Just In
- 1 hr ago ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- 1 hr ago ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- 1 hr ago Ather: ಬೆಂಗಳೂರಿನ ಎಥರ್ನಿಂದ ಫ್ಯಾಮಿಲಿ ಇ-ಸ್ಕೂಟರ್ 'ರಿಜ್ಟಾ' ಬುಕ್ಕಿಂಗ್ ಆರಂಭ, ರೂ.999 ಪಾವತಿಸಿದರೆ ಸಾಕು!
- 2 hrs ago Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
Don't Miss!
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- News ಬಿವೈ ವಿಜಯೇಂದ್ರ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದೇನು?
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಕರ್ಷಕ ಬೆಲೆಯೊಂದಿಗೆ ಎಂಜಿ ಹೆಕ್ಟರ್ ಪ್ಲಸ್ ಎಸ್ಯುವಿ ಬಿಡುಗಡೆ
ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿ 1 ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಹೆಕ್ಟರ್ ಪ್ಲಸ್ ಎಸ್ಯುವಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಸಾಮಾನ್ಯ ಮಾದರಿಯ ಹೆಕ್ಟರ್ ಕಾರು ಮಾದರಿಯಲ್ಲೇ ಭಾರೀ ನೀರಿಕ್ಷೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಹೆಕ್ಟರ್ ಎಸ್ಯುವಿ ಆವೃತ್ತಿಯು ಸದ್ಯಕ್ಕೆ 6 ಆಸನ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು ಸಹ ಖರೀದಿಗೆ ಲಭ್ಯವಿರಲಿದೆ. ಹೊಸ ಕಾರು ಗ್ರಾಹಕರ ಬೇಡಿಕೆ ಅನ್ವಯ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್ಯುವಿ ಕಾರು ಮಾದರಿಗಳಲ್ಲದೆ ಎಂಪಿವಿ ಕಾರು ಮಾದರಿಗಳಿಗೂ ಪೈಪೋಟಿ ನೀಡುವ ತವಕದಲ್ಲಿದೆ.
ಹೊಸ ಹೆಕ್ಟರ್ ಪ್ಲಸ್ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.54 ಲಕ್ಷ ಬೆಲೆ ಹೊಂದಿದ್ದು, ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಒಟ್ಟು 8 ವೆರಿಯೆಂಟ್ಗಳನ್ನು ಪಡೆದುಕೊಂಡಿದೆ.
ಪೆಟ್ರೋಲ್ ಮಾದರಿಯಲ್ಲಿ ಮೂರು ವೆರಿಯೆಂಟ್, ಪೆಟ್ರೋಲ್ ಹೈಬ್ರಿಡ್ ಮಾದರಿಯಲ್ಲಿ ಒಂದು ವೆರಿಯೆಂಟ್ ಮತ್ತು ಡೀಸೆಲ್ ವೆರಿಯೆಂಟ್ನಲ್ಲಿ ನಾಲ್ಕು ವೆರಿಯೆಂಟ್ಗಳನ್ನು ಪಡೆದುಕೊಂಡಿದ್ದು, ಸಾಮಾನ್ಯ ಹೆಕ್ಟರ್ ಕಾರಿಗೂ ಹೆಕ್ಟರ್ ಪ್ಲಸ್ ಕಾರು ರೂ.65 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.
ಹೆಕ್ಟರ್ ಪ್ಲಸ್ ಕಾರನ್ನು ಅಗಸ್ಟ್ 13ರ ವರೆಗೆ ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ಎಂಜಿ ಕಂಪನಿಯು ಅಗಸ್ಟ್ 14ರ ನಂತರ ಕಾರಿನ ಬೆಲೆಯನ್ನು ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ ರೂ.50 ಸಾವಿರ ಬೆಲೆ ಏರಿಕೆ ಮಾಡುವುದಾಗಿ ಹೇಳಿಕೊಂಡಿದ್ದು, ಮೊದಲ ಒಂದು ತಿಂಗಳು ಕಾರು ಖರೀದಿಸುವ ಗ್ರಾಹಕರಿಗೆ ಹೊಸ ಆಫರ್ ನೀಡಿದೆ.
ಇನ್ನು ಹೊಚ್ಚ ಹೊಸ ಹೆಕ್ಟರ್ ಪ್ಲಸ್ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ಹೊಸ ಕಾರು ಸಾಮಾನ್ಯ ಹೆಕ್ಟರ್ ಉತ್ಪಾದನಾ ಪ್ಲ್ಯಾಟ್ಫಾರ್ಮ್ ಅಡಿಯಲ್ಲೇ ಸಿದ್ದಗೊಂಡಿದ್ದು, 2+2+2 ಆಸನ ವಿನ್ಯಾಸವನ್ನು ಪಡೆದುಕೊಂಡಿದೆ.
ಹೊಸ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ಗಳನ್ನು ಪಡೆದುಕೊಂಡಿದೆ.
ಹೊಸ ಕಾರಿನಲ್ಲಿ ಎಲ್ಇಡಿ ಹೆಡ್ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್, ಟೈಲ್ಗೆಟ್ ತೆರೆಯಲು ಲೆಗ್ ಸ್ಪೈಫ್, ಪನೊರಮಿಕ್ ಸನ್ರೂಫ್ ಸೌಲಭ್ಯವಿದೆ.
ಜೊತೆಗೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, 10.4-ಇಂಚಿನ ವರ್ಟಿಕಲ್ ಇನ್ಪೋಟೈನ್ಮೆಂಟ್ ಸಿಸ್ಟಂನೊಂದಿಗೆ ಸ್ಮಾರ್ಟ್ ಫೋನ್ ಕೆನೆಕ್ವಿಟಿ, ವೈ-ಫೈ ಸೌಲಭ್ಯ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.
ಎಂಜಿನ್ ಸಾಮಾರ್ಥ್ಯ
ಸಾಮಾನ್ಯ ಮಾದರಿಯ 5 ಆಸನವುಳ್ಳ ಹೆಕ್ಟರ್ ಕಾರಿನಲ್ಲಿ ನೀಡಲಾಗಿರುವ ಎಂಜಿನ್ ಮಾದರಿಯೇ ಇದೀಗ ಹೊಸ ಹೆಕ್ಟರ್ ಪ್ಲಸ್ನಲ್ಲೂ ನೀಡಲಾಗಿದ್ದು, 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಜೋಡಣೆ ಮಾಡಲಾಗಿದೆ.
2.0-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ 170-ಬಿಎಚ್ಪಿ ಉತ್ಪಾದನೆ ಮಾಡಲಿದ್ದರೆ 1.5-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ 143-ಬಿಎಚ್ಪಿ ಮತ್ತು ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ 48ವೋಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಉತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದೆ.