ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಮುಂದಿನ ತಿಂಗಳು ಫೆಬ್ರುವರಿ 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಈ ಬಾರಿ ಹಲವಾರು ಹೊಸ ಕಾರು ಉತ್ಪಾದನಾ ಸಂಸ್ಥೆಗಳು ಭಾಗಿಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗುತ್ತಿರುವ ಎಂಜಿ ಮೋಟಾರ್ ಸಹ ವಿವಿಧ ಮಾದರಿಯ 14 ಹೊಸ ಕಾರು ಮಾದರಿಯನ್ನು ಪ್ರದರ್ಶನಗೊಳಿಸುತ್ತಿರುವುದಾಗಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಭವಿಷ್ಯ ವಾಹನ ಮಾದರಿಗಳನ್ನು ಪ್ರದರ್ಶನಗೊಳಿಸಲು ಮುಖ್ಯ ವೇದಿಕೆಯಾಗಿದ್ದು, ಎಂಜಿ ಮೋಟಾರ್ ಸಹ ಈ ಬಾರಿ 14 ವಿವಿಧ ಮಾದರಿಯ ಕಾರು ಮಾದರಿಗಳೊಂದಿಗೆ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸುವ ನೀರಿಕ್ಷೆಯಲ್ಲಿದೆ. ಪ್ರದರ್ಶನಗೊಳ್ಳುವ ಹೊಸ ಕಾರುಗಳಲ್ಲಿ ಎಲೆಕ್ಟ್ರಿಕ್ ಮತ್ತು ಅಟೋನಮಸ್ ಕಾರುಗಳ ಹೆಚ್ಚು ಭಾಗಿಯಾಗಲಿವೆ ಎನ್ನಲಾಗಿದೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಜೊತೆಗೆ ಪ್ರದರ್ಶನವಾಗುವ ಕಾರುಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ, ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಂಪಿವಿ ಕಾರುಗಳು ಸಹ ಸೇರಿದ್ದು, ಹೊಸ ಕಾರುಗಳು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಇಂಟರ್‌ನೆಟ್ ಕನೆಕ್ಟ್ ಸೌಲಭ್ಯವನ್ನು ಹೊಂದಿರಲಿವೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಇದಲ್ಲದೇ ಪ್ರದರ್ಶನವಾಗುವ ಕಾರುಗಳಲ್ಲಿ ಎಂಜಿ ಸಂಸ್ಥೆಯ ಪ್ರತಿಷ್ಠತ ಸ್ಮಾರ್ಟ್ ಪ್ರೋಟೆಕ್ವಿವ್ ವೆಹಿಕಲ್ ಕೂಡಾ ಗಮನಸೆಳೆಯಲಿದ್ದು, ಅಟೋನಮಸ್ ತಂತ್ರಜ್ಞಾನ ಹೊಂದಿರುವ ಎಸ್‌ವಿವಿ ವಾಹನವು ಗರಿಷ್ಠ ಪ್ರಮಾಣದ ಸುರಕ್ಷಾ ಸೌಲಭ್ಯಗಳೊಂದಿಗೆ ಸಂವಹನ ಮಾಡುಬಹುದಾದ ವ್ಯವಸ್ಥೆ ಹೊಂದಿದೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಹೀಗಾಗಿ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುವ ಎಂಜಿ ಕಾರುಗಳು ಗ್ರಾಹಕರನ್ನು ಸೆಳೆಯಲಿದ್ದು, ಮಾತೃಸಂಸ್ಥೆಯಾದ ಸೈಕ್ ಸಂಸ್ಥೆಯು ಎಂಜಿ ಹೊಸ ಕಾರುಗಳ ಅಭಿವೃದ್ದಿಗೆ ಸಹಕರಿಸಲಿದೆ. ಈ ಕುರಿತಂತೆ ಮಾತನಾಡಿರುವ ಎಂಜಿ ಇಂಡಿಯಾ ಸಂಸ್ಥೆಯ ಎಂಡಿ ರಾಜೀವ್ ಛಬ್ಬಾ ಅವರು ಭಾರತೀಯ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಯಲ್ಲಿ ಹೊಸ ಉತ್ಪನ್ನಗಳು ಪ್ರಮುಖ ಪಾತ್ರವಹಿಸಲಿದ್ದು, ಪ್ರದರ್ಶನಗೊಳ್ಳಲಿರುವ ಕಾರುಗಳಲ್ಲಿ ಹಲವು ಕಾರು ಮಾದರಿಗಳು