ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಕಾರು ಮಾರಾಟವನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದ್ದು, ಮೊದಲ ಬಾರಿಗೆ ಈಶಾನ್ಯ ರಾಜ್ಯಗಳಿಗೂ ಕಾರು ಮಾರಾಟವನ್ನು ವಿಸ್ತರಿಸಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಎಂಜಿ ಮೋಟಾರ್ ಸಂಸ್ಥೆಯು ಸದ್ಯ ಹೊಸ ಕಾರು ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದೆ. ಈಗಾಗಲೇ ದೇಶದ ಪ್ರಮುಖ 58 ನಗರಗಳಲ್ಲಿ 70 ಕಾರು ಶೋರೂಂಗಳನ್ನು ಹೊಂದಿರುವ ಎಂಜಿ ಸಂಸ್ಥೆಯು ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳ ಪ್ರಮುಖ ನಗರಗಳಲ್ಲಿ ಒಂದಾಗಿರುವ ಅಸ್ಸಾಂನ ಗುವಾಹಟಿಯಲ್ಲಿ ತನ್ನ ಮೊದಲ ಕಾರು ಮಾರಾಟ ಮಳಿಗೆಗೆ ಚಾಲನೆ ನೀಡಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಮಾರುಕಟ್ಟೆಯಲ್ಲಿ ಬೇಡಿಕೆಯೆಂತೆ ಸಾಮಾನ್ಯ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೂ ಚಾಲನೆ ನೀಡಿರುವ ಎಂಜಿ ಸಂಸ್ಥೆಯು ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಎಂಜಿ ಹೆಕ್ಟರ್ ಕಾರು ಮೊದಲ ಬಾರಿಗೆ 50 ಸಾವಿರ ಬುಕ್ಕಿಂಗ್ ಪಡೆದುಕೊಂಡಿದ್ದು, ಹೊಸದಾಗಿ ಉನ್ನತೀಕರಿಸಲಾದ ಬಿಎಸ್-6 ಮಾದರಿಗೂ ಭಾರೀ ಬೇಡಿಕೆ ಹರಿದುಬಂದಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಸದ್ಯಕ್ಕೆ ಎಂಜಿ ಹೆಕ್ಟರ್ ಕಾರಿನಲ್ಲಿ ಪೆಟ್ರೋಲ್ ಮಾದರಿ ಮಾತ್ರವೇ ಬಿಎಸ್-6 ನಿಯಮಾವಳಿ ಪ್ರಕಾರ ಉನ್ನತೀಕರಣ ಹೊಂದಿದ್ದು, ಡೀಸೆಲ್ ಮಾದರಿಯು ಶೀಘ್ರದಲ್ಲೇ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಉನ್ನತೀಕರಣಗೊಳ್ಳಲಿದೆ. ಹೀಗಾಗಿ ಹೊಸ ಡೀಸೆಲ್ ಕಾರಿನ ಬಿಡುಗಡೆಗಾಗಿ ಭರ್ಜರಿ ಸಿದ್ದತೆ ನಡೆಸುತ್ತಿರುವ ಎಂಜಿ ಸಂಸ್ಥೆಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ನಿಗದಿತ ಅವಧಿಯೊಳಗೆ ಹೊಸ ಕಾರುಗಳನ್ನು ವಿತರಣೆ ಮಾಡುವ ಭರವಸೆ ನೀಡಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಇನ್ನು ಹೆಕ್ಟರ್ ಪೆಟ್ರೋಲ್ ಮಾದರಿಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.12.74 ಲಕ್ಷ ಬೆಲೆ ಹೊಂದಿದ್ದು, ಬಿಎಸ್-4 ಮಾದರಿಗಿಂತಲೂ ಬಿಎಸ್-6 ಎಂಜಿನ್ ಪ್ರೇರಿತ ಹೆಕ್ಟರ್ ಪೆಟ್ರೋಲ್ ಕಾರಿನ ಬೆಲೆಯಲ್ಲಿ ರೂ.26 ಸಾವಿರ ಹೆಚ್ಚಳವಾಗಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಹೊಸ ಕಾರಿನಲ್ಲಿ ಎಂಜಿನ್ ಹೊರತುಪಡಿಸಿ ಇನ್ನುಳಿದ ಎಲ್ಲಾ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಮಾರ್ಚ್ ಅಂತ್ಯದೊಳಗೆ ಡೀಸೆಲ್ ಮಾದರಿಯು ಕೂಡಾ ಹೊಸ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಇದಲ್ಲದೇ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿರುವ ಜೆಡ್ಎಸ್‌ ಎಲೆಕ್ಟ್ರಿಕ್ ಕಾರು ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಬಿಡುಗಡೆಗೂ ಮುನ್ನವೇ ಹೊಸ ಇವಿ ಕಾರು 2 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಮಾದರಿಯ ಬೆಸ್ ವೆರಿಯೆಂಟ್ ಮಾದರಿಯಾಗಿ ಮತ್ತು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಎಕ್ಸೈಟ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.20.58 ಲಕ್ಷ ಮತ್ತು ಎಕ್ಸ್‌ಕ್ಲೂಸಿವ್ ಆವೃತ್ತಿಯು ರೂ.23.58 ಲಕ್ಷ ನಿಗದಿ ಪಡಿಸಲಾಗಿದ್ದು, ಮೊದಲು ಬುಕ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ರೂ.1 ಲಕ್ಷ ಆಫರ್ ನೀಡಲಾಗಿದೆ.

ಹೊಸ ಕಾರುಗಳಿಗೆ ಭಾರೀ ಬೇಡಿಕೆ- ಗುವಾಹಾಟಿಯಲ್ಲಿ ಮೊದಲ ಶೋರೂಂ ತೆರೆದ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
MG Motor inaugurates new showroom in Guwahati. Read in Kannada.
Story first published: Thursday, February 27, 2020, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X