Just In
- 15 min ago ಬಡ ಪೆಟ್ರೋಲ್ ಬಂಕ್ ನೌಕರನಿಗೆ TVS ಬೈಕ್ ಗಿಫ್ಟ್ ಕೊಟ್ಟ ಟಿವಿ ಸ್ಟಾರ್: ಸಂತೋಷಕ್ಕೆ ಕಣ್ಣುಗಳು ತುಂಬಿ ಬಂದವು!
- 1 hr ago ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಖರೀದಿಸಲು ಉತ್ತಮ ಸಮಯ: ಏಪ್ರಿಲ್ 1 ರಿಂದ ಬೆಲೆ ಏರಿಕೆ
- 2 hrs ago 400 ಕಿ.ಮೀ ರೇಂಜ್, ಆಕರ್ಷಕ ವಿನ್ಯಾಸದ ಸ್ಕೋಡಾ ಎಪಿಕ್ ಎಲೆಕ್ಟ್ರಿಕ್ ಎಸ್ಯುವಿಯ ವಿಶೇಷತೆಗಳು
- 2 hrs ago Honda Cars: ಹೋಂಡಾ ಕಾರುಗಳಿಗೆ ಬೆಲೆ ಏರಿಕೆ ಬಿಸಿ... ಇನ್ಮುಂದೆ ಈ ಕಾರುಗಳ ಬೆಲೆಯೆಷ್ಟು ಗೊತ್ತಾ?
Don't Miss!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- News ಕಾಂಗ್ರೆಸ್ನಿಂದ ಆಫರ್ ಬಂದಿದ್ಯಾ..?: ಬಿಜೆಪಿ ಅಭ್ಯರ್ಥಿ ಮುಂದೆಯೇ ಪ್ರತಾಪ್ ಸಿಂಹ ಹೇಳಿದ್ದೇನು..?
- Sports WPL 2024: ಆರ್ಸಿಬಿ ಗೆಲುವಿಗೆ ವಿಜಯ್ ಮಲ್ಯ ಖುಷ್; ಪುರುಷರ ತಂಡಕ್ಕೆ ಬೇಡಿಕೆ ಇಟ್ಟ ಮದ್ಯದ ದೊರೆ
- Technology ಶೀಘ್ರದಲ್ಲೇ ಎಂಟ್ರಿ ಕೊಡಲಿದೆ ಲೆನೊವೊ ಟ್ಯಾಬ್ M11 ಡಿವೈಸ್!..ವಾವ್ ಎನಿಸುವ ಫೀಚರ್ಸ್!
- Lifestyle ಕಲ್ಕಿ ಅವತಾರದ ಕುರಿತು ನಿಮಗೆಷ್ಟು ಗೊತ್ತು? ಅಧರ್ಮ ನಾಶಕ್ಕೆ ವಿಷ್ಣು ಅವತಾರದ ಹಿನ್ನಲೆ ಏನು?
- Movies ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿನೂತನ ಬಗೆಯ ಸ್ಯಾನಿಟೈಜೆಷನ್ ಯೋಜನೆಯನ್ನಾರಂಭಿಸಿದ ಎಂಜಿ ಮೋಟಾರ್
ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಹೊಸ ಸ್ಯಾನಿಟೈಜೆಷನ್ ಯೋಜನೆಯನ್ನು ಆರಂಭಿಸಿದೆ. ಕಂಪನಿಯ ಈ ಯೋಜನೆಗೆ ಎಂಜಿ ಸೇವಾ-ಪೇರೆಂಟ್ಸ್ ಫಸ್ಟ್ ಎಂಬ ಹೆಸರನ್ನಿಡಲಾಗಿದೆ. ಈ ಯೋಜನೆಯಡಿಯಲ್ಲಿ ಕಂಪನಿಯು ತನ್ನ ಗ್ರಾಹಕರ ಪೋಷಕರ ಕಾರುಗಳನ್ನು ಸ್ವಚ್ವಗೊಳಿಸಲಿದೆ.