ಮುಂದಿನ 2 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿವೆ ಎಂದಿದ್ದಾರೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಇನ್ನು ಭಾರತದಲ್ಲಿ ಕಾರು ಮಾರಾಟವನ್ನು ಆರಂಭಿಸುವ ಮೂಲಕ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿರುವ ಎಂಜಿ ಸಂಸ್ಥೆಯು ಗ್ರಾಹಕರ ಬೇಡಿಕೆಯನ್ನು ನಿಗದಿತ ಅವಧಿಯೊಳಗೆ ಪೂರೈಸಲು 2ನೇ ಕಾರು ಉತ್ಪಾದನಾ ಘಟಕ ಸ್ಥಾಪನೆ ಯೋಜನೆ ರೂಪಿಸಿದೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಸದ್ಯ ಗುಜರಾತ್‌ನಲ್ಲಿ ಒಂದು ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಎಂಜಿ ಸಂಸ್ಥೆಯು ಹೆಕ್ಟರ್ ಎಸ್‌ಯುವಿ ಕಾರನ್ನು ಮಾತ್ರವೇ ಉತ್ಪಾದನೆ ಮಾಡುತ್ತಿದ್ದು, ಬೇಡಿಕೆ ಹೆಚ್ಚಿದ್ದರೂ ಸಹ ಉತ್ಪಾದನಾ ಸಾಮರ್ಥ್ಯ ಕಡಿಮೆ ಇರುವ ಹಿನ್ನಲೆಯಲ್ಲಿ ಗ್ರಾಹಕರ ಕಾಯುವಿಕೆ ಅವಧಿಯು ಹೆಚ್ಚುತ್ತಿದೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಇದರಿಂದಾಗಿ ಗ್ರಾಹಕರು ಪ್ರತಿಸ್ಪರ್ಧಿ ಕಾರುಗಳ ಖರೀದಿಯತ್ತ ಮುಖಮಾಡುವ ಸಾಧ್ಯತೆಗಳಿದ್ದು, ನಿಗದಿತ ಅವಧಿಯೊಳಗೆ ಬೇಡಿಕೆ ಪೂರೈಸಲು 2ನೇ ಕಾರು ಉತ್ಪಾದನಾ ಘಟಕ ನಿರ್ಮಾಣ ಅನಿವಾರ್ಯವಾಗಿದೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಈ ಕುರಿತಂತೆ ಸೈಕ್ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆಸಿರುವ ಎಂಜಿ ಮೋಟಾರ್ ಸಂಸ್ಥೆಯು ಸದ್ಯದಲ್ಲೇ ಹೊಸ ಉತ್ಪಾದನಾ ಘಟಕಕ್ಕೆ ಚಾಲನೆ ನೀಡುವ ಸಂಬಂಧ ಬೃಹತ್ ಯೋಜನೆ ರೂಪಿಸಿದ್ದು, ಹೊಸ ಘಟಕದಲ್ಲಿ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸಾಮಾನ್ಯ ಕಾರುಗಳ ಉತ್ಪಾದನೆಗೂ ಸಹಕಾರಿಯಾಗುವಂತೆ ಅಭಿವೃದ್ದಿಗೊಳಿಸಲಿದೆಯೆಂತೆ.

ಆಟೋ ಎಕ್ಸ್‌ಪೋ 2020: ವಿವಿಧ ಮಾದರಿಯ 14 ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಎಂಜಿ ಮೋಟಾರ್

ಇದಕ್ಕಾಗಿ ಬರೋಬ್ಬರಿ ರೂ. 5 ಸಾವಿರ ಕೋಟಿ ಹೂಡಿಕೆಗೆ ಒಪ್ಪಿಗೆ ಸೂಚಿರುವ ಸೈಕ್ ಸಂಸ್ಥೆಯು ಎಂಜಿ ಹೆಸರಿನಲ್ಲಿ ಚೀನಿ ಮಾರುಕಟ್ಟೆಯಲ್ಲಿರುವ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಹೊಸ ಕಾರು ಉತ್ಪಾದನಾ ಘಟಕವು 2021ಕ್ಕೆ ತಲೆಎತ್ತಲಿದೆ.

Most Read Articles

Kannada
English summary
MG Motor has revealed that the company will showcase 14 new car models at Auto Expo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X