ಎಂಜಿ ಹೆಕ್ಟರ್ ಪ್ಲಸ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿ ಸೋರಿಕೆ

ಎಂಜಿ ಮೋಟಾರ್ ಕಂಪನಿಯು ಇದೇ ತಿಂಗಳು 13ರಂದು ತನ್ನ ಬಹುನೀರಿಕ್ಷಿತ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಅಧಿಕೃತ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಹೆಕ್ಟರ್ ಪ್ಲಸ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿ ಸೋರಿಕೆ

ಹೆಕ್ಟರ್ ಪ್ಲಸ್ ಕಾರು ಖರೀದಿಗಾಗಿ ಈಗಾಗಲೇ ರೂ.50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರಿನ ಮೂಲಕ ಎಂಪಿವಿ ಆವೃತ್ತಿಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ. ಹೊಸ ಕಾರಿನಲ್ಲಿ ಕ್ಯಾಪ್ಟನ್ ಸೀಟ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಅಥವಾ 7 ಸೀಟರ್ ಆಸನ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹೆಕ್ಟರ್ ಪ್ಲಸ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿ ಸೋರಿಕೆ

ಮಧ್ಯಮ ಕ್ರಮಾಂಕದ 7 ಸೀಟರ್ ಎಸ್‌ಯುವಿ ಕಾರುಗಳ ಜೊತೆಗೆ ಎಂಪಿವಿ ಕಾರುಗಳಿಗೆ ಪೈಪೋಟಿ ನೀಡಲಿರುವ ಹೆಕ್ಟರ್ ಪ್ಲಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.16 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19 ಲಕ್ಷ ಬೆಲೆ ಹೊಂದಿದೆ ಎನ್ನಲಾಗಿದೆ.

ಹೆಕ್ಟರ್ ಪ್ಲಸ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿ ಸೋರಿಕೆ

ಆದರೆ ಅಧಿಕೃತ ಬೆಲೆ ಮಾಹಿತಿಯು ಜುಲೈ 13ರಂದು ಘೋಷಣೆಯಾಗಲಿದ್ದು, 5 ಸೀಟರ್ ಹೆಕ್ಟರ್ ಕಾರಿನ ಉತ್ಪಾದನಾ ಪ್ಲಾಟ್‌ಫಾರ್ಮ್ ಅಡಿಯಲ್ಲೇ ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವ ಎಂಜಿ ಕಂಪನಿಯು ಹೆಕ್ಟರ್ ಪ್ಲಸ್ ಮೂಲಕ 7 ಸೀಟರ್ ಎಸ್‌ಯುವಿ ಖರೀದಿದಾರರನ್ನು ಸೆಳೆಯಲು ಮುಂದಾಗಿದೆ.

ಹೆಕ್ಟರ್ ಪ್ಲಸ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿ ಸೋರಿಕೆ

ಹೊಸ ಕಾರಿನ ಮಧ್ಯದ ಸಾಲಿನ ಕ್ಯಾಪ್ಟನ್ ಸೀಟ್ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದು, ಹೊಸ ಕಾರಿನ ಸೀಟುಗಳು ಐಷಾರಾಮಿ ಕಾರಿನ ಮಾದಿರ ವಿನ್ಯಾಸ ಪಡೆದುಕೊಂಡಿವೆ. ಹಾಗೆಯೇ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್ ರೆಸ್ಟ್‌ನೊಂದಿಗೆ ಸೆಂಟರ್ ಆರ್ಮ್ ರೆಸ್ಟ್ ಕೂಡಾ ಲಭ್ಯವಿರವಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹೆಕ್ಟರ್ ಪ್ಲಸ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿ ಸೋರಿಕೆ

6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+2+3 ಆಸನ ಮಾದರಿ ಹೊಂದಿರಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಹೆಕ್ಟರ್ ಕಾರಿನಲ್ಲಿ ನೀಡಲಾಗಿರುವ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೆಕ್ಟರ್ ಪ್ಲಸ್‌ನಲ್ಲೂ ಜೋಡಿಸಲಾಗಿದೆ.

ಹೆಕ್ಟರ್ ಪ್ಲಸ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿ ಸೋರಿಕೆ

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಸೌಲಭ್ಯಗಳಿದ್ದು, ಹೊಸ ಮಾದರಿಯ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್, ಟೈಲ್‌ಗೆಟ್ ತೆರೆಯಲು ಲೆಗ್ ಸ್ಪೈಫ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯಗಳಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೆಕ್ಟರ್ ಪ್ಲಸ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಬೆಲೆ ಮಾಹಿತಿ ಸೋರಿಕೆ

ಸದ್ಯ ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.44 ಲಕ್ಷ ಬೆಲೆ ಹೊಂದಿದ್ದು, ಹೆಕ್ಟರ್ ಕಾರು ಇದೀಗ ಸಾಮಾನ್ಯ ಕಾರು ಮಾದರಿಗಿಂತ ರೂ.2.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
MG Hector Plus Prices Leak Ahead Of Launch. Read in Kannada.
Story first published: Thursday, July 9, 2020, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X