ವೈರಸ್ ಭೀತಿ: ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಎಂಜಿ ಮೋಟಾರ್ ಭಾರೀ ಪ್ರಮಾಣದ ದೇಣಿಗೆ ನೀಡಿರುವುದಲ್ಲದೆ ವೈದ್ಯಕೀಯ ಸೇವೆಗಳನ್ನು ಸಹ ಪೂರೈಕೆ ಮಾಡುತ್ತಿದೆ.

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವ ವಾರಿಯರ್ಸ್‌ಗೆ ಹೆಚ್ಚಿನ ಮಟ್ಟದ ಸುರಕ್ಷತೆ ಒದಗಿಸುತ್ತಿದ್ದು, ಎಂಜಿ ಮೋಟಾರ್ ಸಹ ಈ ನಿಟ್ಟಿನಲ್ಲಿ ಪೊಲೀಸರ ವಾಹನಗಳಿಗೆ ಸ್ಯಾನಿಟೈಜ್ ಸೇವೆ ಒದಗಿಸುತ್ತಿದೆ. ಇದುವರೆಗೆ ಸುಮಾರು 3 ಸಾವಿರ ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸಿಂಪರಣೆ ಮೂಲಕ ರೋಗ ಭೀತಿಯನ್ನು ಹೊಗಲಾಡಿಸಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಶ್ರಮಿಸುತ್ತಿರುವರಿಗೆ ರಕ್ಷಣೆಗೆ ಧಾವಿಸಿದೆ.

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ಸೋಂಕು ಪೀಡಿತ ಪ್ರದೇಶಗಳಲ್ಲಿ ಜೀವಪಣಕ್ಕಿಟ್ಟು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕರೋನಾ ವಾರಿಯರ್ಸ್‌ಗಳಿಗೆ ಹೆಚ್ಚಿನ ಮಟ್ಟದ ಮುಂಜಾಗ್ರತೆ ಕ್ರಮಗಳ ಅವಶ್ಯವಿದ್ದು, ವೈರಸ್‌‌ ಭೀತಿಯಿಂದ ತಪ್ಪಿಸಿಕೊಳ್ಳಲು ನಿಯಮಿತವಾದ ಸ್ಯಾನಿಟೈಜ್ ಸೇವೆಯು ಅವಶ್ಯಕವಾಗಿದೆ.

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ಈ ನಿಟ್ಟಿನಲ್ಲಿ ದೇಶದ ವಿವಿಧಡೆ ಕಡೆಗಳಲ್ಲಿ ಹರಡಿಕೊಂಡಿರುವ ಕಾರು ಮಾರಾಟ ಮಳಿಗೆಗಳ ಸಿಬ್ಬಂದಿ ಸಹಾಯದೊಂದಿಗೆ ಪೊಲೀಸರು ಮತ್ತು ವೈದ್ಯಕೀಯ ಸೇವೆಯ ವಾಹನಗಳಿಗೆ ಸ್ಯಾನಿಟೈಜ್ ಸೇವೆ ನೀಡುತ್ತಿರುವ ಎಂಜಿ ಮೋಟಾರ್ ಕಂಪನಿಯು ತನ್ನದೆ ಆದ ಅಳಿಲು ಸೇವೆ ಮಾಡುತ್ತಿದೆ.

