ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಬ್ರಿಟಿಷ್ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಎಂಜಿ ಮೋಟಾರ್ ಸಂಸ್ಥೆಯು ಚೀನಾದ ಸೈಕ್ ಸಂಸ್ಥೆಯೊಂದಿಗೆ ಜೊತೆಗಡಿ ಭಾರತದಲ್ಲಿ ಕಾರು ಮಾರಾಟವನ್ನು ಆರಂಭಿಸುವ ಮೂಲಕ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯನ್ನು ನಿಗದಿತ ಅವಧಿಯೊಳಗೆ ಪೂರೈಸಲು 2ನೇ ಕಾರು ಉತ್ಪಾದನಾ ಘಟಕ ಸ್ಥಾಪನೆ ಯೋಜನೆ ರೂಪಿಸಿದೆ.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಹೌದು, ಸದ್ಯ ಗುಜರಾತ್‌ನಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಎಂಜಿ ಸಂಸ್ಥೆಯು ಹೆಕ್ಟರ್ ಎಸ್‌ಯುವಿ ಕಾರನ್ನು ಮಾತ್ರವೇ ಉತ್ಪಾದನೆ ಮಾಡುತ್ತಿದ್ದು, ಬೇಡಿಕೆ ಹೆಚ್ಚಿದ್ದರೂ ಸಹ ಉತ್ಪಾದನಾ ಸಾಮರ್ಥ್ಯ ಕಡಿಮೆ ಇರುವ ಹಿನ್ನಲೆಯಲ್ಲಿ ಗ್ರಾಹಕರ ಕಾಯುವಿಕೆ ಅವಧಿಯು ಹೆಚ್ಚುತ್ತಿದೆ. ಇದರಿಂದಾಗಿ ಗ್ರಾಹಕರು ಪ್ರತಿಸ್ಪರ್ಧಿ ಕಾರುಗಳ ಖರೀದಿಯತ್ತ ಮುಖಮಾಡುವ ಸಾಧ್ಯತೆಗಳಿದ್ದು, ನಿಗದಿತ ಅವಧಿಯೊಳಗೆ ಬೇಡಿಕೆ ಪೂರೈಸಲು 2ನೇ ಕಾರು ಉತ್ಪಾದನಾ ಘಟಕ ನಿರ್ಮಾಣ ಅನಿವಾರ್ಯವಾಗಿದೆ.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಈ ಕುರಿತಂತೆ ಸೈಕ್ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆಸಿರುವ ಎಂಜಿ ಮೋಟಾರ್ ಸಂಸ್ಥೆಯು ಸದ್ಯದಲ್ಲೇ ಹೊಸ ಉತ್ಪಾದನಾ ಘಟಕಕ್ಕೆ ಚಾಲನೆ ನೀಡುವ ಸಂಬಂಧ ಬೃಹತ್ ಯೋಜನೆ ರೂಪಿಸಿದ್ದು, ಹೊಸ ಘಟಕದಲ್ಲಿ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸಾಮಾನ್ಯ ಕಾರುಗಳ ಉತ್ಪಾದನೆಗೂ ಸಹಕಾರಿಯಾಗುವಂತೆ ಅಭಿವೃದ್ದಿಗೊಳಿಸಲಿದೆಯೆಂತೆ.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಇದಕ್ಕಾಗಿ ಬರೋಬ್ಬರಿ ರೂ. 5 ಸಾವಿರ ಕೋಟಿ ಹೂಡಿಕೆಗೆ ಒಪ್ಪಿಗೆ ಸೂಚಿರುವ ಸೈಕ್ ಸಂಸ್ಥೆಯು ಎಂಜಿ ಹೆಸರಿನಲ್ಲಿ ಚೀನಿ ಮಾರುಕಟ್ಟೆಯಲ್ಲಿರುವ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಹೊಸ ಕಾರು ಉತ್ಪಾದನಾ ಘಟಕವು 2021ಕ್ಕೆ ತಲೆಎತ್ತಲಿದೆ.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಇನ್ನು ಎಂಜಿ ಮೋಟಾರ್ ಸಂಸ್ಥೆಯು ಸದ್ಯ ಹೆಕ್ಟರ್ ಕಾರು ಆವೃತ್ತಿಯನ್ನು ಮಾರಾಟ ಮಾಡುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯಾದ ಜೆಡ್ಎಸ್ ಇವಿಯನ್ನು ಬಿಡುಗಡೆ ಮಾಡುತ್ತಿದೆ. ತದನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇನ್ನು ಮೂರು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಉತ್ಪನ್ನಗಳಿಂದಾಗಿ ಉತ್ಪಾದನಾ ಘಟಕದ ವಿಸ್ತರಣೆಯನ್ನು ಮಾಡಲೇಬೇಕಿದೆ.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

2ನೇ ಕಾರು ಉತ್ಪಾದನಾ ಘಟಕ ನಿರ್ಮಾಣದ ಬಗ್ಗೆ ಈಗಾಗಲೇ ನೀಲನಕ್ಷೆ ಸಿದ್ದಪಡಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಪುಣೆ ಅಥವಾ ತೆಲಂಗಾಣದಲ್ಲಿ ಹೊಸ ಘಟಕ ಸ್ಥಾಪನೆಗೆ ಮುಂದಾಗಿದ್ದು, ಶೀಘ್ರದಲ್ಲೇ ಸ್ಥಳ ಅಂತಿಮಗೊಳಿಸಿದೆ.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಒಂದು ವೇಳೆ ಪುಣೆ ಆಯ್ಕೆ ಮಾಡಿದ್ದಲ್ಲಿ ಭಾರತದಿಂದ ನಿರ್ಗಮಿಸಿರುವ ಜನರಲ್ ಮೋಟಾರ್ ಸಂಸ್ಥೆಯ ಹಳೆಯ ಕಾರು ಉತ್ಪಾದನಾ ಘಟಕವನ್ನೇ ಸ್ವಾಧೀನ ಪಡಿಸಿಕೊಳ್ಳುವ ಸಾಧ್ಯತೆಗಳಿದ್ದು, ತೆಲಂಗಾಣ ಆಯ್ಕೆ ಮಾಡಿದ್ದಲ್ಲಿ ಹೊಸ ಉತ್ಪಾದನಾ ಘಟಕ ನಿರ್ಮಾಣಕ್ಕೆ ತುಸು ಸಮಯ ತೆಗೆದುಕೊಳ್ಳಲಿದೆ ಎನ್ನಬಹುದು.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಈ ನಡುವೆ ಹೊಸ ಕಾರು ಉತ್ಪಾದನಾ ಘಟಕವನ್ನು ನಮ್ಮಲ್ಲೇ ನಿರ್ಮಾಣ ಮಾಡಿ ಎಂದು ಆಹ್ವಾನಿಸಿರುವ ತೆಲಂಗಾಣ ಸರ್ಕಾರವು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದು, ಇದಕ್ಕೆ ಎಂಜಿ ಒಪ್ಪಿಗೆ ಸೂಚಿಸಿದ್ದೆ ಆದಲ್ಲಿ ಕಿಯಾ ಸಂಸ್ಥೆಯು ಆಂಧ್ರದಲ್ಲಿ ಸದ್ದುಮಾಡಿರುವ ರೀತಿಯಲ್ಲಿ ಎಂಜಿ ಸಂಸ್ಥೆಯು ತೆಲಂಗಾಣದಲ್ಲಿ ತಲೆಎತ್ತಲಿದೆ ಎನ್ನಬಹುದು.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಈ ಮೂಲಕ ಕಾರು ಉತ್ಪಾದನಾ ಸಾಮರ್ಥ್ಯವನ್ನು 1 ಲಕ್ಷಕ್ಕೆ ಏರಿಸಲು ನಿರ್ಧರಿಸಿರುವ ಎಂಜಿ ಸಂಸ್ಥೆಯು ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಸಹ ಮಾಡಲಿದ್ದು, ಮುಂಬರುವ ದಿನಗಳಲ್ಲಿ ಹಲವು ಹೊಸ ಕಾರುಗಳು ರಸ್ತೆಗಿಳಿಯಲಿವೆ.

ಎಂಜಿ ಮೋಟಾರ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಶೀಘ್ರದಲ್ಲೇ ಎರಡನೇ ಕಾರು ಉತ್ಪಾದನಾ ಘಟಕ ಶುರು..!

ಒಟ್ಟಿನಲ್ಲಿ ಹೊಸ ಕಾರು ಉತ್ಪಾದನೆ ಮೂಲಕ ಸದ್ಯ ಮಾರುಕಟ್ಟೆಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಎಂಜಿ ಸಂಸ್ಥೆಯು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ದರ್ಜೆಯ ಕಾರುಗಳನ್ನು ಪರಿಚಯಿಸಿ ಗ್ರಾಹಕರ ವಿಶ್ವಾಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸಿಯಾಗಿದ್ದು, ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮೇಲೆ ಹೆಚ್ಚು ನೀರಿಕ್ಷೆ ಇಟ್ಟುಕೊಂಡಿದೆ.

Most Read Articles

Kannada
English summary
MG Motor planning second plant in india details, Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X