ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಎಂಜಿ ಮೋಟಾರ್ ಭಾರೀ ಪ್ರಮಾಣದ ದೇಣಿಗೆ ನೀಡಿರುವುದಲ್ಲದೆ ವೈದ್ಯಕೀಯ ಸೇವೆಗಳನ್ನು ಸಹ ಪೂರೈಕೆ ಮಾಡುತ್ತಿದ್ದು, ಇದೀಗ ಕರೋನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವ ಪೊಲೀಸರಿಗೆ ಹೆಚ್ಚಿನ ಮಟ್ಟದ ಸುರಕ್ಷತೆ ಒದಗಿಸುತ್ತಿದೆ.

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ವಿವಿಧ ರಾಜ್ಯಗಳ ಸುಮಾರು ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿರುವ ಎಂಜಿ ಕಂಪನಿಯು ವೈರಸ್ ಭೀತಿಯಿಂದ ಮುಕ್ತಿ ನೀಡುತ್ತಿದ್ದು, ಇನ್ನುಳಿದ ಕರೋನಾ ವಾರಿಯರ್ಸ್ ವಾಹನಗಳಿಗೂ ಸ್ಯಾನಿಟೈಜ್ ಸೇವೆಗಳನ್ನು ನೀಡಲು ಮುಂದಾಗಿದೆ. ಸೋಂಕು ಪೀಡಿತ ಪ್ರದೇಶಗಳಲ್ಲಿ ಜೀವಪಣಕ್ಕಿಟ್ಟು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕರೋನಾ ವಾರಿಯರ್ಸ್‌ಗಳಿಗೆ ಹೆಚ್ಚಿನ ಮಟ್ಟದ ಮುಂಜಾಗ್ರತೆ ಕ್ರಮಗಳು ಅವಶ್ಯವಿದ್ದು, ವೈರಸ್‌‌ ಭೀತಿಯಿಂದ ತಪ್ಪಿಸಿಕೊಳ್ಳಲು ನಿಯಮಿತವಾದ ಸ್ಯಾನಿಟೈಜ್ ಸೇವೆಯು ಅವಶ್ಯಕವಾಗಿದೆ.

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ಇನ್ನು ಕರೋನಾ ವೈರಸ್ ವಿರುದ್ದ ಹೋರಾಟದಲ್ಲಿ ಸರ್ಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ಎಂಜಿ ಮೋಟಾರ್ ಕಂಪನಿಯು ಹಣಕಾಸು ಸಹಾಯದೊಂದಿಗೆ ವೈದ್ಯಕೀಯ ಸೌಲಭ್ಯಗಳನ್ನು ಪೂರೈಕೆ ಮಾಡುತ್ತಿದ್ದು, ಎರಡು ದಿನಗಳ ಹಿಂದಷ್ಟೇ ಕಾರ್ ಆ್ಯಂಬುಲೆನ್ಸ್ ಒಂದನ್ನು ಸರ್ಕಾರಿ ಆಸ್ಪತ್ರೆಗೆ ದೇಣಿಗೆ ನೀಡಿತ್ತು.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ಗುಜರಾತ್‌ನಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಎಂಜಿ ಮೋಟಾರ್ ಕಂಪನಿಯು ಕೇಂದ್ರ ಸರ್ಕಾರಕ್ಕೆ ರೂ.2 ಕೋಟಿ ದೇಣಿಗೆ ನೀಡಿದ್ದು, ಇದರ ಜೊತೆಗೆ ವೈದ್ಯಕೀಯ ಉಪಕರಣಗಳಾದ ವೆಂಟಿಲೆಟರ್, ಫೇಸ್ ಶೀಲ್ಡ್ ಮತ್ತು ಪಿಪಿಇ ಕಿಟ್ ಉತ್ಪನ್ನಗಳನ್ನು ಸಹಭಾಗಿತ್ವದ ಕಂಪನಿಗಳ ಜೊತೆಗೆ ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿದೆ.