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ಇನ್ನು ಕರೋನಾ ವೈರಸ್ ವಿರುದ್ದ ಹೋರಾಟದಲ್ಲಿ ಸರ್ಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ಎಂಜಿ ಮೋಟಾರ್ ಕಂಪನಿಯು ಹಣಕಾಸು ಸಹಾಯದೊಂದಿಗೆ ವೈದ್ಯಕೀಯ ಸೌಲಭ್ಯಗಳನ್ನು ಪೂರೈಕೆ ಮಾಡುತ್ತಿದ್ದು, ಕಳೆದ ತಿಂಗಳ ಹಿಂದಷ್ಟೇ ಕಾರ್ ಆ್ಯಂಬುಲೆನ್ಸ್ ಒಂದನ್ನು ಸರ್ಕಾರಿ ಆಸ್ಪತ್ರೆಗೆ ದೇಣಿಗೆ ನೀಡಿತ್ತು.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ಕರೋನಾ ಸೋಂಕಿತರ ಸೇವೆಗಾಗಿ ವಿಶೇಷ ಸೌಲಭ್ಯವುಳ್ಳ ಕಾರ್ ಆ್ಯಂಬುಲೆನ್ಸ್ ಒಂದನ್ನು ಗುಜರಾತ್ ಸರ್ಕಾರಕ್ಕೆ ಹಸ್ತಾಂತರಿಸಿದ್ದ ಎಂಜಿ ಕಂಪನಿಯು ಕಾರಿನ ಒಳಭಾಗವನ್ನು ವೈದ್ಯಕೀಯ ಸೇವೆಗೆ ಅನುಗುಣವಾಗಿ ಮಾಡಿಫೈಗೊಳಿಸಿ ಸರ್ಕಾರಕ್ಕೆ ಹಸ್ತಾಂತರಿಸಿತ್ತು.

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ತನ್ನ ಜನಪ್ರಿಯ ಕಾರು ಮಾದರಿಯಾದ ಹೆಕ್ಟರ್ ಕಾರಿನಲ್ಲೇ ಕಾರ್ ಆ್ಯಂಬಲೆನ್ಸ್ ಸಿದ್ದಪಡಿಸಿರುವ ಎಂಜಿ ಮೋಟಾರ್ ಕಂಪನಿಯು ವೈರಸ್ ವಿರುದ್ಧ ಹೋರಾಡುತ್ತಿರುವ ಕರೋನಾ ವಾರಿಯರ್ಸ್‌ ಸಾರಿಗೆ ಸೌಲಭ್ಯಕ್ಕಾಗಿ 100 ಹೆಕ್ಟರ್ ಕಾರುಗಳ ಮೂಲಕ ಉಚಿತ ಸೇವೆ ನೀಡುತ್ತಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಎಂಜಿ ಮಾತ್ರವಲ್ಲದೆ ಈಗಾಗಲೇ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಎಂಜಿ ಮೋಟಾರ್ ಕೂಡಾ ರೂ.2 ಕೋಟಿ ದೇಣಿಯ ಜೊತೆಗೆ ಅಗ್ಗದ ದರದಲ್ಲಿ ಅತ್ಯುತ್ತಮ ವೆಂಟಿಲೆಟರ್‌ಗಳ ಉತ್ಪಾದನೆ ಮಾಡುತ್ತಿದೆ.

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ವೈದ್ಯಕೀಯ ಉಪಕರಣಗಳ ಸಂಸ್ಥೆಯಾಗಿರುವ ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿರುವ ಎಂಜಿ ಮೋಟಾರ್ ಕಂಪನಿಯು ಪ್ರತಿ ತಿಂಗಳು 1 ಸಾವಿರ ವೆಂಟಿಲೆಟರ್‌ಗಳ ಉತ್ಪಾದನೆ ಮಾಡುತ್ತಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಪೊಲೀಸ್ ವಾಹನಗಳಿಗೆ ಸ್ಯಾನಿಟೈಜ್ ಸರ್ವೀಸ್ ಒದಗಿಸಿದ ಎಂಜಿ ಮೋಟಾರ್

ವಡೋದರಾ ಮೂಲದ ಮ್ಯಾಕ್ಸ್ ವೆಂಟಿಲೆಟರ್ ಉತ್ಪಾದನಾ ಸಂಸ್ಥೆಯು ದೇಶದ ಜನಪ್ರಿಯ ವೈದ್ಯಕೀಯ ಉಪಕರಣಗಳ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಎಂಜಿ ಮೋಟಾರ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದೆ.

Most Read Articles

Kannada
English summary
MG Motor India Sanitises Over 3000 Police Vehicles In 29 Days Due To Covid-19. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X