ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಕರೋನಾ ಅಬ್ಬರದ ನಡುವೆಯೂ ದೇಶದ ಆಟೋ ಉದ್ಯಮವು ತೀವ್ರವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಕಾರು ಮಾದರಿಗಳು ಇದೀಗ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಹ್ಯಾಚ್‌ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಉಳಿದ ಕಾರು ಮಾದರಿಗಳಿಂತ ಹೆಚ್ಚು ಬೇಡಿಕೆಯಲ್ಲಿದ್ದು, ತದನಂತರ ಎಸ್‌ಯುವಿ ಮತ್ತು ಎಂಪಿವಿ ಕಾರುಗಳು ಹೆಚ್ಚಿನ ಮಟ್ಟದ ಬೇಡಿಕೆಯಲ್ಲಿರುವ ಕಾರು ಮಾದರಿಗಳಾಗಿವೆ. ಉಳಿದ ಕಾರು ಮಾದರಿಗಳಿಂತ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಮಾದರಿಗಳಲ್ಲಿನ ಪ್ರತಿಸ್ಪರ್ಧಿ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಎಂಪಿವಿ ಕಾರು ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಎಂಪಿವಿ ಕಾರು ಮಾದರಿಯ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಎರ್ಟಿಗಾ ಕಾರು ಅಧಿಕ ಬೇಡಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ದುಬಾರಿ ಬೆಲೆ ನಡುವೆಯೂ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಎರ್ಟಿಗಾ ಮಾದರಿಯಷ್ಟೇ ಬೇಡಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಆದರೆ ಎರ್ಟಿಗಾ ಕಾರಿಗಿಂತಲೂ ದುಪ್ಪಟ್ಟು ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವೆ ಬೆಲೆ ಅಂತರ ಸಾಕಷ್ಟಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಈ ಎರಡು ಕಾರುಗಳ ನಡುವಿನ ಸ್ಥಾನದಲ್ಲಿರುವ ಮಹೀಂದ್ರಾ ಮರಾಜೋ ಕಾರು ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸುವಲ್ಲಿ ವಿಫಲವಾಗುತ್ತಿದ್ದು, ಇನೋವಾ ಮತ್ತು ಎರ್ಟಿಗಾ ನಡುವಿನ ಸ್ಥಾನವನ್ನು ತುಂಬಲು ಕಿಯಾ ಮೋಟಾರ್ಸ್ ಮತ್ತು ಎಂಜಿ ಮೋಟಾರ್ ಕಂಪನಿಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪೂರಕವಾಗಿ ಈಗಾಗಲೇ ಎರಡು ಕಂಪನಿಗಳು ಕೂಡಾ ವಿವಿಧ ಎರಡು ಕಂಪ್ಯಾಕ್ಟ್ ಎಂಪಿವಿ ಮಾದರಿಗಳನ್ನು ಪ್ರದರ್ಶನ ಮಾಡಿದ್ದು, ಹೊಸ ಕಾರುಗಳು ಶೀಘ್ರದಲ್ಲೇ ರಸ್ತೆಗಿಳಿಯಲಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್, ಕಾರ್ನಿವಾಲ್ ನಂತರ ಸೊನೆಟ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಭಾರತದಲ್ಲಿ ನಾಲ್ಕನೇ ಕಾರು ಮಾದರಿಯಾಗಿ ಮಧ್ಯಮ ಗಾತ್ರದ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಎಂಪಿವಿ ವಿಭಾಗದಲ್ಲಿ ಈಗಾಗಲೇ ಕಾರ್ನಿವಾಲ್ ಕಾರು ಬಿಡುಗಡೆ ಮಾಡಿದ್ದರೂ ಈ ಕಾರು ರೂ. 25 ಲಕ್ಷದಿಂದ ರೂ.34 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿರುವುದು ಇನೋವಾ ಕ್ರಿಸ್ಟಾ ಹೈ ಎಂಡ್ ಖರೀದಿದಾರರನ್ನು ಮಾತ್ರವೇ ಸೆಳೆಯಬಲ್ಲದು.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಆದರೆ ಎರ್ಟಿಗಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿರುವ ಎಂಪಿವಿ ಮಾದರಿಯನ್ನು ರೂ.12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡುವ ನೀರಿಕ್ಷೆಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಹಾಗೆಯೇ ಎಂಜಿ ಮೋಟಾರ್ ಕೂಡಾ ಭಾರತದಲ್ಲಿ ಈಗಾಗಲೇ ಹೆಕ್ಟರ್, ಜೆಡ್ಎಸ್ ಎಲೆಕ್ಟ್ರಿಕ್, ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಮೂಲಕ ಐದನೇ ಕಾರು ಮಾದರಿಯ ಬಿಡುಗಡೆಗೆ ಸಿದ್ದವಾಗಿದ್ದು, 2021ರ ಆರಂಭದಲ್ಲಿ ಹೊಸ ಎಂಪಿವಿ ಕಾರನ್ನು ಬಿಡುಗಡೆ ಮಾಡುವ ನೀರಿಕ್ಷೆಯಲ್ಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಎಂಜಿ ಹೊಸ ಎಂಪಿವಿ ಕೂಡಾ ಹೆಕ್ಟರ್ ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ವೀಲ್ಹ್‌ಬೆಸ್‌ನೊಂದಿಗೆ ಅತ್ಯುತ್ತಮ 7 ಸೀಟರ್ ಮತ್ತು 8 ಸೀಟರ್ ಮಾದರಿಯೊಂದಿಗೆ ಬಿಡುಗಡೆಯಾಗಲಿದ್ದು, ಇದು ಕಾರು ಕೂಡಾ ಹೆಕ್ಟರ್ ಮಾದರಿಯಲ್ಲಿರುವ ಎಂಜಿನ್ ಆಯ್ಕೆಯೊಂದಿಗೆ ರೂ.12 ಲಕ್ಷ 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕಿಯಾ ಮತ್ತು ಎಂಜಿ ನಿರ್ಮಾಣದ ಹೊಸ ಎಂಪಿವಿ ಕಾರುಗಳು

ಕಿಯಾ ಮತ್ತು ಎಂಜಿ ಕಾರುಗಳು ಪ್ರಮುಖವಾಗಿ ಟೊಯೊಟಾ ಇನೋವಾ ಮಾದರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದ್ದು, ಇನೋವಾ ಕ್ರಿಸ್ಟಾ ಕಾರು ಸದ್ಯ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 15.67 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.24.68 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
MG Motor And KIA Motors To Enter Compact MPV Segment In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X