನಿಖೆಯಲ್ಲಿಯೂ ಒಂದೇ ರೀತಿಯಾಗಿ ವರದಿಯಾಗಿದೆ. ತನಿಖೆಯಲ್ಲಿ ಇಂಟರ್ನಲ್ ವೈರಿಂಗ್, ಎಲೆಕ್ಟ್ರಿಕ್ ಕನೆಕ್ಷನ್, ಆಯಿಲ್ ಹಾಗೂ ಫ್ಯೂಯಲ್ ಲೈನ್‍‍ಗಳು ಒಂದಕ್ಕೊಂದು ತಾಗಿ ಬೆಂಕಿ ಬಿದ್ದಿದೆ ಎಂದು ಹೇಳಲಾಗಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಎಂಜಿನ್ ಬೇನಲ್ಲಿ ಇಟ್ಟಿದ್ದ ವಸ್ತುವಿನ ಕಾರಣಕ್ಕೆ ಬೆಂಕಿ ಬಿದ್ದಿದೆ ಎಂದು ಎಂಜಿ ಮೋಟಾರ್ ಹೇಳಿದೆ. ಕಾರಿನ ಹೈ ಟೆಂಪರೇಚರ್ ಜೋನ್‍ ಎಂದು ಹೇಳಲಾಗುವ ಎಕ್ಸಾಸ್ಟ್ ಮ್ಯಾನಿ‍‍ಫೋಲ್ಡ್ ಬಳಿಯಲ್ಲಿ ಕಾರ್ ಅನ್ನು ಒರೆಸಲು ಇಟ್ಟಿದ್ದ ಬಟ್ಟೆಯು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಮೊದಲೇ ಹೈ ಟೆಂಪರೇಚರ್ ಜೋನ್ ಆದ ಕಾರಣಕ್ಕೆ ಬಟ್ಟೆಗೆ ಬೆಂಕಿ ಬಿದ್ದು, ನಂತರ ಕಾರಿನ ಇತರ ಭಾಗಗಳಿಗೆ ಬೆಂಕಿಯು ಹರಡಿದೆ. ಇದರಿಂದಾಗಿ ವೀಡಿಯೊದಲ್ಲಿ ಕಂಡು ಬಂದಂತೆ ಕಾರಿನ ಮುಂಭಾಗವು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಎಂಜಿ ಕಂಪನಿಯ ಹೇಳಿಕೆಯಲ್ಲಿ ಈ ಕಾರಿನ ಮಾಲೀಕನು ಸಹ ಎಂಜಿ ಮೋಟಾರ್‍‍ನ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಸಹ ಹೇಳಲಾಗಿದೆ. ಕಂಪನಿಯ ತನಿಖೆಯ ಬಗ್ಗೆ ಮಾಲೀಕನು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಸಹ ಹೇಳಲಾಗಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಂಜಿ ಮೋಟಾರ್ ಇಂಡಿಯಾ ಹೆಕ್ಟರ್ ಕಾರಿಗೆ ಬೆಂಕಿ ಬಿದ್ದಿರುವ ಘಟನೆಯನ್ನು ಸೂಕ್ತ ತನಿಖೆಯ ಮೂಲಕ ಜವಾಬ್ದಾರಿಯುತವಾಗಿ ನಿರ್ವಹಿಸಿದೆ. ಕಾರಿನ ಮಾಲೀಕನು ಎಂಜಿ ಮೋಟಾರ್‍‍ನ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದರೂ, ಕಾರು ಮಾಲೀಕರು ಕಾರುಗಳನ್ನು ಸೂಕ್ತವಾಗಿ ಮೆಂಟೆನೆನ್ಸ್ ಮಾಡಬೇಕೆಂಬುದಕ್ಕೆ ಈ ಘಟನೆಯು ಸಾಕ್ಷಿಯಾಗಿದೆ.

ಹೆಕ್ಟರ್ ಕಾರಿಗೆ ಬೆಂಕಿ ಬಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಎಂಜಿ ಮೋಟಾರ್

ಮೆಂಟೆನೆನ್ಸ್ ಎಂಬುದು ಸರಿಯಾದ ಸಮಯಕ್ಕೆ ಸರ್ವಿಸ್ ಮಾಡುವುದು ಮಾತ್ರವಲ್ಲದೇ ಅಪಾಯಕಾರಿ ಸ್ಥಳಗಳಲ್ಲಿ ಸುಲಭವಾಗಿ ಬೆಂಕಿ ಬೀಳುವ ಬಟ್ಟೆಯಂತಹ ವಸ್ತುಗಳನ್ನು ಇಡದೇ ಇರುವುದು ಸಹ ಸೇರಿದೆ.

Most Read Articles

Kannada
English summary
MG Motor Issues Statement Regarding MG Hector Fire. Read in Kannada.
Story first published: Tuesday, January 28, 2020, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X