ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಕಾರಿನ ಬೆಲೆಯಲ್ಲಿ ರೂ.50 ಸಾವಿರ ಹೆಚ್ಚಳ

ಎಂಜಿ ಮೋಟಾರ್ ಕಂಪನಿಯು ಕಳೆದ ತಿಂಗಳು 13ರಂದು ಬಿಡುಗಡೆ ಮಾಡಿದ್ದ ಹೆಕ್ಟರ್ ಪ್ಲಸ್ ಕಾರಿನ ಬೆಲೆಯನ್ನು ನಿಗದಿಯಂತೆ ಹೆಚ್ಚಳ ಮಾಡಿದ್ದು, ಎಲ್ಲಾ ವೆರಿಯೆಂಟ್‌ಗಳ ಬೆಲೆಯಲ್ಲೂ ರೂ.50 ಸಾವಿರ ಹೆಚ್ಚಳ ಮಾಡಲಾಗಿದೆ.

ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಬೆಲೆಯಲ್ಲಿ ರೂ.50 ಸಾವಿರ ಏರಿಕೆ

ಹೆಕ್ಟರ್ ಪ್ಲಸ್ ಬಿಡುಗಡೆಯ ಸಂದರ್ಭದಲ್ಲೇ ಹೊಸ ಕಾರಿನ ಬೆಲೆ ಹೆಚ್ಚಳ ಮಾಡುವ ಬಗ್ಗೆ ಹೇಳಿಕೊಂಡಿದ್ದ ಎಂಜಿ ಮೋಟಾರ್ ಕಂಪನಿಯು ಹೊಸ ಕಾರು ಬಿಡುಗಡೆಯಾಗಿ 1 ತಿಂಗಳ ತನಕ ಆರಂಭಿಕ ಬೆಲೆಯಾಗಿ ರೂ.50 ಸಾವಿರ ವಿನಾಯ್ತಿ ನೀಡಿತ್ತು. ಇದೀಗ ಕಾರಿನ ಬೆಲೆಯನ್ನು ಪೂರ್ವ ನಿಗದಿಯೆಂತೆ ಹೆಚ್ಚಳ ಮಾಡಿದ್ದು, ಇಂದಿನಿಂದ ಎಂಜಿ ಹೆಕ್ಟರ್ ಕಾರಿನ ಬೆಲೆಯು ರೂ.50 ಸಾವಿರ ಹೆಚ್ಚಳದೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.19.04 ಲಕ್ಷಕ್ಕೆ ಏರಿಕೆಯಾಗಿದೆ.

ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಬೆಲೆಯಲ್ಲಿ ರೂ.50 ಸಾವಿರ ಏರಿಕೆ

ಹೊಸ ಹೆಕ್ಟರ್ ಪ್ಲಸ್ ಎಸ್‌ಯುವಿ ಆವೃತ್ತಿಯು ಸದ್ಯಕ್ಕೆ 6 ಆಸನ ಸೌಲಭ್ಯಗಳೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು ಸಹ ಮಾರಾಟ ಮಾಡುವುದಾಗಿ ಎಂಜಿ ಕಂಪನಿಯು ಹೇಳಿಕೊಂಡಿದೆ.

ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಬೆಲೆಯಲ್ಲಿ ರೂ.50 ಸಾವಿರ ಏರಿಕೆ

ಹೊಸ ಕಾರು ಗ್ರಾಹಕರ ಬೇಡಿಕೆ ಅನ್ವಯ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲದೆ ಎಂಪಿವಿ ಕಾರು ಮಾದರಿಗಳಿಗೂ ಪೈಪೋಟಿ ನೀಡಲುವ ನೀರಿಕ್ಷೆಯಲ್ಲಿದೆ.

ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಬೆಲೆಯಲ್ಲಿ ರೂ.50 ಸಾವಿರ ಏರಿಕೆ

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಒಟ್ಟು 8 ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಮಾದರಿಯಲ್ಲಿ ಮೂರು ವೆರಿಯೆಂಟ್, ಪೆಟ್ರೋಲ್ ಹೈಬ್ರಿಡ್ ಮಾದರಿಯಲ್ಲಿ ಒಂದು ವೆರಿಯೆಂಟ್ ಹೊಂದಿದೆ. ಹಾಗೆಯೇ ಡೀಸೆಲ್ ವೆರಿಯೆಂಟ್‌ನಲ್ಲಿ ನಾಲ್ಕು ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಸಾಮಾನ್ಯ ಹೆಕ್ಟರ್ ಕಾರಿಗೂ ಹೆಕ್ಟರ್ ಪ್ಲಸ್ ಕಾರು ರೂ.1.15 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಬೆಲೆಯಲ್ಲಿ ರೂ.50 ಸಾವಿರ ಏರಿಕೆ

ಇನ್ನು ಹೊಚ್ಚ ಹೊಸ ಹೆಕ್ಟರ್ ಪ್ಲಸ್ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ಹೊಸ ಕಾರು ಸಾಮಾನ್ಯ ಹೆಕ್ಟರ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಸಿದ್ದಗೊಂಡಿದ್ದು, 2+2+2 ಆಸನ ವಿನ್ಯಾಸವನ್ನು ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಬೆಲೆಯಲ್ಲಿ ರೂ.50 ಸಾವಿರ ಏರಿಕೆ

ಹೊಸ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಬೆಲೆಯಲ್ಲಿ ರೂ.50 ಸಾವಿರ ಏರಿಕೆ

ಎಂಜಿನ್ ಸಾಮಾರ್ಥ್ಯ

ಸಾಮಾನ್ಯ ಮಾದರಿಯ 5 ಆಸನವುಳ್ಳ ಹೆಕ್ಟರ್ ಕಾರಿನಲ್ಲಿ ನೀಡಲಾಗಿರುವ ಎಂಜಿನ್ ಮಾದರಿಯೇ ಇದೀಗ ಹೊಸ ಹೆಕ್ಟರ್ ಪ್ಲಸ್‌ನಲ್ಲೂ ನೀಡಲಾಗಿದ್ದು, 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಜೋಡಣೆ ಮಾಡಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಇಂದಿನಿಂದ ಎಂಜಿ ಹೆಕ್ಟರ್ ಪ್ಲಸ್ ಬೆಲೆಯಲ್ಲಿ ರೂ.50 ಸಾವಿರ ಏರಿಕೆ

2.0-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 170-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದರೆ 1.5-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 143-ಬಿಎಚ್‌ಪಿ ಮತ್ತು ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ 48ವೋಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಉತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದೆ.

Most Read Articles

Kannada
English summary
MG Hector Plus Price Hike. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X