21 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಎಂಜಿ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಹೆಕ್ಟರ್ ಎಸ್‍ಯುವಿಯನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದರು. ಎಂಜಿ ಹೆಕ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೂಸ ಸಂಚಲನವನ್ನು ಮೂಡಿಸಿತ್ತು.

22 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಎಂಜಿ ಮೋಟಾರ್ ಕಂಪನಿಯು ಕಳೆದ ಮಾರ್ಚ್ ತಿಂಗಳಲ್ಲಿ ಒಟ್ಟು 1,518 ಯುನಿಟ್‌ಗಳನ್ನು ಮಾರಾಟವಾಗಿದೆ. ಇದರಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿಯ 1,402 ಯುನಿಟ್‌ಗಳನ್ನು ಒಳಗೊಂಡಿದೆ. ಎಂಜಿ ಜೆಡ್ಎಸ್ ಇವಿ ಕಾರಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಕಳೆದ ತಿಂಗಳು ಎಂಜಿ ಜೆಡ್ಎಸ್ ಇವಿ ಕಾರಿನ 116 ಯುನೆಟ್‍ಗಳು ಬುಕ್ಕಿಂಗ್ ಅನ್ನು ದಾಖಲಿಸಿದೆ. ಎಂಜಿ ಹೆಕ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ಒಟ್ಟು 21,954 ಯುನಿಟ್‌ಗಳನ್ನು ಮಾರಾಟ ಮಾಡಿದೆ.

22 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಕರೋನಾ ವೈರಸ್ ಸೋಂಕಿನಿಂದ ಎಂಜಿ ಮೋಟಾರ್ ಕಾರುಗಳ ಮಾರಾಟದ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ಎಂಜಿ ಹೆಕ್ಟರ್ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.12.37 ಲಕ್ಷಗಳಾಗಿದೆ.

22 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಎಂಜಿ ಹೆಕ್ಟರ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯಲ್ಲಿ 2.0 ಲೀಟರ್ ಟಬೋಜಾರ್ಜ್ಡ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮೂಲಕ 170 ಬಿಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

22 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಈ ಎಸ್‍‍ಯು‍ವಿನಲ್ಲಿ ಲೈವ್ ಟ್ರಾಫಿಕ್ ಅಲರ್ಟ್‍‍ಗಳು, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ(ಟಿ‍‍ಪಿಎಂಎಸ್), ಜಿಯೋ-ಫೆನ್ಸಿಂಗ್, ತುರ್ತು ಕರೆ, ಸಾಮಾನ್ಯ ಸಹಾಯಕ್ಕಾಗಿ ಸಂಪರ್ಕಿಸಲು ಒಂದು ಬಟನ್ ಮತ್ತು ಪ್ರೀಮಿಯಂ ಗಾನಾ ಆ್ಯಪ್‍ನ ವೈವಿಧ್ಯಮಯ ಮ್ಯೂಸಿಕ್ ಸಂಗ್ರಹ, ಆನ್-ಬೋರ್ಡ್ ನ್ಯಾವಿಗೇಷನ್ ಅನ್ನು ಹೊಂದಿದೆ.

22 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಸ್ಮಾರ್ಟ್‍‍ಪೋನ್ ಅಪ್ಲಿಕೇಶನ್ ಮತ್ತು ವಾಯ್ಸ್ ಕಾಮೆಂಡ್‍‍ಗಳ ಮೂಲಕ ಎಸ್‍‍ಯು‍ವಿ ವಿವಿಧ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು. ಇದರಲ್ಲಿ ಎಸಿ, ಸನ್‍‍ರೂಫ್‍, ಟೈಲ್‍‍ಗೇಟ್ ಮತ್ತು ಡೋರ್‍‍ಗಳು ಸೇರಿವೆ.

22 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಇದರಲ್ಲಿ ಬ್ಲ್ಯಾಕ್ ಕಲರ್ ಥೀಮ್ ಹೊಂದಿರುವ ಇಂಟರಿಯರ್‍‍ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಫೋಟೇನ್‌ಮೆಂಟ್ ಕಂಟ್ರೋಲ್, ಆಟೋ ಎಸಿ, ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಆಟೋಮ್ಯಾಟಿಕ್ ಹೆಡ್‍‍‍ಲ್ಯಾಂಪ್, 10.4 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಡಿಸ್‍‍ಪ್ಲೇ ಸೌಲಭ್ಯವಿದೆ.

22 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು, ಏರ್‍‍ಬ್ಯಾಗುಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸೌಲಭ್ಯವನ್ನು ಒದಗಿಸಲಾಗಿದೆ.

22 ಸಾವಿರ ಗಡಿ ದಾಟಿದ ಎಂಜಿ ಹೆಕ್ಟರ್ ಮಾರಾಟ

ಎಂಜಿ ಹೆಕ್ಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಜೀಪ್ ಕಂಪಾಸ್, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಟಾಟಾ ಹ್ಯಾರಿಯರ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
MG Sold Nearly 22,000 Cars In Its Debut Year In India. Read in Kannada.
Story first published: Wednesday, April 1, 2020, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X