ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್‌ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ ವೈರಸ್‍ದಿಂದ ಆಟೋಮೊಬೈಲ್ ಕ್ಷೇತ್ರಕ್ಕೂ ಪಾರಿಣಾಮಬೀರಿದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಕರೋನಾ ವೈರಸ್ ಪಾರಿಣಾಮದಿಂದ ಸಾವಿರಾರು ಕೋಟಿ ನಷ್ಟವಾಗಿದೆ.

ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಕಾರುಗಳ ಮಾರಾಟದ ಮೇಲೆಯು ಕರೋನಾ ವೈರಸ್ ಪಾರಿಣಾಮ ಬೀರಿದೆ. ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಎಂಜಿ ಮೋಟಾರ್ ಕಾರು ಮಾರಾಟದಲ್ಲಿಯು ಕರಿನೆರಳು ಬೀರಿದೆ. ಎಂಜಿ ಮೋಟಾರ್ ಕಂಪನಿಯು ಒಂದು ಕಾರು ಕೂಡ ಮಾರಾಟವಾಗಿಲ್ಲ. ಇದಕ್ಕೆ ಕಾರಣ ಅಂದರೆ ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿತ್ತು.

ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿ ಇದ್ದ ಕಾರಣ ಎಂಜಿ ಮೋಟಾರ್ ಕಂಪನಿಯ ಉತ್ಪಾದನೆ, ಮಾರಾಟ ಮತ್ತು ಸರ್ವಿಸ್ ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮಾರ್ಚ್ ಕೊನೆಯಲ್ಲಿ ಗುಜರಾತ್ ನಲ್ಲಿರುವ ತನ್ನ ಹ್ಯಾಲೊಲ್ ಘಟಕದಲ್ಲಿ ಉತ್ಪಾದನೆ ಪ್ರಾರಂಭಿಸಿದ್ದರು.

MOST READ: ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನಿಸ್ಸಾನ್ ಕಿಕ್ಸ್

ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಕರೋನಾ ವೈರಸ್ ವಿರುದ್ದ ಹೋರಾಟಕ್ಕಾಗಿ ಸರ್ಕಾರದ ಜೊತೆ ಕೈಜೋಡಿರುವ ಎಂಜಿ ಮೋಟಾರ್ ಕಂಪನಿಯು ಹಣಕಾಸು ಸಹಾಯದೊಂದಿಗೆ ನಿರಂತರವಾಗಿ ವೈದ್ಯಕೀಯ ಸೌಲಭ್ಯಗಳನ್ನು ಪೂರೈಕೆ ಮಾಡುತ್ತಿದೆ. ವಿಶೇಷ ಸೌಲಭ್ಯಗಳನ್ನು ಒಳಗೊಂಡ ಕಾರ್ ಆ್ಯಂಬುಲೆನ್ಸ್ ಒಂದನ್ನು ಸರ್ಕಾರಿ ಆಸ್ಪತ್ರೆಗೆ ದೇಣಿಗೆ ನೀಡಿದೆ.

ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಗುಜರಾತ್‌ನಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಎಂಜಿ ಮೋಟಾರ್ ಕಂಪನಿಯು ಕೇಂದ್ರ ಸರ್ಕಾರಕ್ಕೆ ರೂ.2 ಕೋಟಿ ದೇಣಿಗೆ ನೀಡಿದ್ದು, ಇದಲ್ಲದೆ ವೈದ್ಯಕೀಯ ಉಪಕರಣಗಳಾದ ವೆಂಟಿಲೆಟರ್, ಫೇಸ್ ಶೀಲ್ಡ್ ಮತ್ತು ಪಿಪಿಇ ಕಿಟ್ ಉತ್ಪನ್ನಗಳನ್ನು ಸಹಭಾಗಿತ್ವದ ಕಂಪನಿಗಳ ಜೊತೆಗೆ ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿದೆ.

MOST READ: ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಇದೀಗ ಕರೋನಾ ಸೋಂಕಿತರ ಸೇವೆಗಾಗಿ ವಿಶೇಷ ಸೌಲಭ್ಯವುಳ್ಳ ಕಾರ್ ಆ್ಯಂಬುಲೆನ್ಸ್ ಒಂದನ್ನು ಗುಜರಾತ್ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಕಾರಿನ ಒಳಭಾಗವನ್ನು ವೈದ್ಯಕೀಯ ಸೇವೆಗೆ ಅನುಗುಣವಾಗಿ ಮಾಡಿಫೈಗೊಳಿಸಲಾಗಿದೆ.

ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ವೈದ್ಯಕೀಯ ಉಪಕರಣಗಳ ಸಂಸ್ಥೆಯಾಗಿರುವ ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿರುವ ಎಂಜಿ ಮೋಟಾರ್ ಕಂಪನಿಯು ಪ್ರತಿ ತಿಂಗಳು 1 ಸಾವಿರ ವೆಂಟಿಲೆಟರ್ ಉತ್ಪಾದನೆ ಮಾಡುವುದಾಗಿ ಹೇಳಿದೆ.

MOST READ: ಬಹಿರಂಗವಾಯ್ತು ದಟ್ಸನ್ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಮಾಹಿತಿ

ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಕರೋನಾ ವೈರಸ್ ಭೀತಿಯಿಂದ ವಾಹನಗಳ ಮಾರಟವು ಪಾತಾಳಕ್ಕೆ ಕುಸಿದಿದೆ. ಇದೇ ಕಾರಣಕ್ಕೆ ಹಲವಾರು ಜನಪ್ರಿಯ ಕಾರುಗಳ ಬಿಡುಗಡೆಯನ್ನು ಮುಂದೂಡಲಾಗಿದೆ. ಎಂಜಿ ಮೋಟಾರ್ ಕಂಪನಿಯು ತನ್ನ ಹೊಸ ಹೆಕ್ಟರ್ ಪ್ಲಸ್ ಎಸ್‍ಯುವಿಯನ್ನು ಈ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸಬೇಕಾಗಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ ಎಂಜಿ ಹೆಕ್ಟರ್ ಬಿಡುಗಡೆಯನ್ನು ಜೂನ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ.

ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಹಲವರು ವಾಹನ ತಯಾರಕ ಕಂಪನಿಗಳಂತೆ ಎಂಜಿ ಮೋಟಾರ್ ಇಂಡಿಯಾ ಕಂಪನಿಯ ಕಾರಿನ ಒಂದು ಯುನಿಟ್ ಕೂಡ ಮಾರಾಟವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಆಟೋಮೊಬೈಲ್ ಕ್ಷೇತ್ರವು ಸಣ್ಣ ಮಟ್ಟದ ಚೇತರಿಕೆ ಕಾಣಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
MG Motor India Registers 0 Units Of Domestic Sales. Read in Kannada.
Story first published: Saturday, May 2, 2020, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X