ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಎಂಜಿ ಮೋಟಾರ್ ಕಂಪನಿಯು ತನ್ನ ಹೊಸ ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯ ಮೂಲಕ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ಕಾರು ಬಿಡುಗಡೆಯಾದ ಮೊದಲ ತಿಂಗಳಿನಲ್ಲಿ ಅತ್ಯುತ್ತಮ ಬೇಡಿಕೆ ದಾಖಲಿಸಿದೆ.

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಅಕ್ಟೋಬರ್ ಮಧ್ಯಂತರದಲ್ಲಿ ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದ ಎಂಜಿ ಮೋಟಾರ್ ಕಂಪನಿಯು ನವೆಂಬರ್ ಮೊದಲ ವಾರದಲ್ಲಿ ವಿತರಣೆಯನ್ನು ಆರಂಭಿಸಿತ್ತು. ಹೊಸ ಕಾರಿಗೆ ಈಗಾಗಲೇ 3 ಸಾವಿರಕ್ಕೂ ಅಧಿಕ ಬುಕ್ಕಿಂಗ್ ದಾಖಲಾಗಿದ್ದು, ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ನವೆಂಬರ್ ತಿಂಗಳಿನಲ್ಲಿ ಒಟ್ಟು 627 ಯುನಿಟ್‌ಗಳನ್ನು ದೇಶದ ಪ್ರಮುಖ ರಾಜ್ಯಗಳಲ್ಲಿ ವಿತರಣೆ ಮಾಡಲಾಗಿದೆ.

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಫುಲ್ ಸೈಜ್ ಎಸ್‌ಯುವಿ ವೈಶಿಷ್ಟ್ಯತೆಯೊಂದಿಗೆ ಹಲವಾರು ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರುವ ಹೊಸ ಗ್ಲೊಸ್ಟರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.35.58 ಲಕ್ಷ ಬೆಲೆ ಪಡೆದುಕೊಂಡಿದೆ.

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ನಾಲ್ಕು ವೆರಿಯೆಂಟ್ ಹೊಂದಿರುವ ಗ್ಲೊಸ್ಟರ್ ಕಾರು ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ವೀಲ್ಹ್ ಬೆಸ್ ಹೊಂದಿದೆ.

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಹೊಸ ಗ್ಲೊಸ್ಟರ್ ಎಸ್‌ಯುವಿಯು ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ (ಎಪಿಎ), ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಫಾರ್ವರ್ಡ್ ಕೂಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಸೌಲಭ್ಯ ಹೊಂದಿದ್ದು, ಇವುಗಳ ಹೊರತಾಗಿಯೂ ಈ ಎಸ್‌ಯುವಿಯಲ್ಲಿ ಸಾಕಷ್ಟು ಪ್ರೀಮಿಯಂ ಫೀಚರ್ಸ್ ಹಾಗೂ ಎಕ್ವಿಪ್‌ಮೆಂಟ್‌ಗಳಿವೆ.

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಹೊರಭಾಗದಲ್ಲಿ ಎಲ್‌ಇಡಿ ಲೈಟಿಂಗ್, ಆಟೋ ಲೆವೆಲಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು, ಎಂಜಿ ಲೋಗೋ ಹೊಂದಿರುವ ಒಆರ್‌ವಿಎಂ, ಪನೊರಮಿಕ್ ಸನ್‌ರೂಫ್, 19 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ಫ್ರಂಟ್-ರಿಯರ್ ಫಾಗ್ ಲ್ಯಾಂಪ್‌, ಸ್ಟೀರಿಂಗ್-ಅಸಿಸ್ಟ್ ಕಾರ್ನರಿಂಗ್ ಲ್ಯಾಂಪ್‌, ಡ್ಯುಯಲ್-ಬ್ಯಾರೆಲ್ ಟ್ವಿನ್ ಕ್ರೋಮ್ ಎಕ್ಸಾಸ್ಟ್ ಗಳಿವೆ.

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಒಳಭಾಗದಲ್ಲಿ ಲೆದರ್ ಸೀಟ್, ಎರಡನೇ ಸಾಲಿನಲ್ಲಿ ಪರ್ಸನಲ್ ಕ್ಯಾಪ್ಟನ್ ಸೀಟ್, ಆ್ಯಪಲ್ ಕಾರ್ ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಎಂಜಿ ಕಂಪನಿಯ ಹೊಸ ಐ-ಸ್ಮಾರ್ಟ್ ಕನೆಕ್ಟೆಡ್ ಟೆಕ್ನಾಲಜಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, 8 ಇಂಚಿನ ಎಂಐಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ಯಾಡಲ್ ಶಿಫ್ಟರ್‌, ತ್ರೀ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರನ್ನಿಂಗ್ ಟೇಲ್‌ಗೇಟ್, ಹಿಟ್/ಕೂಲ್ ಮಾಡಬಹುದಾದ ಮುಂಭಾಗದ ಆಸನಗಳು, ವೈರ್‌ಲೆಸ್ ಚಾರ್ಜಿಂಗ್, ಮಲ್ಟಿ-ವೇ ಎಲೆಕ್ಟ್ರಾನಿಕ್ ಅಡ್ಜೆಸ್ಟ್ ಫ್ರಂಟ್ ಸೀಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಹಾಗೆಯೇ ಐ-ಸ್ಮಾರ್ಟ್ ತಂತ್ರಜ್ಞಾನವು ಚಾಲಕನ ಸ್ಮಾರ್ಟ್‌ಫೋನ್ ಮೂಲಕ ಅಪ್ಲಿಕೇಶನ್ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇದು ವಾಹನದ ಸ್ಥಿತಿ, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋಫೆನ್ಸಿಂಗ್, ಕಾರಿನ ವಿವಿಧ ಫೀಚರ್ ಗಳ ರಿಮೋಟ್ ಫಂಕ್ಷನ್ ಸೇರಿದಂತೆ ಒಟ್ಟು 57 ಹೆಚ್ಚುವರಿ ಫೀಚರ್ ಗಳನ್ನು ನೀಡುತ್ತದೆ.

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಈ ಮೂಲಕ ಕಾರು ಪ್ರಯಾಣವನ್ನು ಆರಾಮದಾಯಕ ಮತ್ತು ಸುರಕ್ಷಿತವಾಗಿಸುವ ಹೊಸ ಗ್ಲೊಸ್ಟರ್ ಎಸ್‌ಯುವಿ ಕಾರು 4,985-ಎಂ ಉದ್ದ, 1,926-ಎಂಎಂ ಅಗಲ, 1,867-ಎಂಎಂ ಎತ್ತರ ಹಾಗೂ 2,950-ಎಂಎಂ ವ್ಹೀಲ್ ಬೇಸ್ ಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮೊದಲ ತಿಂಗಳ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆರಂಭಿಕ ಮಾದರಿಯಲ್ಲಿರುವ 2.0-ಲೀಟರ್ ಸಿಂಗಲ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 160-ಬಿಹೆಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ, ಟಾಪ್-ಎಂಡ್ ಮಾದರಿಯಲ್ಲಿರುವ 2.0-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಮಾದರಿಯು 216-ಬಿಹೆಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
MG Sold 627 Units Of Gloster Premium SUV In November 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X