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ಇದೀಗ ಕರೋನಾ ಸೋಂಕಿತರ ಸೇವೆಗಾಗಿ ವಿಶೇಷ ಸೌಲಭ್ಯವುಳ್ಳ ಕಾರ್ ಆ್ಯಂಬುಲೆನ್ಸ್ ಒಂದನ್ನು ಗುಜರಾತ್ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಕಾರಿನ ಒಳಭಾಗವನ್ನು ವೈದ್ಯಕೀಯ ಸೇವೆಗೆ ಅನುಗುಣವಾಗಿ ಮಾಡಿಫೈಗೊಳಿಸಲಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ಹೆಕ್ಟರ್ ಕಾರಿನಲ್ಲೇ ಕಾರ್ ಆ್ಯಂಬಲೆನ್ಸ್ ಸಿದ್ದಪಡಿಸಿರುವ ಎಂಜಿ ಮೋಟಾರ್ ಕಂಪನಿಯು ವೈರಸ್ ವಿರುದ್ಧ ಹೋರಾಡುತ್ತಿರುವ ಕರೋನಾ ವಾರಿಯರ್ಸ್‌ ಸಾರಿಗೆ ಸೌಲಭ್ಯಕ್ಕಾಗಿ 100 ಹೆಕ್ಟರ್ ಕಾರುಗಳ ಮೂಲಕ ಉಚಿತ ಸೇವೆ ನೀಡುತ್ತಿದೆ.

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ಇನ್ನು ಚೀನಾದಿಂದ ಶುರುವಾದ ಮಾಹಾಮಾರಿ ಕರೋನಾ ವೈರಸ್ ಇದೀಗ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪ್ತಿಸಿದ್ದಲ್ಲದೇ ದಿನಂಪ್ರತಿ ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಆದರೆ ವೈರಸ್ ವಿರುದ್ಧದ ಹೋರಾಟಕ್ಕಾಗಿ ವೈದ್ಯಕೀಯ ಉಪಕರಣಗಳ ಕೊರತೆ ಎದುರಾಗಿದ್ದು, ಆಟೋ ಉತ್ಪಾದನಾ ಕಂಪನಿಗಳು ಸರ್ಕಾರದ ಕರೆಗೆ ಸ್ಪಂದಿಸಿ ಕೈಜೋಡಿಸಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಎಂಜಿ ಮೋಟಾರ್ ಕೂಡಾ ರೂ.2 ಕೋಟಿ ದೇಣಿಯ ಜೊತೆಗೆ ಅಗ್ಗದ ದರದಲ್ಲಿ ಅತ್ಯುತ್ತಮ ವೆಂಟಿಲೆಟರ್‌ಗಳ ಉತ್ಪಾದನೆ ಮಾಡುತ್ತಿದೆ.

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ವೈದ್ಯಕೀಯ ಉಪಕರಣಗಳ ಸಂಸ್ಥೆಯಾಗಿರುವ ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿರುವ ಎಂಜಿ ಮೋಟಾರ್ ಕಂಪನಿಯು ಪ್ರತಿ ತಿಂಗಳು 1 ಸಾವಿರ ವೆಂಟಿಲೆಟರ್‌ಗಳ ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ವೈರಸ್ ಭೀತಿ: ಎಂಜಿ ಕಂಪನಿಯಿಂದ ನಾಲ್ಕು ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್

ವಡೋದರಾ ಮೂಲದ ಮ್ಯಾಕ್ಸ್ ವೆಂಟಿಲೆಟರ್ ಉತ್ಪಾದನಾ ಸಂಸ್ಥೆಯು ದೇಶದ ಜನಪ್ರಿಯ ವೈದ್ಯಕೀಯ ಉಪಕರಣಗಳ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಎಂಜಿ ಮೋಟಾರ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದೆ.

Most Read Articles

Kannada
English summary
MG motor announces special service drive to sanitize 4000 police vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X