ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಎಂಜಿ ಮೋಟಾರ್ಸ್ ಕಂಫನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೆಕ್ಟರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಮೂಲಕ ಇತ್ತೀಚೆಗೆ ಲಗ್ಗೆ ಇಟ್ಟ ಎಂಜಿ ಮೋಟಾರ್ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಸುವಲ್ಲಿ ಯಶಸ್ವಿಯಾಗಿದೆ.

ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಇನ್ನು ನೆರೆಯ ಪಾಕಿಸ್ತಾನದಲ್ಲಿ ಎಂಜಿ ಮೋಟಾರ್ಸ್ ಕಂಪನಿಯು ಪಾರುಪತ್ಯ ಸಾಧಿಸಲು ಸಜ್ಜಾಗಿದೆ. ಪಾಕಿಸ್ಥಾನದಲ್ಲಿ ಎಂಜಿ ಕಂಪನಿಯ ಹೆಚ್ಎಸ್ ಎಸ್‌ಯುವಿಗಾಗಿ ಈಗಾಗಲೇ 10,000 ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ. ಈ ಹೊಸ ಎಂಜಿ-ಹೆಚ್ಎಸ್ ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿದೆ. ಪಾಕಿಸ್ತಾನದಲ್ಲಿ ಈ ಹೊಸ ಎಂಜಿ-ಹೆಚ್ಎಸ್ ಎಸ್‍ಯುವಿಯು ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಪಾಕಿಸ್ತಾನದ ಸಮಾ ವರದಿಯ ಪ್ರಕಾರ, ಎಂಜಿ ಮೋಟಾರ್ಸ್ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಹಲವಾರು ಎಸ್‍ಯುವಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಸಜ್ಜಾಗುತ್ತಿದೆ. ಇವುಗಳಲ್ಲಿ ಎಂಜಿ-ಎಚ್‌ಎಸ್, ಎಂಜಿ- ಝಡ್ಎಸ್ 1.5 ಮತ್ತು ಎಂಜಿ ಝಡ್ಎಸ್ ಇವಿ ಸೇರಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಎಂಜಿ ಮೋಟಾರ್ ಜಾಗತಿಕ ಉಪಸ್ಥಿತಿಯನ್ನು ಪಾಕಿಸ್ತಾನಕ್ಕೂ ವಿಸ್ತರಿಸಲು ಬಯಸುತ್ತಾರೆ ಎಂದು ಜಾವೇದ್ ಅಫ್ರಿದಿ ಹೇಳಿದ್ದಾರೆ. ಪಾಕಿಸ್ತಾನದ ಜೆಡಬ್ಲ್ಯೂ-ಸೆಜ್ ಮತ್ತು ಎಂಜಿ ಮೋಟಾರ್ಸ್ ಹೊಂದಿರುವ ಚೀನಾದ ಎಸ್‌ಐಸಿ ಜಂಟಿ ಸಹಭಾಗಿತ್ವದಲ್ಲಿ ಅಫ್ರಿದಿ ಪಾಲುದಾರರಾಗಿದ್ದಾರೆ.

ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಎಂಜಿ ಯೋಜನೆಗಳು ದೇಶದ ವಾಹನ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ಗಳನ್ನು ಉಂಟುಮಾಡಬಹುದು. "ಸ್ಪೋರ್ಟಿ ಎಸ್‌ಯುವಿಯನ್ನು ಉನ್ನತ-ತಂತ್ರಜ್ಞಾನದೊಂದಿಗೆ ಒದಗಿಸುತ್ತಿದ್ದು ಅದು ಪಾಕಿಸ್ತಾನದ ವಾಹನ ಮಾರುಕಟ್ಟೆಯನ್ನು ಪರಿವರ್ತಿಸುತ್ತದೆ" ಎಂದು ಎಂದು ಅಫ್ರಿದಿ ಹೇಳಿದರು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಎಂಜಿ ಮೋಟಾರ್ ಕಂಪನಿಯು ಪಾಕಿಸ್ತಾನದಲ್ಲಿ ಎಸ್‍ಯುವಿಗಳ ಜೊತೆಗೆ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಸೇರಿದಂತೆ ಹೊಸ ಮಾದರಿಗಳನ್ನು 2021ರಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಮೂಲಕದ ಎಂಜಿ ಮೋಟಾರ್ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸಜ್ಜಾಗಿತ್ತಿದೆ.

ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಸಮಾ ವರದಿ ಪ್ರಕಾರ, ವಿಶ್ಲೇಷಕರು ಜಪಾನೀಸ್ ಮತ್ತು ಕೊರಿಯನ್ ಕಾರುಗಳು ಯಾವಾಗಲೂ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಟವಾಗುತ್ತಿದ್ದರೂ, ಯುರೋಪಿಯನ್ ಕಾರುಗಳ ಜನಪ್ರಿಯತೆಯು ಹೆಚ್ಚಾಗುತ್ತದೆ ಎಂದು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಜನರು ಸುಮಾರು 1000 ಯುನಿಟ್ ಕೊರಿಯನ್ ಬ್ರ್ಯಾಂಡ್‌ಗಳಾದ ಸ್ಪೋರ್ಟೇಜ್ ಮತ್ತು ಟ್ಯೂಸಾನ್ ಅನ್ನು ಖರೀದಿಸುತ್ತಿದ್ದಾರೆ. ಅವರು ಎಂಜಿ ಎಸ್‍ಯುವಿಯನ್ನು ಇದೇ ಬೆಲೆಗೆ ಖರೀದಿಸುತ್ತಿರುವುದು ಆಶ್ಚರ್ಯವೇನಿಲ್ಲ" ಎಂದು ಶೋಧ ವಿಶ್ಲೇಷಕ ಅಹ್ಮದ್ ಲಖಾನಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಹೊಸ ಎಂಜಿ ಎಸ್‍ಯುವಿ

ಪಾಕಿಸ್ತಾನದಲ್ಲಿ ಹೊಸ ಎಂಜಿ-ಹೆಚ್‌ಎಸ್ ಎಸ್‌ಯುವಿಯ ಬೆಲೆಯು ಸುಮಾರು ರೂ.55 ಲಕ್ಷಗಳಾಗಿದೆ. ಈ ಹೊಸ ಎಂಜಿ-ಹೆಚ್‌ಎಸ್ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಕಿಯಾ ಸ್ಪೋರ್ಟೇಜ್ ಮತ್ತು ಹ್ಯುಂಡೈ ಟ್ಯೂಸಾನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
MG Motors Looks At Creating In Roads In Pakistan. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X