ಗಮನಿಸಬೇಕಾದ ಸಂಗತಿಯೆಂದರೆ ಈ ಸ್ಯಾನಿಟೈಜೆಷನ್ ಕಾರ್ಯವನ್ನು ಗ್ರಾಹಕರ ಮನೆಯಲ್ಲಿಯೇ ಮಾಡುತ್ತದೆ. ಈ ಸ್ಯಾನಿಟೈಜೆಷನ್ ಕಾರ್ಯಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ಈ ಸೇವೆಯನ್ನು ದೇಶಾದ್ಯಂತ ಇರುವ ಎಂಜಿ ಮೋಟಾರ್ ಕಂಪನಿಯ ಮಾರಾಟಗಾರರಿಂದ ಪಡೆಯಬಹುದು.
ಈ ಸ್ಯಾನಿಟೈಜೆಷನ್ ಕಾರ್ಯದಲ್ಲಿ ಕಾರಿನಲ್ಲಿರುವ ಸೀಟುಗಳಂತಹ ಹೈ ಟಚ್ ಪಾಯಿಂಟ್ಗಳನ್ನು ಸ್ವಚ್ವಗೊಳಿಸಲಾಗುವುದು. ಜೊತೆಗೆ ಡ್ರೈ ವಾಶ್ ಸಹ ಮಾಡಲಾಗುವುದು. 2020ರ ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಈ ಸೇವೆಯನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.
MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು
ಎಂಜಿ ಮೋಟಾರ್ ಕಂಪನಿಯ ಎಲ್ಲಾ ಗ್ರಾಹಕರಿಗೆ ರಿಜಿಸ್ಟರ್ ಇಮೇಲ್ ಐಡಿ ಮೂಲಕ ಕೋಡ್ ಕಳುಹಿಸಲಾಗುವುದು ಎಂದು ಕಂಪನಿ ಹೇಳಿದೆ. ಗ್ರಾಹಕರು ಈ ಕೋಡ್ ಅನ್ನು ಮಾರಾಟಗಾರರೊಂದಿಗೆ ಶೇರ್ ಮಾಡಿಕೊಂಡ ನಂತರ ಈ ಸೇವೆಯನ್ನು ಪಡೆಯಬಹುದು.
ಈ ಯೋಜನೆಯಡಿಯಲ್ಲಿ ಕೇವಲ ಒಂದು ಕಾರನ್ನು ಮಾತ್ರ ಸ್ವಚ್ವಗೊಳಿಸಲಾಗುವುದು ಎಂದು ಎಂಜಿ ಮೋಟಾರ್ ಸ್ಪಷ್ಟ ಪಡಿಸಿದೆ. ಇದೇ ವೇಳೆ ಎಂಜಿ ಮೋಟಾರ್ ಕಂಪನಿಯು ಜುಲೈ 13ರಂದು ಎಂಜಿ ಹೆಕ್ಟರ್ ಪ್ಲಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದೆಂದು ಹೇಳಿದೆ.
MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ
ಎಂಜಿ ಹೆಕ್ಟರ್ ಪ್ಲಸ್ ಕಾರನ್ನು ಹೆಕ್ಟರ್ ಪ್ಲಸ್ ಸೂಪರ್, ಸ್ಮಾರ್ಟ್ ಹಾಗೂ ಶಾರ್ಪ್ ಎಂಬ ಮೂರು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಹೆಕ್ಟರ್ ಪ್ಲಸ್ ಎಂಜಿ ಮೋಟಾರ್ ಕಂಪನಿಯ 6 ಸೀಟುಗಳ ವಾಹನವಾಗಿದೆ. ಈ ಕಾರಿನ ಬುಕ್ಕಿಂಗ್ ಗಳನ್ನು ಈಗಾಗಲೇ ಆರಂಭಿಸಲಾಗಿದೆ.
ಎಂಜಿ ಹೆಕ್ಟರ್ ಪ್ಲಸ್ ಕಾರನ್ನು ಕಂಪನಿಯ ವೆಬ್ಸೈಟ್ ಅಥವಾ ಡೀಲರ್ ಗಳಲ್ಲಿ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಬಹುದು. ಎಂಜಿ ಹೆಕ್ಟರ್ ಪ್ಲಸ್ ಅನ್ನು ಪೆಟ್ರೋಲ್, ಡೀಸೆಲ್ ಹಾಗೂ ಹೈಬ್ರಿಡ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾಗುವುದು.